Advertisement

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

02:18 AM Sep 20, 2024 | Team Udayavani |

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದ ತೀರ್ಪನ್ನು ನ್ಯಾಯಾಲಯ ಕಾದಿರಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ರವಾನೆಯಾಗಿದ್ದು, ಈ ಸಂಬಂಧ ಮಾಹಿತಿ ಒದಗಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ರಾಜಭವನದಿಂದ ಸೂಚನೆ ಹೋಗಿದೆ.

Advertisement

ಹೀಗಾಗಿ ಸಿಎಂಗೆ ಮತ್ತೂಂದು ಸಂಕಷ್ಟ ಎದು ರಾಗಿದೆ. ಸರಕಾರ-ರಾಜಭವನದ ನಡುವೆ ಶೀತಲ ಸಮರ ನಡೆಯುತ್ತಲೇ ಇದ್ದು,
ರಾಜ್ಯಪಾಲರು ತಮ್ಮ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವು ದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಅರ್ಜಿ ವಿಚಾರಣೆ ನಡೆದು ಯಾವುದೇ ಕ್ಷಣದಲ್ಲಿ ತೀರ್ಪು ಹೊರಬೀಳುವ ಸಾಧ್ಯತೆಯೂ ಇದೆ. ಹೀಗಿರುವಾಗಲೇ ಮೈಸೂರಿನ ಪಿ.ಎಸ್‌. ನಟರಾಜ್‌ ಎಂಬುವರು ಮುಡಾ ವಿಚಾರವಾಗಿಯೇ ಆ. 27ರಂದು ಮತ್ತೂಂದು ದೂರನ್ನು ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಅವರಿಗೆ ನೀಡಿದ್ದು, ಇದನ್ನು ಆಧರಿಸಿ ಸೆ .5ರಂದು ರಾಜಭವನವು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದು, ದೂರಿಗೆ ಸಂಬಂಧಿಸಿದಂತೆ ಸರಕಾರದ ಬಳಿ ಇರುವ ಮಾಹಿತಿಯನ್ನು ಒದಗಿಸುವಂತೆ ತಿಳಿಸಿದೆ.

ದೂರಿನಲ್ಲಿರುವ ಅಂಶಗಳು ಗುರುತರವಾಗಿದ್ದು, ಇದಕ್ಕೆ ಸಂಬಂಧಿಸಿದ ವಿವರಗಳನ್ನು ದಾಖಲೆಸಹಿತ ಒದಗಿಸುವಂತೆ ಮಾಹಿತಿ ಕೇಳಿದೆ.

ದೂರಿನಲ್ಲಿ ಏನಿದೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣ ಹಾಗೂ ಪಕ್ಕದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಸಿಎಂ ಮೌಖಿಕ ಆದೇಶದ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 387 ಕೋಟಿ ರೂ.ಗಳನ್ನು ಕಾಮಗಾರಿಗಳನ್ನು ನಿಯಮಬಾಹಿರವಾಗಿ ಕೈಗೊಂಡಿದೆ. ಪ್ರಾಧಿಕಾರದಲ್ಲಿ ಹಣಕಾಸಿನ ಕೊರತೆ ಇದ್ದರೂ ಸಿಎಂ ಅವರ ಮೌಖಿಕ ಸೂಚನೆ ಮೇರೆಗೆ ಕಾಮಗಾರಿ ಕೈಗೊಂಡಿದ್ದು, ಇದು ಕರ್ನಾಟಕ ನಗರಾಭಿವೃದ್ಧಿ ವಿಧೇಯಕ 1987ರ ಸೆಕ್ಷನ್‌ 15 ಮತ್ತು 25ರ ವಿರುದ್ಧವಾದ ಕಾಮಗಾರಿಯಾಗಿದೆ. ಅಧಿಕಾರ ದುರ್ಬಳಕೆಯೂ ಆಗಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ದೂರುದಾರ ನಟರಾಜ್‌ ಅವರು ರಾಜ್ಯಪಾಲರಿಗೆ ಕೋರಿದ್ದರು.

Advertisement

ಸಿಎಸ್‌ ಉತ್ತರ?
ರಾಜಭವನದ ಈ ಪತ್ರವನ್ನು ಉಲ್ಲೇಖಿಸಿದ ಮುಖ್ಯ ಕಾರ್ಯದರ್ಶಿ ಅವರು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ಉತ್ತರ ನೀಡುವಂತೆ ಸೂಚಿಸಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಬಂದ ಉತ್ತರವನ್ನು ರಾಜಭವನಕ್ಕೆ ತಲುಪಿಸಲು ನಿರ್ಧರಿಸಿದ್ದಾರೆ.

ಏನಿದು ಪ್ರಕರಣ?
– ಶ್ರೀರಂಗಪಟ್ಟಣದಲ್ಲಿ ಮುಡಾದಿಂದ ನಿಯಮ ಬಾಹಿರ ಕಾಮಗಾರಿ
-ಒಟ್ಟು 387 ಕೋಟಿ ರೂ.ಗಳ ಕಾಮಗಾರಿ
-ಮೈಸೂರಿನ ಪಿ.ಎಸ್‌. ನಟರಾಜ್‌ರಿಂದ ರಾಜ್ಯಪಾಲರಿಗೆ ದೂರು
-ಸರಕಾರದ ಬಳಿ ಇರುವ ಮಾಹಿತಿ ನೀಡಲು ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next