Advertisement

MUDA CASE : ಇಂದು ಮಹತ್ವದ ವಿಚಾರಣೆ, ತೀರ್ಪು ಎಂದು?

12:46 AM Sep 12, 2024 | Team Udayavani |

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿ ನಿವೇಶನ ಹಂಚಿಕೆ ವೇಳೆ ನಡೆದಿದೆ ಎನ್ನಲಾದ ಹಗರಣ ಸಂಬಂ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಮಧ್ಯೆ ಹೈಕೋರ್ಟ್‌ನಲ್ಲಿ ನಡೆಯು ತ್ತಿರುವ ಕಾನೂನು ಸಮರ ಗುರುವಾರ ಮುಂದುವರಿ ಯಲಿದ್ದು, ಪ್ರಕರಣ ನಿರ್ಣಾಯಕ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಎಲ್ಲರ ದೃಷ್ಟಿ ಹೈಕೋರ್ಟ್‌ ಮೇಲೆ ನೆಟ್ಟಿದೆ.

Advertisement

ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿ ರುವ ಅರ್ಜಿ ಕುರಿತು ನ್ಯಾ| ಎಂ. ನಾಗಪ್ರಸನ್ನ ಅವರಿರುವ ಏಕಸದಸ್ಯ ನ್ಯಾಯಪೀಠ ಗುರುವಾರ ಮಧ್ಯಾಹ್ನ 12 ಗಂಟೆಗೆ ವಿಚಾರಣೆ ಮುಂದುವರಿಸಲಿದೆ.

ರಾಜ್ಯಪಾಲರ ಪರ ವಕೀಲರು ಹಾಗೂ ದೂರುದಾರರ ಪರ ವಕೀಲರ ವಾದಗಳಿಗೆ ಮುಖ್ಯಮಂತ್ರಿಪರ ವಕೀಲರಾದ ಅಭಿಷೇಕ್‌ ಮನುಸಿಂಘ್ವಿ ಹಾಗೂ ಪ್ರೊ| ರವಿವರ್ಮ ಕುಮಾರ್‌ ಮರು ವಾದ ಮಂಡಿಸಲಿ ದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಇನ್ನಷ್ಟು ವಿಸ್ತರಿಸುವುದು ಸೂಕ್ತವಲ್ಲ.

ಸೆ. 12ರಂದು ಮುಗಿಸೋಣ ಎಂದು ಸೆ. 9ರ ವಿಚಾರಣೆ ವೇಳೆ ನ್ಯಾಯಾಲಯ ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಗುರುವಾರದ ವಿಚಾರಣೆ ಸಾಕಷ್ಟು ಕುತೂಹಲ ಸೃಷ್ಟಿಸಿದೆ.

6ನೇ ಬಾರಿಗೆ ವಿಚಾರಣೆ
ಸಿಎಂ ಪರ ವಕೀಲರು ಮರು ವಾದ ಮಂಡಿಸಿದ ಬಳಿಕ ರಾಜ್ಯಪಾಲರ ಪರ ಹಾಗೂ ದೂರುದಾರರ ಪರ ವಕೀಲರು ಸ್ಪಷ್ಟನೆ, ಮರು ವಾದಕ್ಕೆ ಗುರುವಾರವೇ ಅವಕಾಶ ಕೊಡಬಹುದು. ಒಂದೊಮ್ಮೆ ಪ್ರತಿವಾದಿಗಳ ಪರ ವಕೀಲರು ಸಮಯ ಕೇಳಿದರೆ ಮತ್ತೆ ವಿಚಾರಣೆ ಮುಂದೂಡಹುದು. ಆದರೆ ಅರ್ಜಿದಾರರು ಮತ್ತು ಪ್ರತಿವಾದಿಗಳ ಪರ ವಕೀಲರ ಮರುವಾದ, ಸ್ಪಷ್ಟನೆ ಮುಕ್ತಾಯಗೊಂಡರೆ ತೀರ್ಪು ಕಾಯ್ದಿರಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಆ. 19ರಂದು ಮೊದಲ ಬಾರಿ ವಿಚಾರಣೆ ನಡೆದಿತ್ತು. ಬಳಿಕ ಆ. 29, 31, ಸೆ. 2 ಹಾಗೂ 9ರಂದು ವಿಚಾರಣೆ ನಡೆದಿದೆ.

Advertisement

ಪ್ರಕರಣದಲ್ಲಿ ರಾಜ್ಯಪಾಲರ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ದೂರುದಾರರ ಪರ ಹಿರಿಯ ವಕೀಲರಾದ ಮಣೀಂದರ್‌ ಸಿಂಗ್‌, ಕೆ.ಜಿ. ರಾಘವನ್‌, ಪ್ರಭುಲಿಂಗ ಕೆ. ನಾವದಗಿ, ಲಕ್ಷ್ಮೀ ಅಯ್ಯಂಗಾರ್‌, ವಕೀಲ ರಂಗನಾಥ ರೆಡ್ಡಿ ತಮ್ಮ ವಾದಗಳನ್ನು ಪೂರ್ಣಗೊಳಿಸಿದ್ದಾರೆ.

ಸಾರ್ವಜನಿಕ ಸೇವಕರ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್‌ 17ರಡಿ ಅಭಿಯೋಜನೆಗೆ ಅನುಮತಿ ನೀಡುವ ಮೊದಲು ಪೊಲೀಸರಿಂದ ಪ್ರಾಥಮಿಕ ತನಿಖೆ ನಡೆದಿರಬೇಕು. ಸಚಿವ ಸಂಪುಟದ ಸಲಹೆ ಮತ್ತು ಅಭಿಪ್ರಾಯಕ್ಕೆ ರಾಜ್ಯಪಾಲರು ಬದ್ಧರಾಗಿರಬೇಕು, ರಾಜ್ಯಪಾಲರ ವಿವೇಚನಾಧಿಕಾರ ಇತ್ಯಾದಿ ಕಾನೂನು ಮತ್ತು ಸಂವಿಧಾನದ ಅಂಶಗಳು ಇಡೀ ಪ್ರಕರಣದ ಕೇಂದ್ರ ಬಿಂದುಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.