Advertisement

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

08:59 PM Apr 28, 2024 | Team Udayavani |

ಅಹಮದಾಬಾದ್: ಮಧ್ಯಮ ಓವರ್‌ಗಳಲ್ಲಿ ಸ್ಪಿನ್ ಎದುರು ಸ್ಟ್ರೈಕ್ ರೇಟ್‌ನ ನಿರಂತರ ಚರ್ಚೆ ನಡೆಯುತ್ತಿರುವ ವೇಳೆ, ಟೀಕೆಗಳ ಕುರಿತು ವಿರಾಟ್ ಕೊಹ್ಲಿ ಭಾನುವಾರ ಪ್ರತಿಕ್ರಿಯೆ ನೀಡಿದ್ದು,’ನನ್ನ ಆಟದ ವಿಧಾನವನ್ನು ಪ್ರಶ್ನಿಸುವವರಿಗಿಂತ ನನಗೆ ನನ್ನ ಆಟ ಚೆನ್ನಾಗಿ ತಿಳಿದಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿದ ಬಳಿಕ ಮಾತನಾಡಿದರು. ಕೊಹ್ಲಿ 44 ಎಸೆತಗಳಲ್ಲಿ 70 ರನ್ ಗಳಿಸಿದ್ದರು.

“ನೀವು 15 ವರ್ಷಗಳ ಕಾಲ ಇದನ್ನು ಏಕೆ ಮಾಡುತ್ತೀರಿ ಎಂಬುದಕ್ಕೆ ಒಂದು ಕಾರಣವಿದೆ, ನನಗಿದು ನನ್ನ ಕೆಲಸ ಮಾಡುವುದಾಗಿದೆ. ಜನರು ಏನು ಬೇಕಾದರೂ ಮಾತನಾಡಬಹುದು, ಅವರು ನನ್ನ ಸ್ಟ್ರೈಕ್ ರೇಟ್ ಮೇಲೆರಲು ಸಾಧ್ಯವಾಗದ ಬಗ್ಗೆ ಮಾತನಾಡಬಹುದು ಮತ್ತು ನಾನು ಸ್ಪಿನ್ ಚೆನ್ನಾಗಿ ಆಡುತ್ತಿಲ್ಲ ಅನ್ನಬಹುದು. ಆದರೆ ಆಟದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ’ ಎಂದು ಪಂದ್ಯದ ನಂತರ ಕೊಹ್ಲಿ ತಿರುಗೇಟು ನೀಡಿದ್ದಾರೆ.

“ನಾವು ನಮ್ಮ ಆತ್ಮಗೌರವಕ್ಕಾಗಿ ಉತ್ತಮವಾಗಿ ಆಡಲು ಬಯಸಿದ್ದೇವೆ, ನಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗಾಗಿ ನಾವು ಆಡಲು ಬಯಸುತ್ತೇವೆ, ನಾವು ಅಗತ್ಯವಿರುವ ಮಾನದಂಡಗಳಿಗೆ ಅನುಗುಣವಾಗಿ ಟೂರ್ನಮೆಂಟ್‌ನಲ್ಲಿ ಇದುವರೆಗೆ ಆಡಿಲ್ಲ ಎಂದು ನಮಗೆ ತಿಳಿದಿದೆ ನಾವು ಬಹಳಷ್ಟು ಮಾಡಬಹುದು ಎಂದು ನಮಗೆ ತಿಳಿದಿದೆ. ಅದನ್ನು ನಾವು ಪ್ರಯತ್ನಿಸುತ್ತೇವೆ ಮತ್ತು ಮಾಡುತ್ತೇವೆ ಎಂದು ವಿಶ್ವಾಸದ ನುಡಿಗಳನ್ನಾಡಿದರು.

ವಿಲ್ ಜಾಕ್ಸ್ ಅತ್ಯದ್ಭುತ ಶತಕದ ಬಗ್ಗೆ ಮಾತನಾಡಿದ ಕೊಹ್ಲಿ “ಅದ್ಭುತ, ಆರಂಭದಲ್ಲಿ ಅವರು ಬ್ಯಾಟಿಂಗ್‌ಗೆ ಬಂದಾಗ, ಅವರು ಬಯಸಿದಂತೆ ಚೆಂಡನ್ನು ಹೊಡೆಯಲು ಸಾಧ್ಯವಾಗಲಿಲ್ಲ ಎಂದು ಅವರು ಬೇಸರಗೊಂಡಿದ್ದರು. ಅವರು ಎಷ್ಟು ಸ್ಫೋಟಕ ಆಟಗಾರನಾಗಬಹುದು ಎಂದು ನಮಗೆ ತಿಳಿದಿದೆ. ಮೋಹಿತ್‌ ಎಸೆದ ಓವರ್ ಗೇಮ್ ಚೇಂಜರ್ ಆಗಿತ್ತು, ನಾನು ಎದುರಿದ್ದು ಅವರ ಹೊಡೆತಗಳನ್ನು ನೋಡಲು ಸಂತೋಷವಾಯಿತು” ಎಂದರು.

Advertisement

“ನಾವು 19 ಓವರ್‌ಗಳಲ್ಲಿ ಗೆಲ್ಲುತ್ತೇವೆ ಎಂದು ನಾನು ಭಾವಿಸಿದ್ದೆ, ಆದರೆ ಅದನ್ನು 16 ರಲ್ಲಿ ಮಾಡುವುದು ಸಂಪೂರ್ಣವಾಗಿ ಅದ್ಭುತವಾಗಿದೆ’ ಎಂದರು.

ಜಾಕ್ಸ್, ಕೊಹ್ಲಿ ಜತೆ ಬ್ಯಾಟಿಂಗ್ ಮಾಡಿದ್ದು ಆತ್ಮವಿಶ್ವಾಸ ಮೂಡಿಸಿದೆ ಎಂದು ಹೇಳಿದರು.

ಸುನಿಲ್ ಗವಾಸ್ಕರ್ ಅವರಂತ ಹಿರಿಯರು ಗುರುವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ 43 ಎಸೆತಗಳಲ್ಲಿ 51 ರನ್ ಮಾಡಿದಾಗ ಪ್ರಶ್ನೆ ಮಾಡಿದ್ದರು. ಇನ್ನೊಂದು ಬದಿಯಲ್ಲಿದ್ದ ರಜತ್ ಪಾಟಿದಾರ್ ಅವರು ಆಕ್ರಮಣಕಾರಿ ಆಟವಾಡಿ 20 ಎಸೆತಗಳಲ್ಲಿ 50 ರನ್ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next