Advertisement

ಮೂಲ್ಕಿ ರೈಲು ನಿಲ್ದಾಣದ ರಸ್ತೆಯ ಸೇತುವೆ: ಬೃಹತ್‌ ಹೊಂಡಕ್ಕೆ ಮುಕ್ತಿ

12:54 PM Oct 22, 2017 | Team Udayavani |

ಹಳೆಯಂಗಡಿ: ಮೂಲ್ಕಿ ರೈಲ್ವೇ ನಿಲ್ದಾಣಕ್ಕೆ ತೆರಳುವ ಬಹು ಸಂಚಾರದ ರಸ್ತೆಯಲ್ಲಿ ಸಿಗುವ ರೈಲ್ವೇ ಸೇತುವೆಯಲ್ಲಿ ನಿರ್ಮಾಣವಾಗಿದ್ದ ಬೃಹತ್‌ ಹೊಂಡಕ್ಕೆ ಕೊನೆಗೂ ರೈಲ್ವೇ ಇಲಾಖೆಯು ಮುಕ್ತಿ ನೀಡಿದೆ.

Advertisement

ರೈಲ್ವೇ ನಿಲ್ದಾಣಕ್ಕೆ ಹಾಗೂ ಅಕ್ಕಪಕ್ಕದ ಪ್ರದೇಶಗಳಿಗೆ ಸೇತುವೆ ಮೇಲೆ ತೆರಳುವವರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಬಗ್ಗೆ ಉದಯವಾಣಿ ಸುದಿನದಲ್ಲಿ ಅ. 10ರಂದು ‘ಸೇತುವೆ ಮೇಲೆ ಸಂಚಾರಕ್ಕೆ ಹೊಂಡ, ರಾಡ್‌ ಅಡ್ಡಿ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡ ವರದಿಗೆ ಎಚ್ಚೆತ್ತ ಇಲಾಖೆಯು ಈ ಬೃಹತ್‌ ಹೊಂಡಕ್ಕೆ ಸಿಮೆಂಟ್‌ ಮಿಶ್ರಿತ ಕಾಂಕ್ರೀಟನ್ನುಬಳಸಿ ದುರಸ್ತಿ ನಡೆಸಿದೆ. ಎರಡು ದಿನ ವಾಹನಗಳ ಸಂಚಾರಕ್ಕೂ ಸೇತುವೆ ಮೇಲೆ ಏಕಮುಖ ರಸ್ತೆಯನ್ನಾಗಿ ಪರಿವರ್ತಿಸಲಾಗಿತ್ತು.

ಸೇತುವೆಯಲ್ಲಿ ಮಳೆ ನೀರು ತುಂಬಿ ಹೊಂಡಗಳು ಅದರಲ್ಲಿನ ಕಬ್ಬಿಣದ ರಾಡುಗಳು ಮಕ್ಕಳಿಗೆ ಅಪಾಯವನ್ನು ತಂದೊಡ್ಡುವ ಸಾಧ್ಯತೆಯೂ ಹೆಚ್ಚಾಗಿತ್ತು.ವಾಹನಗಳಲ್ಲಿ ಸಂಚರಿಸುವವರು ಸಹ ಹೊಂಡದ ಮೂಲಕವೇ ಸಾಗಬೇಕಾದುದರಿಂದ ಟಯರ್‌ ಪಂಕ್ಚರ್‌ ಆಗಿದ್ದ ಹಲವು ಉದಾಹರಣೆಗಳಿದ್ದವು. ಕಿಲ್ಪಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಶ್ರೀಕಾಂತ್‌ ರಾವ್‌ ಸಹ ಮೌಖೀಕವಾಗಿ ಹಲವಾರು ಬಾರಿ ಇಲಾಖೆಗೆ ದುರಸ್ತಿ ಮಾಡಲು ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next