Advertisement

ಮುಂಬೈ: ಕಟ್ಟಡ ಕುಸಿದು 22 ಸಾವು

07:45 AM Sep 01, 2017 | |

ಮುಂಬೈ: ಮಹಾ ಮಳೆಯ ಅಬ್ಬರವನ್ನು ಕಂಡ ವಾಣಿಜ್ಯ ನಗರಿ ಮತ್ತೂಂದು ದುರಂತಕ್ಕೆ ಸಾಕ್ಷಿಯಾಗಿದೆ. ಗುರುವಾರ ದಕ್ಷಿಣ ಮುಂಬಯಿನ ಭೆಂಡಿ ಬಜಾರ್‌ನಲ್ಲಿ 117 ವರ್ಷಗಳಷ್ಟು ಹಳೆಯ 5 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು, 22 ಮಂದಿ ಸಾವಿಗೀಡಾಗಿದ್ದಾರೆ.

Advertisement

ಘಟನೆಯಲ್ಲಿ 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನೂ 30 ಮಂದಿ ಅವಶೇಷಗಳಡಿ ಸಿಲುಕಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿಯಿದೆ. ಶಿಥಿಲಾವಸ್ಥೆಯಲ್ಲಿದ್ದ ಹುಸೈನಿ ಕಟ್ಟಡವು ಮುಸ್ಲಿಂ ಬಾಹುಳ್ಯವಿರುವ ಪಕೊ¾àಡಿಯಾ ಸ್ಟ್ರೀಟ್‌ನಲ್ಲಿದ್ದು, ಇದರಲ್ಲಿ ಕೆಳ ಮಧ್ಯಮ ವರ್ಗದ 9 ಕುಟುಂಬಗಳು ವಾಸವಾಗಿದ್ದವು. ನೆಲಮಾಳಿಗೆಯಲ್ಲಿ 6 ಗೋದಾಮುಗಳಿದ್ದವು. ಇದೇ ಕಟ್ಟಡದಲ್ಲಿ ಪ್ಲೇ ಸ್ಕೂಲ್‌ ಇತ್ತು. ಆದರೆ, ಅದೃಷ್ಟವಶಾತ್‌ ಮಕ್ಕಳು ಪ್ಲೇಸ್ಕೂಲ್‌ಗೆ ಆಗಮಿಸುವ ಕೆಲವೇ ಕ್ಷಣಗಳ ಮೊದಲು ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗ್ಗೆ 8.30ರ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಆದರೆ, ಕಳೆದ 4 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿಯೇ ಈ ಕಟ್ಟಡವು ಕುಸಿದು ಬಿತ್ತೇ ಎಂಬುದು ಇನ್ನೂ ದೃಢಪಟ್ಟಿಲ್ಲ. 

ರಕ್ಷಣಾ ಕಾರ್ಯಾಚರಣೆ ವೇಳೆ ಒಬ್ಬ ಎನ್‌ಡಿಆರ್‌ಎಫ್ ಯೋಧ ಹಾಗೂ ಅಗ್ನಿಶಾಮಕ ದಳದ ಐವರು ಸಿಬಂದಿಯೂ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸಿಎಂ ಫ‌ಡ್ನವೀಸ್‌ ಭೇಟಿ: ಘಟನಾ ಸ್ಥಳಕ್ಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ ಅವರು ಭೇಟಿ ನೀಡಿದ್ದು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜತೆಗೆ, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣ ರಾಜ್ಯ ಸರಕಾರವೇ ಭರಿಸಲಿದೆ ಎಂದಿದ್ದಾರೆ. ಇದೇ ವೇಳೆ, ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ ಹೇಳಿದ್ದಾರೆ. ಮಹಾರಾಷ್ಟ್ರ ಗೃಹ ಮತ್ತು ವಲಯಾಭಿವೃದ್ಧಿ ಪ್ರಾಧಿಕಾರವು ಈ ಕಟ್ಟಡವನ್ನು “ಅಸುರಕ್ಷಿತ’ ಎಂದು ಘೋಷಿಸಿದ್ದರೂ, 40ಕ್ಕೂ ಹೆಚ್ಚು ಮಂದಿ ಇಲ್ಲಿ ವಾಸಿಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

Advertisement

ಇದು ಒಂದು ತಿಂಗಳ ಅವಧಿಯಲ್ಲಿ ನಡೆದ 2ನೇ ಅವಘಡವಾಗಿದೆ. ಜು.25ರಂದು ಘಾಟ್ಕೊàಪರ್‌ನಲ್ಲಿ ವಸತಿ ಸಂಕೀರ್ಣವೊಂದು ಕುಸಿದು ಬಿದ್ದು, 17 ಮಂದಿ ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next