Advertisement

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

11:40 PM Sep 08, 2024 | Team Udayavani |

ಮೈಸೂರು: ಮುಡಾ ಹಗರಣದಲ್ಲಿ ನಾವು ಯಾರನ್ನೂ ರಕ್ಷಣೆ ಮಾಡುತ್ತಿಲ್ಲ. ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ತಿಳಿಸಿದರು.

Advertisement

ಪತ್ರಕರ್ತರೊಂದಿಗೆ ಮಾತನಾಡಿ, ಮುಡಾ ಹಗರಣ ವಿಚಾರದಲ್ಲಿ ನ್ಯಾ| ದೇಸಾಯಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸೆ. 10 ಹಾಗೂ ಸೆ. 12ರಂದು ಕೋರ್ಟ್‌ನಲ್ಲಿ ವಿಚಾರಣೆ ಇದೆ. ಈಗಾಗಲೇ ಪ್ರಾಧಿಕಾರದ ಹಿಂದಿನ ಆಯುಕ್ತ ದಿನೇಶ್‌ ಕುಮಾರ್‌ ಅವರನ್ನು ಅಮಾನತು ಮಾಡಿದ್ದೇವೆ. ತನಿಖೆ ಮುಗಿದು ವರದಿ ಬಂದ ಬಳಿಕ ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಮುಡಾ ಹಿಂದಿನ ಆಯುಕ್ತ ನಟೇಶ್‌ ಮೇಲೆ ಕ್ರಮ ಯಾಕಿಲ್ಲ ಎಂಬ ಪ್ರಶ್ನೆಗೆ, ಹಿಂದಿನ ಆಯುಕ್ತ ದಿನೇಶ್‌ ಕುಮಾರ್‌ ಮೇಲೆ ನಗರಾಭಿವೃದ್ಧಿ ಇಲಾಖೆಯಿಂದ ಕ್ರಮ ತೆಗೆದುಕೊಳ್ಳಲಾಗಿದೆ. ಮೇಲ್ನೋಟಕ್ಕೆ ಈ ಹಿಂದಿನ ಆಯುಕ್ತರು ತಪ್ಪು ಮಾಡಿರುವ ಬಗ್ಗೆ ಇಲಾಖೆ ವರದಿ ನೀಡಿದ್ದರಿಂದ ಅಮಾನತು ಮಾಡಲಾಗಿದೆ.

ದೇಸಾಯಿ ವರದಿ ಆಧಾ ರದ ಮೇಲೆ ಅಮಾನತು ಮಾಡಿಲ್ಲ. ದೇಸಾಯಿ ಆಯೋಗ ಈಗಾಗಲೇ ಎಲ್ಲೆಲ್ಲಿ ತಪ್ಪಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದೆ ಎಂದರು. ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಯಾವುದೇ ಬದಲಾವಣೆಯೂ ಆಗಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next