Advertisement

MUDA ಒಂದೇ ದಿನದಲ್ಲಿ 848 ಸೈಟ್‌ಗೆ ಖಾತೆ; ಮತ್ತೊಂದು ಅಕ್ರಮ ಪತ್ತೆ ಹಳೆ ಪ್ರಕರಣಕ್ಕೆ ಮರುಜೀವ

11:36 PM Sep 08, 2024 | Team Udayavani |

ಮೈಸೂರು: ಮುಡಾದಲ್ಲಿ ನಿವೇಶನ ಹಂಚಿಕೆ, 50:50 ಅನುಪಾತದಲ್ಲಿ ಕೋಟ್ಯಂತರ ರೂ. ಹಗರಣವಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿರುವ ಈ ಹೊತ್ತಿನಲ್ಲೇ, ಆಯುಕ್ತರ ಅನುಮತಿ ಇಲ್ಲದೇ ನಿವೇಶನಗಳನ್ನು ಮುಡಾ
ದಿಂದ ಬಿಡುಗಡೆಗೊಳಿಸಿಕೊಂಡು, ಒಂದೇ ದಿನದಲ್ಲಿ 848 ನಿವೇಶಗಳಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎನ್ನುವ ವಿಚಾರವು ಮುಡಾದ ಹಿಂದಿನ ಆಯುಕ್ತರು ಸರಕಾರಕ್ಕೆ ಬರೆದಿರುವ ಪತ್ರದಿಂದ ಬಹಿರಂಗಗೊಂಡಿದೆ.

Advertisement

ಮರುಜೀವ ಮುಡಾ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌ ತಮ್ಮ ಅನುಮತಿ ಇಲ್ಲದೇ ನಿವೇಶನಗಳನ್ನು ಖಾತೆ ಮಾಡಿಸಿ ಕೊಂಡಿದ್ದಾರೆ ಎಂದು ಮಾಜಿ ಆಯುಕ್ತ ಡಿ.ಬಿ. ನಟೇಶ್‌, 2022ರ ಫೆ. 22ರಂದು ರಾಜ್ಯ ಸರಕಾರದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇದೀಗ ಈ ಪತ್ರದ ವಿಚಾರ ಬೆಳಕಿಗೆ ಬಂದಿದ್ದು, ಎರಡು ವರ್ಷಗಳ ಹಳೆಯ ಪ್ರಕರಣಕ್ಕೆ ಮತ್ತೊಮ್ಮೆ ಮರು ಜೀವ ಸಿಕ್ಕಂತಾಗಿದೆ.

ಎಚ್‌.ವಿ. ರಾಜೀವ್‌ ಮುಡಾ ಅಧ್ಯಕ್ಷರಾಗಿದ್ದ ಅವಧಿ ಯಲ್ಲಿ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಕೇರ್ಗಳ್ಳಿ, ನಗರ್ತಳ್ಳಿ, ಬಲ್ಲಹಳ್ಳಿ ಗ್ರಾಮದ 252 ಎಕರೆ 10 ಗುಂಟೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಮಾಡಲಾಗಿದೆ.

ಈ ಬಡಾವಣೆಯು ನಗರಾಭಿವೃದ್ಧಿ ಪ್ರಾಧಿಕಾರದ 2018ರ ಆದೇಶದ ವಿರುದ್ಧವಾಗಿ ರಚನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.