Advertisement

ಅಪಾಯಕ್ಕೆ  ಆಹ್ವಾನ ನೀಡುತ್ತಿರುವ ಮೂಲರಪಟ್ಣ ಸೇತುವೆ

12:26 PM Sep 26, 2018 | Team Udayavani |

ಎಡಪದವು: ಮೂಲರಪಟ್ಣದ ಮುರಿದುಹೋದ ಸೇತುವೆ ಅಪಾಯಕಾರಿಯಾಗಿದ್ದು, ಇದನ್ನು ವೀಕ್ಷಿಸಲು ಬಂದ ಜನರು ಇಲ್ಲಿ ಕಾಲಹರಣ ಮಾಡಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವುದು ಕಂಡು ಬರುತ್ತಿದೆ. ಅಳಿದುಳಿದ ಸೇತುವೆ ಅಪಾಯಕಾರಿಯಾಗಿದ್ದು, ಯಾವಾಗ ಬೇಕಾದರೂ ಮುರಿದುಬೀಳುವ ಸೂಚನೆಯನ್ನು ಈಗಾ ಗಲೇ ಹೆದ್ದಾರಿ ಇಲಾಖೆಯ ಎಂಜಿನಿಯರ್‌ಗಳು ನೀಡಿದ್ದಾರೆ. ಆದ್ದರಿಂದ ಇಲ್ಲಿ ಸಂಚಾರಕ್ಕೆ ನಿರ್ಬಂಧ ಹೇರುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

ಸೇತುವೆಯನ್ನು ದಾಟದಂತೆ ಸೇತುವೆಯ ಎರಡೂ ಕಡೆಗಳಲ್ಲಿ ಆಳೆತ್ತರದ ಕಾಂಪೌಂಡ್‌ ರಚನೆ ಮಾಡಲಾಗಿದೆ. ಆದರೆ ಈ ಕಾಂಪೌಂಡ್‌ ಅನ್ನು ಹಾದುಕೊಂಡು ಕೆಲವರು ತನ್ನ ಮಕ್ಕಳ ಜತೆ ವೀಕ್ಷಣೆ ನಡೆಸುತ್ತಿರುವುದರಿಂದ ಅಪಾಯಕಾರಿಯಾಗಿ ಪರಿಣಮಿಸಿದೆ. ಮೂಲರಪಟ್ಣದ ಸೇತುವೆಯ ಅಂಚಿನಲ್ಲಿ ಸೇತುವೆ ನೋಡಲೆಂದೇ ಕೆಲವರು ದಾರಿ ನಿರ್ಮಿಸಿದ್ದು, ಇದನ್ನೇ ಬಳಸಿಕೊಂಡು ತಂಡೋಪತಂಡವಾಗಿ ಬರುತ್ತಿದ್ದಾರೆ. ಇಲ್ಲಿ ಆಗ ಮಿಸಿ ಫೋಟೋ, ಸೆಲ್ಫಿ ತೆಗೆಯುವುದು ನಡೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು. 

Advertisement

Udayavani is now on Telegram. Click here to join our channel and stay updated with the latest news.

Next