Advertisement

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

01:02 AM May 02, 2024 | Team Udayavani |

ಲಕ್ನೋ: ಲಕ್ನೋ ಸೂಪರ್‌ ಜೈಂಟ್ಸ್‌ ಎದುರಿನ ಮಂಗಳವಾರದ ಪಂದ್ಯದ ವೇಳೆ ಓವರ್‌ ರೇಟ್‌ ಕಾಯ್ದುಕೊಳ್ಳಲು ವಿಫ‌ಲರಾದ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಮತ್ತು ಎಲ್ಲ ಆಟಗಾರರಿಗೆ ಭಾರೀ ದಂಡ ವಿಧಿಸಲಾಗಿದೆ.

Advertisement

ಜತೆಗೆ ಹಾರ್ದಿಕ್‌ ಪಾಂಡ್ಯ ಅವರಿಗೆ ನಿಷೇಧ ಭೀತಿಯೂ ಎದುರಾಗಿದೆ.

ಹಾರ್ದಿಕ್‌ ಪಾಂಡ್ಯ ಈ ಸೀಸನ್‌ನಲ್ಲಿ ಓವರ್‌ ರೇಟ್‌ ಕಾಯ್ದುಕೊಳ್ಳಲು ವಿಫ‌ಲರಾದ 2ನೇ ನಿದರ್ಶನ ಇದಾಗಿದೆ. ಹೀಗಾಗಿ ಅವರಿಗೆ 24 ಲಕ್ಷ ರೂ. ದಂಡ ವಿಧಿಸಲಾಯಿತು. ಇನ್ನೊಂದು ಸಲ ಇದನ್ನು ಪುನರಾವರ್ತಿಸಿದ್ದೇ ಆದಲ್ಲಿ ಪಾಂಡ್ಯ ಅವರಿಗೆ 30 ಲಕ್ಷ ರೂ. ದಂಡದ ಜತೆಗೆ ಒಂದು ಪಂದ್ಯದ ನಿಷೇಧ ಹೇರಲಾಗುವುದು.

ಇಂಪ್ಯಾಕ್ಟ್ ಪ್ಲೇಯರ್‌ ಸೇರಿದಂತೆ ಮುಂಬೈ ತಂಡದ ಇತರೆಲ್ಲ ಆಟಗಾರರಿಗೆ ತಲಾ 6 ಲಕ್ಷ ರೂ. ಅಥವಾ ಪಂದ್ಯದ ಸಂಭಾವನೆಯ ಶೇ. 25ರಷ್ಟು ದಂಡ ವಿಧಿಸಲಾಗಿದೆ. ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸಬೇಕಾಗುತ್ತದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next