ಚಿಕ್ಕಬಳ್ಳಾಪುರ: ಜಿಪಂನ ಆಡಳಿತರೂಢ ಕಾಂಗ್ರೆಸ್ ಸದಸ್ಯರ ನಡುವೆ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು, ಇದೀಗ ಉಪಾಧ್ಯಕ್ಷರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಲು ಮೇ 20ಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅವಿಶ್ವಾಸ ಮಂಡನೆಗೆ ಕರೆದಿರುವ ಸಭೆ ಜಿಲ್ಲೆಯ ರಾಜ ಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಒಟ್ಟು 28 ಸದಸ್ಯ ಬಲ ಇರುವ ಜಿಪಂನಲ್ಲಿ21 ಕಾಂಗ್ರೆಸ್, 5 ಜೆಡಿಎಸ್ ಹಾಗೂ ಸಿಪಿಎಂ ಹಾಗೂ ಬಿಜೆಪಿ ತಲಾ ಒಬ್ಬರು ಸದಸ್ಯರು ಇದ್ದಾರೆ. ಅಧಿಕಾರ ಹಿಡಿಯುವಷ್ಟು ಸಂಖ್ಯಾ ಬಲ ಇದ್ದರೂ ಕಾಂಗ್ರೆಸ್‌ನಲ್ಲಿ ಪದೇ ಪದೆ ಸ್ಫೋಟಗೊಳ್ಳುತ್ತಿರುವ ಭಿನ್ನಮತ ಈಗಾಗಲೇ ಜಿಪಂನಲ್ಲಿ ಮೂರು ಮಂದಿಯನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದೆ.
ಅವಿಶ್ವಾಸಕ್ಕೆ ನಿರ್ಧಾರ: ಕಳೆದ ಬಾರಿ ಜಿಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಪಿ.ಎನ್. ಪ್ರಕಾಶ್‌ರನ್ನು ಸೋಲಿಸಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ.ಬಿ.ಚಿಕ್ಕನರ ಸಿಂಹಯ್ಯ ಗೆಲುವು ಸಾಧಿಸಿದ್ದರು. ಆದರೆ ತುಕತೆಯಿಂದ ಎರಡೂವರೆ ವರ್ಷ ಅಧಿಕಾರ ಅವಧಿ ಮುಗಿದರೂ ಉಪಾಧ್ಯಕ್ಷೆ ಪಿ.ನಿರ್ಮಲಾ ಕುರ್ಚಿಗೆ ಅಂಟಿ ಕೊಂಡಿ ದ್ದಾರೆಂದು ವರ ವಿರುದಟಛಿ ಸ್ವಪಕ್ಷೀಯ ಸದ ಸ್ಯರೆ ಅವಿಶ್ವಾಸ ಮಂಡನೆ ಮಾಡಲು ಮುಂದಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿರೊಧಿ ಬಣದ ನಡೆ ಏನು?: ಮೊದಲ ಬಾರಿಗೆ ಜಿಪಂ ಪಿ.ಎನ್.ಕೇಶವ ರೆಡ್ಡಿ ಜೊತೆ ಶಿಡ್ಲಘಟ್ಟ ತಾಲೂಕಿನ ಜಂಗಮ ಕೋಟೆ ಕ್ಷೇತ್ರದ ಪಿ . ನಿರ್ಮಲ ಅವಿರೋಧ ವಾಗಿ ಆಯ್ಕೆಗೊಂಡಿದ್ದರು. ಆದರೆ ಪಕ್ಷ ದೊಳಗೆ ಪೂರ್ವ ನಿಗದಿಯಂತೆ ಎರಡೂವರೆ ವರ್ಷ ಮುಗಿದರೂ ರಾಜೀನಾಮೆ ನೀಡು ವಂತೆ ಪಕ್ಷ ಸೂಚಿಸಿದರೂ ಕ್ಯಾರೆ ಎನ್ನದ ಉಪಾಧ್ಯಕ್ಷೆ ಮೇಲೆ ಈಗ ಕಾಂಗ್ರೆಸ್ ಅವಿಶ್ವಾಸ ಮಂಡನೆಯ ಬ್ರಹ್ಮಾಸಉಯೋಗಿಸಿದರೂ ಅದು ಯಶಸ್ಸು ಆಗುತ್ತದೆಯೆ?
ಕಾಂಗ್ರೆಸ್ ವಿರೋಧಿ ರಾಜಕೀಯ ಬಣ ಈ ವಿಚಾರದಲ್ಲಿ ಯಾವ ಹೆಜ್ಜೆ ಇಡುತ್ತದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಜಿಪಂಗೆ ಆರಿಸಿ ಬಂದಿರು ವವರ ಪೈಕಿ ಬಿಸಿ ಎಂ (ಎ) ಮಹಿಳಾ ಮೀಸಲಿಗೆ ನಿರ್ಮಿಲ ಬಿಟ್ಟರೆ ಗೌರಿಬಿದನೂರು ತಾಲೂಕಿನ ತೊಂಡೇ ಬಾವಿ ಜಿಪಂ ಸದಸ್ಯೆ ಸರಸ್ವತಮ್ಮ ಮಾತ್ರ ಇದ್ದು, ಇವರ ಆಯ್ಕೆ ಅವಿರೋಧ ನಡೆ ಯುತ್ತಾ ಅಥವಾ ಕಳೆದ ಬಾರಿ ಜಿಪಂ ಅಧ್ಯಕ್ಷರ ಚುನಾವಣೆಯಂತೆ ಉಪಾಧ್ಯಕ್ಷರ ಅವಿಶ್ವಾಸ ಮಂಡನಾ ಸಭೆ ಮೇಲಾಟಗಳಿಗೆ ಸಾಕ್ಷಿಯಾ ಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಬೆಳಗ್ಗೆ 11:30ಕ್ಕ ಸಭೆ: ಉಪಾಧ್ಯಕ್ಷೆ ನಿರ್ಮಲಾ ವಿರುದ ಅವಿಶ್ವಾಸ ನಿಟ್ಟಿನಲ್ಲಿ ಮೇ 20 ರಂದು ಬೆಳಗ್ಗೆ 11 ಗಂಟೆಗೆ ಜಿಪಂ ಸಭಾಂಗಣದಲ್ಲಿ ಸಭೆಯನ್ನು ಬೆಂಗಳೂರು ಪ್ರಾದೇಶಿಕ ಅಭಿವೃದಿಟಛಿ ಆಯುಕ್ತರಾದ ವಿ.ಪಿ.ಇಕ್ಕೇರಿ ಸಭೆ ಕರೆದಿದ್ದಾರೆ. ಮೇ 20ಕ್ಕೆ ಜಿಪಂ ಉಪಾಧ್ಯಕ್ಷೆ
ನಿರ್ಮಲಾ ವಿರುದ ಅವಿಶ್ವಾಸ ಮಂಡನೆ ಸಭೆ ಕರೆಯಲಾಗಿದೆ. ಇದು ಪಕ್ಷದ ನಿರ್ಧಾರ. ಈ ಹಿಂದೆಯು ಅವ ರಿಗೆ ರಾಜೀನಾಮೆ ನೀಡುವಂತೆ ಸೂಚಿಸ ಲಾಗಿತ್ತು. ಆದರೆ ಅವರು ನೀಡಿರಲಿಲ್ಲ. ಅವರನ್ನು ಪದಚ್ಯುತಿಗೊಳಿಸಿ ಅವರ ಸ್ಥಾನಕ್ಕೆ ತೊಂಡೇಬಾವಿ ಕ್ಷೇತ್ರದ ಸದಸ್ಯೆ ಸರಸ್ವತಮ್ಮ ಅವಿರೋಧವಾಗಿ ಆಯ್ಕೆ ಯಾಗುವ ವಿಶ್ವಾಸವಿದೆ.
-ಪಿ.ಎನ್.ಪ್ರಕಾಶ್, ಕಾಂಗ್ರೆಸ್ ಜಿಪಂ ಸದಸ್ಯ
* ಕಾಗತಿ ನಾಗರಾಜಪ್ಪ