Advertisement
ಐವನ್ ಡಿ’ಸೋಜಾ, ಎ.ಜೆ. ಆಸ್ಪತ್ರೆಯ ಗೈನಕಾಲಜಿ ವಿಭಾಗ ಮುಖ್ಯಸ್ಥೆ ಡಾ| ಕವಿತಾ ಡಿ’ಸೋಜಾ, ಡಾ| ಸುನಂದಾ ಪ್ರಭು, ಅಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಜೆರಾಲ್ಡ್ ಲೋಬೋ, ಕಾರ್ಯದರ್ಶಿ ಸುಜಾತಾ ರಮೇಶ್, ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷ ಶ್ರೀನಾಥ್ ಸುವರ್ಣ, ಮೂಡಬಿದಿರೆ ಜಮೀಯತುಲ್ ಫಲಾಃ ಅಧ್ಯಕ್ಷ ಸಲೀಂ ಹಂಡೇಲು, ಬಜಪೆ ಗ್ರಾ.ಪಂ. ಸದಸ್ಯ ಸಿರಾಜ್, ಕಾಂಗ್ರೆಸ್ ಪಕ್ಷ ಪ್ರಮುಖರಾದ ಕೆಪಿಸಿಸಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಗುರುರಾಜ್ ಎಸ್., ಅಕ್ರಮ ಸಕ್ರಮ ಸಮಿತಿಯ ಸುಂದರ ಪೂಜಾರಿ, ವಕೀಲರಾದ ಹರೀಶ್ ಪಿ., ಪ್ರಕಾಶ್ ಪಿ., ಜಿಲ್ಲಾ ಯುವ ಇಂಟಕ್ ಅಧ್ಯಕ್ಷ ಪುನೀತ್ ಶೆಟ್ಟಿ, ತೆಂಕ ಎಕ್ಕಾರು ಗ್ರಾ.ಪಂ. ಸದಸ್ಯೆ ನಫಿಸಾ ಖಾನ್, ಜಿ.ಪಂ. ಮಾಜಿ ಸದಸ್ಯ ಫೆಲಿಕ್ಸ್ ಕರ್ಡೋಝಾ, ಜೆರಾಲ್ಡ್ ಲೋಬೋ, ಕಲ್ಲಮುಂಡ್ಕೂರು ಗ್ರಾ.ಪಂ. ಸದಸ್ಯ ಲಾಝರಸ್ ಡಿ’ಕೋಸ್ಟಾ, ಮೂಡಬಿದಿರೆ ಪುರಸಭಾ ನಾಮನಿರ್ದೇಶಿತ ಸದಸ್ಯ ಆಲ್ವಿನ್ ಮೆನೇಜಸ್ ಮೊದಲಾದವರಿದ್ದರು.
ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಜನರು ಆರೋಗ್ಯಕರ ಜೀವನವನ್ನು ನಡೆಸಲು ಕಾಳಜಿ ವಹಿಸಬೇಕು ಎಂದು ಹೇಳಿದರು. ವಿಶೇಷವಾಗಿ ಮಹಿಳೆಯರ ಕ್ಯಾನ್ಸರ್ ಬಗ್ಗೆ ಅವರು ವಿವರಣೆ ನೀಡಿದರು. ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ದೃಕ್‌ಶ್ರವಣ ಕಾರ್ಯಕ್ರಮ ಸಂಯೋಜಿಸಲಾಗಿತ್ತು. ಐವನ್ ಡಿ’ ಸೋಜಾ ಅವರು ಇದುವರೆಗಿನ ಶಿಬಿರಗಳ ವಿವರ ನೀಡಿದರು. ಇದುವರೆಗಿನ 49 ಉಚಿತ ವೈದ್ಯಕೀಯ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಲ್ಲೇ ನಡೆಸಲಾಗಿದ್ದು 8,186 ಮಂದಿ ಫಲಾನುಭವಿಗಳಾಗಿದ್ದಾರೆ. 1,000ಕ್ಕೂ ಅಧಿಕ ಕೆಎಂಸಿ ಹೆಲ್ತ್ ಕಾರ್ಡ್ ಮಾಡಿಸಲಾಗಿದೆ. 1,500 ಮಂದಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗಿದೆ. 186 ಮಂದಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮಹಿಳೆಯರಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್ ತಪಾಸಣೆ, ನಡೆಸಲಾಗಿದೆ. ಮೂಡಬಿದಿರೆಯಲ್ಲಿ ಇದೇ ಮೊದಲಾಗಿ ಉಚಿತ ಶಿಬಿರ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು. ರಾಜೇಶ್ ಕಡಲಕೆರೆ ನಿರೂಪಿಸಿದರು.
Related Articles
50ನೇ ಶಿಬಿರದಲ್ಲಿ 455 ಮಂದಿ ಪಾಲ್ಗೊಂಡಿದ್ದು ವಿವಿಧ ವಿಭಾಗಗಳಲ್ಲಿ 70 ಮಂದಿಯನ್ನು ಹೆಚ್ಚಿನ ತಪಾಸಣೆ ಮತ್ತು ಉಚಿತ ಚಿಕಿತ್ಸೆಗಾಗಿ ಜ. 24ರಂದು ಬೆಳಗ್ಗೆ 9.30ಕ್ಕೆ ಮೂಡಬಿದಿರೆ ಜನಸ್ಪಂದನ ಕಚೇರಿಯಿಂದ ಮಂಗಳೂರು ಎಜೆ
ಆಸ್ಪತ್ರೆಗೆ ಕರೆದೊಯ್ಯಲಾಗುವುದು . 50 ಶಿಬಿರಗಳಲ್ಲಿ ಒಟ್ಟು 8,661 ಮಂದಿ ಪಾಲ್ಗೊಂಡಂತಾಗಿದೆ ಎಂದು ಶಿಬಿರಾಂತ್ಯದಲ್ಲಿ ಪ್ರಕಟಿಸಲಾಯಿತು.
Advertisement