ಮೂಲ್ಕಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಚಿಕ್ಕಬಳ್ಳಾಪುರ ನಿವಾಸಿ ಮೌಜಾಮ್ ಅವರನ್ನು ಆ. 25ರಂದು ಸಿಗರೇಟ್ ವಿಷಯದಲ್ಲಿ ಜಗಳ ಮಾಡಿ ಮೂಲ್ಕಿ ಸಮೀಪದಲ್ಲಿ ಕುತ್ತಿಗೆ ಹಿಸುಕಿ ಕೊಂದು ಮೊಬೈಲ್, ಬ್ಯಾಗ್ ಮತ್ತು ನಗದಿನೊಂದಿಗೆ ಪರಾರಿಯಾಗಿದ್ದ ಹರಿಯಾಣ ಮೂಲದ ಆರೋಪಿ ರಾಹುಲ್ ಯಾನೆ ಬೋಲ್ ಕರ್ಮವೀರ್ ಈಶ್ವರ್ ಜಾಟ್ ವಿರುದ್ಧ ಹಲವು ರಾಜ್ಯಗಳಲ್ಲಿ ಗಂಭೀರ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ವಿವಿಧ ಪ್ರಕರಣಗಳಲ್ಲಿ ಗುಜರಾತ್, ಕರ್ನಾಟಕ, ಮುಂಬಯಿ, ತೆಲಂಗಾಣ, ಹರಿಯಾಣ ಮುಂತಾದ ರಾಜ್ಯಗಳ ಪೊಲೀಸರಿಗೆ ಬೇಕಾದ ವನಾಗಿದ್ದಾನೆ. ಈತ ಅತ್ಯಾಚಾರ, ಕೊಲೆ ರೈಲು ಪ್ರಯಾಣಿಕರ ದರೋಡೆಯನ್ನು ಮುಂತಾದವು ಗಳನ್ನು ಸರಣಿಯಂತೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆಯ ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ, ಗುಜರಾತ್ನ ವಾಪಿ ಜಿಲ್ಲೆಯ ಉದ್ವಾಡ ರೈಲು ನಿಲ್ದಾಣದ ಬಳಿ 19 ವರ್ಷದ ಯುವತಿ ಯೋರ್ವಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪ ಈತನ ಮೇಲಿದೆ. ಜೈಲಿನಿಂದ ಜಾಮೀನಿನಲ್ಲಿ ಹೊರ ಬಂದಿದ್ದ ಈತ ಮತ್ತೆ ತನ್ನ ಪಾತಕ ಕೃತ್ಯವನ್ನು ಮುಂದುವರಿಸಿದ್ದ.
ವಿಚಾರಣೆಯಲ್ಲಿ ಬಹಿರಂಗ
ಗುಜರಾತ್ನ ಪ್ರಕ ರಣವೊಂದರಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಈತ ಮೂಲ್ಕಿ ಠಾಣೆಗೆ ಸಂಬಂಧಿಸಿದ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದ.
ನ.19ರಂದು ಈತ ಪಶ್ಚಿಮ ಬಂಗಾಲದ ಕತಿಹಾರ್ ಎಕ್ಸ್ ಪ್ರಸ್ ರೈಲು ಹತ್ತಿದ್ದ 60 ವರ್ಷದ ವ್ಯಕ್ತಿಯನ್ನು ಇರಿದು ಕೊಲೆ ಮಾಡಿ ಪರಾರಿಯಾಗಿರುವ ಬಗ್ಗೆ ಹೌರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಲ್ಸಾಡ್, ವಾಪಿ, ಸೂರತ್ ಹಾಗೂ ಉದ್ವಾಡ ಪೊಲೀಸರು ಸುಮಾರು 2 ಸಾವಿರಕ್ಕೂ ಹೆಚ್ಚಿನ ಸಿ.ಸಿ. ಕೆಮರಾಗಳನ್ನು ಪರಿಶೀಲಿಸಿದಾಗ ಸೂರತ್ ಸೆಂಟ್ರಲ್ ಜೈಲಿನ ಅಧಿಕಾರಿಯೊಬ್ಬರು ಈತನ ಗುರುತು ಪತ್ತೆ ಹಚ್ಚಿದ್ದಾರೆ. ರೈಲ್ವೆ ಮತ್ತು ಸೂರತ್ ಪೊಲೀಸರು ಜಂಟಿ ಕಾರ್ಯಾಚರಣೆಯ ಮೂಲಕ ಈ ಸೀರಿಯಲ್ ಕಿಲ್ಲರ್ನನ್ನು ಬಂಧಿಸಿದ್ದಾರೆ. ಈತ ತೆಲಂಗಾಣ ದಲ್ಲೂ ಮಹಿಳೆಯನ್ನು ಕೊಂದಿರು ವುದಾಗಿ ಒಪ್ಪಿಕೊಂಡಿದ್ದಾನೆ.