Advertisement
ಎರಡು ಗ್ರಾಮಗಳ ಸಂಪರ್ಕ ಸೇತುವೆಈ ಸೇತುವೆ ಒಂದೊಮ್ಮೆ ಕುಸಿದು ಹೋದಲ್ಲಿ ಅಶ್ವತ್ಥಪುರ ಮತ್ತು ನೀರ್ಕೆರೆ ನಡುವಿನ ಸಂಪರ್ಕವೇ ಕಡಿದು ಹೋದಂತಾಗುವ ಅಪಾಯವಿದೆ. ಈ ಪರಿಸರದವರು ಆರೇಳು ಕಿ.ಮೀ. ಸುತ್ತಿ ಮಂಗಳೂರು-ಮೂಡುಬಿದಿರೆ ರಾ.ಹೆ. ತಲುಪಬೇಕಾಗುವ ಸ್ಥಿತಿ ನಿರ್ಮಾಣವಾಗಲಿದೆ. ಶಾಲೆ, ಕಾಲೇಜು, ಕಚೇರಿಗಳಿಗೆ ಹೋಗುವವರಿಗೆ, ಕೃಷಿಕರಿಗೆ ಬಹಳ ಸಮಸ್ಯೆಯಾಗಲಿದೆ. ಇದನ್ನೆಲ್ಲ ಮನಗಂಡು, ಹೊಸ ಸೇತುವೆ ನಿರ್ಮಾಣಕ್ಕಾಗಿ ಜನತೆ ಶಾಸಕ ಉಮಾನಾಥ ಕೋಟ್ಯಾನ್ ಮೂಲಕ ಬೇಡಿಕೆ ಇರಿಸಿದ್ದು ಇನ್ನೇನು ಈ ಸೇತುವೆ ಹೊಸ ವರುಷಕ್ಕೆ ಹೊಸದಾಗಿ ನಿರ್ಮಾಣವಾಗುವ ಬೆಳವಣಿಗೆ ಕಂಡಿದೆ.
1987ರಲ್ಲಿ ಶಾಸಕರಾಗಿದ್ದ ಅಮರನಾಥ ಶೆಟ್ಟಿ ಅವರು ಎರಡನೇ ಬಾರಿ ಸಚಿವರಾದಾಗ ಈ ಸೇತುವೆಯ ಶಂಕುಸ್ಥಾಪನೆ ನೆರವೇರಿಸಲಾಗಿದ್ದು 1993ರಲ್ಲಿ ಸೋಮಪ್ಪ ಸುವರ್ಣರ ಕಾಲದಲ್ಲಿ ಉದ್ಘಾಟನೆಯಾಗಿತ್ತು. ಇದಾಗಿ ಬರೇ 31 ವರ್ಷಗಳಷ್ಟೇ ಉರುಳಿವೆ, ಸೇತುವೆ ದುರ್ಬಲವಾಗಿ ಹೋಗಿದೆ. ಸರಕಾರಿ ನಿಯಮದ ಪ್ರಕಾರ ಮೂವತ್ತು ವರ್ಷ ದಾಟಿದ ಕಟ್ಟಡ, ಸೇತುವೆ ಮೊದಲಾದ ನಿರ್ಮಾಣಗಳನ್ನು ಕಿತ್ತು ಹೊಸದಾಗಿ ನಿರ್ಮಿಸಲು ಅವಕಾಶವಿದೆ. ಈ ಅವಕಾಶದ ಸದುಪಯೋಗ ನೀರ್ಕೆರೆ ಸೇತುವೆಗೂ ಬರುವಂತಾಗಿದೆ.
Related Articles
Advertisement