Advertisement

MUDA ಆಯುಕ್ತರ ನಿವಾಸದಲ್ಲಿದ್ದ ಸಿಸಿ ಕೆಮರಾ, ಡಿವಿಆರ್‌ ಕಾಣೆ

12:06 AM Sep 11, 2024 | Team Udayavani |

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಆಯುಕ್ತರ ಅಧಿಕೃತ ನಿವಾಸದಲ್ಲಿ ಇದ್ದ ಸಿಸಿ ಕೆಮರಾ ಹಾಗೂ ಡಿವಿಆರ್‌ ನಾಪತ್ತೆಯಾಗಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಇದು ಮುಡಾ ಹಗರಣ ಸಂಬಂಧ ಪ್ರಮುಖ ಡಿಜಿಟಲ್‌ ಸಾಕ್ಷ್ಯಗಳ ನಾಶವಾಗಿದೆ ಎಂಬ ಶಂಕೆ ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಗಿದೆ.

Advertisement

ಕುವೆಂಪು ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಮುಡಾ ಆಯುಕ್ತರ ಅಧಿಕೃತ ನಿವಾಸದಲ್ಲಿ 8 ಸಿಸಿ ಕೆಮರಾ ಅಳವಡಿಸಿದ್ದು ಅವುಗಳ ಫ‌ುಟೇಜ್‌ ಹಾಗೂ ಡಿವಿಆರ್‌ ನಾಪತ್ತೆಯಾಗಿದೆ. ಹಿಂದಿನ ಆಯುಕ್ತರು ಅವುಗಳನ್ನು ಕೊಂಡೊಯ್ದಿರುವ ಬಗ್ಗೆ ಅನುಮಾನ ಮೂಡಿದೆ.

ಹಿಂದಿನ ಆಯುಕ್ತರು ಕಚೇರಿಗಿಂತ ಹೆಚ್ಚಾಗಿ ಇದೇ ನಿವಾಸದಲ್ಲಿ ಹೆಚ್ಚು ಕಾರ್ಯ ನಿರ್ವಹಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಾಕಷ್ಟು ಮಂದಿ ಡೆವಲಪರ್‌ಗಳು ಆಯುಕ್ತರನ್ನು ಮನೆಯಲ್ಲಿಯೇ ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದರು ಎನ್ನಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಈಗಿನ ಮುಡಾ ಆಯುಕ್ತ ಎ.ಎನ್‌. ರಘುನಂದನ್‌, ಈ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.