ಮೈಸೂರು: ಉದ್ಯಮ ಕ್ಷೇತ್ರಕ್ಕೆ ಹೊಸ ದಾಗಿ ಆಗಮಿಸುವವರಿಗೆ ಮಾರುಕಟ್ಟೆ ಜಾnನ, ಗ್ರಾಹಕರ ಬೇಡಿಕೆ ಏನೆಂಬುದನ್ನು ತಿಳಿದುಕೊಳ್ಳುವ ಜತೆಗೆ ಸಮಸ್ಯೆಗಳು ಎದುರಿಸುವ ಛಲದೊಂದಿಗೆ ಮುನ್ನಡೆಯ ಬೇಕು ಎಂದು ಸುಪ್ರೀಮ್ ಪ್ಲಾಸ್ಟಿಸೈಜರ್ ಸಿಇಒ ಡಿ.ಶ್ರೀನಾಥ್ ಹೇಳಿದರು.
ಮೈಸೂರು ವಿವಿ, ಬಿ.ಎನ್. ರಾಣಿ ಬಹದ್ದೂರ್ ವಿಜಾnನ ನಿರ್ವಹಣೆ ಸಂಸ್ಥೆಯಿಂದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಉದ್ಯಮಗಳ ಆರಂಭಕ್ಕೆ ಅವಕಾಶಗಳು ಕುರಿತು ಎರಡು ದಿನಗಳ ಕೈಗಾರಿಕೆ-ಸಂಸ್ಥೆಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕ್ಷೇತ್ರ ಹಾಗೂ ವಿಷಯದಲ್ಲಿ ಕಲಿಕೆ ಎಂಬುದು ನಿರಂತರವಾದ ಪ್ರಕ್ರಿಯೆ ಯಾಗಿದೆ. ಹೀಗಾಗಿ ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಬರುವವರು ಪ್ರಸ್ತುತ ಮಾರುಕಟ್ಟೆ ದರ, ಬೆಲೆ ಸೇರಿದಂತೆ ಎಲ್ಲದರ ಬಗ್ಗೆಯೂ ತಿಳಿದಿರಬೇಕು. ಆಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳ ಬೇಕೆಂಬುದು ತಿಳಿಯಲಿದ್ದು, ಆಗ ಯಶಸ್ಸು ಸಾಧಿಸಬಹುದು ಎಂದರು.
ಯಾವುದೇ ವ್ಯಕ್ತಿಯಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ನಿಟ್ಟಿನಲ್ಲಿ ವ್ಯವಹಾರ ನಿರ್ವಹಣ ವಿಷಯ ಅತ್ಯಂತ ಪ್ರಮುಖವಾಗಿದ್ದು, ಇದನ್ನು ಹೊರತು ಪಡಿಸಿ ಬೇರಾವುದೇ ವಿಷಯಗಳು ವ್ಯಕ್ತಿಯಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದಿಲ್ಲ. ಹೀಗಾಗಿ ರಾಸಾಯನ ಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಅರ್ಥ ಶಾಸ್ತ್ರದ ವಿಷಯಗಳಲ್ಲಿ ಪದವಿಯನ್ನು ಪಡೆಬಹುದೇ ಹೊರತು ನಾಯಕತ್ವ ಗುಣವನ್ನಲ್ಲ. ಅರ್ಥಶಾಸ್ತ್ರ ಉತ್ತಮ ಆರ್ಥಿಕ ತಜ್ಞರನ್ನಾಗಿ ಮಾಡಲಿದೆ ವಿನಃ ನಾಯಕನಲ್ಲ.
ನಾಯಕತ್ವ ಗುಣ ಸಮುದಾಯ ಹಾಗೂ ಕಂಪನಿಯ ಅಭಿವೃದ್ಧಿಗೆ ಅಗತ್ಯವಾಗಿ ಬೇಕಾಗಿರುವಂತಹದ್ದು, ಅದಕ್ಕೆ ಪ್ರತಿದಿನ ತಯಾರಿ ಮುಖ್ಯವಾಗಿದೆ. ಆದ್ದರಿಂದ ನಾಯಕನಾದವನು ಪ್ರತಿಯೊಬ್ಬರಿಂದ ಒಂದನ್ನು ಕಲಿಯಬೇಕು ಹಾಗೂ ಕಲಿಸಬೇಕು ಎಂದು ತಿಳಿಸಿದರು. ಬಿ.ಎನ್. ರಾಣಿಬಹದ್ದೂರ್ ವಿಜಾnನ ನಿರ್ವಹಣೆ ಸಂಸ್ಥೆ ಮುಖ್ಯಸ್ಥ ಡಾ.ಎಸ್.ಜೆ.ಮಂಜುನಾಥ್, ಕಾಲೇಜು ಡೀನ್ ಆಯಿಷಾ ಎಂ.ಷರೀಫ್ ಹಾಜರಿದ್ದರು.