Advertisement
ಮಂಜೂರಾದ ಹುದ್ದೆಗಳ ಪ್ರಕಾರ ಮುಖ್ಯಾಧಿಕಾರಿ, ಪರಿಸರ ಅಭಿಯಂತ, ಸಮುದಾಯ ವ್ಯವಹಾರ ಅಧಿಕಾರಿ, ಕಂದಾಯ ಅಧಿಕಾರಿ, ಪ್ರ.ದ. ಕಂದಾಯ ನಿರೀಕ್ಷಕ, ಸಮುದಾಯ ಸಂಘಟಕರು ಇದ್ದಾರೆ. ಇಬ್ಬರು ಪ್ರ.ದ. ಸಹಾಯಕರಲ್ಲಿ ಓರ್ವರು, ಮೂವರು ದ್ವಿ.ದ. ಸಹಾಯಕ ರಲ್ಲಿ ಓರ್ವರು, ಇಬ್ಬರು ಬಿಲ್ ಕಲೆಕ್ಟರ್‌ಗಳಲ್ಲಿ ಓರ್ವರಿದ್ದಾರೆ. ಮೂವರು ಅಟೆಂಡರ್‌ಗಳಲ್ಲಿ ಇಬ್ಬರಿದ್ದು ಅದರಲ್ಲೂ ಓರ್ವರು ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ನಿಯೋಜನೆ ಗೊಂಡಿದ್ದಾರೆ.
ತಲಾ ಓರ್ವರಂತೆ ಇರಬೇಕಿದ್ದ ಕಚೇರಿ ವ್ಯವಸ್ಥಾಪಕ, ಅಕೌಂಟೆಂಟ್, ಹಿರಿಯ ಆರೋಗ್ಯ ನಿರೀಕ್ಷಕ, ಸ್ಟೆನೋಗ್ರಾಫರ್, ಜೂ. ಪ್ರೋಗ್ರಾಮರ್, ಗಾರ್ಡನರ್, ಪ್ಲಂಬರ್ ಹುದ್ದೆಗಳೆಲ್ಲವೂ ಖಾಲಿಯಾಗಿವೆ. ತಲಾ 2 ಹುದ್ದೆಗಳಿರುವ ಕಿರಿಯ ಅಭಿ ಯಂತ, ಕಂಪ್ಯೂಟರ್ ಆಪರೇಟರ್/ಡಾಟಾ ಎಂಟ್ರಿ ಆಪರೇಟರ್, ಕಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನಿಟರಿ ಸೂಪರ್‌ವೈಸರ್, ಸೀನಿಯರ್ ವಾಲ್ವ್ ಮೆನ್, ಕ್ಲೀನರ್ ಇಲ್ಲ. ಗುತ್ತಿಗೆ, ಇತರ ನೇಮಕಾತಿಗಳು
ಗುತ್ತಿಗೆ ಆಧಾರದಲ್ಲಿ ಅಕೌಂಟೆಂಟ್, ಹೊರಗುತ್ತಿಗೆ ಆಧಾರದಲ್ಲಿ ಜೂ. ಪ್ರೋಗ್ರಾಮರ್, ಗಾರ್ಡನರ್, ಎಲ್ಲ 8 ಮಂದಿ ಸಹಾಯಕರು/ನೀರು ಸರಬರಾಜು ವಾಲ್Ìಮೆನ್, ಸಮಾನ ಕೆಲಸಕ್ಕೆ ಸಮಾನ ವೇತನದಡಿ ಓರ್ವ ದ್ವಿ. ದರ್ಜೆ ಸಹಾಯಕರು, 4 ಮಂದಿ ಸಹಾಯಕ ನೀರು ಸರಬರಾಜು ಆಪರೇಟರ್‌ಗಳು, ಕನಿಷ್ಠ ವೇತನದಡಿ ಇಬ್ಬರು ಕಂಪ್ಯೂಟರ್ /ಡಾಟಾ ಎಂಟ್ರಿ ಆಪರೇಟರ್ ಇದ್ದಾರೆ. 3 ವಾಹನ ಚಾಲಕರ ಹುದ್ದೆಗಳೂ ತೆರವಾಗಿದ್ದು ಈಗ ಇಬ್ಬರು “ಸಮಾನ ಕೆಲಸಕ್ಕೆ ಸಮಾನ ವೇತನ’ ಪಡೆಯುತ್ತಿದ್ದಾರೆ. ಎಲ್ಲ 46 ಪೌರಕಾರ್ಮಿಕ ಹುದ್ದೆಗಳಲ್ಲಿ 43 ಮಂದಿ ನೇರ ಪಾವತಿ ವ್ಯವಸ್ಥೆಯಲ್ಲಿದ್ದಾರೆ. ಇವೆಲ್ಲ ಸುಮಾರು 1.84 ಕೋಟಿ ರೂ. ವಿನಿಯೋಗದ ಸಂಗತಿ. ಪುರಸಭೆಗೆ ಉತ್ತಮ ಆದಾಯದ ಮೂಲಗಳಿವೆ. ಏಳೆಂಟು ಕೋಟಿ ರೂ. ಸಂಚಯವಾಗುವ ಎಲ್ಲ ಅವಕಾಶಗಳಿವೆ.
Related Articles
ಪುರಸಭೆಯಲ್ಲಿರುವ ಸಿಬಂದಿ ಕೊರತೆ ನೀಗಿಸಲು ಜಿಲ್ಲಾಧಿಕಾರಿಯವರನ್ನು ಪತ್ರಮುಖೇನ ವಿನಂತಿಸಿದ್ದೇನೆ. ಪೌರಾಡಳಿತ ಸಚಿವರ ಗಮನವನ್ನೂ ಸೆಳೆದಿದ್ದೇನೆ. ಆದಷ್ಟು ಶೀಘ್ರದಲ್ಲಿ ಸಾಧ್ಯವಾದಷ್ಟು ಸಿಬಂದಿಯನ್ನು ತುಂಬಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದೇನೆ.
-ಉಮಾನಾಥ ಕೋಟ್ಯಾನ್, ಶಾಸಕರು
Advertisement
ಯೋಜನೆಗಳ ಅನುಷ್ಠಾನಕ್ಕೆ ತೊಂದರೆ15ನೇ ಹಣಕಾಸು ಯೋಜನೆ ನಮಗೊದಗಿ ಬಂದಿದ್ದರೂ ಅಭಿಯಂತ ಹುದ್ದೆಗಳು ತೆರವಾಗಿರುವ ಕಾರಣ ಎಸ್ಟಿಮೇಟ್ ಮಾಡಿ ಸಲಾಗುತ್ತಿಲ್ಲ. ಸಿಬಂದಿ ಕೊರತೆಯಿಂದ ವಿವಿಧ ಕೆಲಸ ಕಾರ್ಯಗಳನ್ನು ಕ್ಲಪ್ತ ಸಮಯದಲ್ಲಿ ನೆರವೇರಿಸಲೂ ತೊಂದರೆ ಯಾಗುತ್ತಿದೆ. ತೆರಿಗೆ ಮತ್ತಿತರ ಸಂಪನ್ಮೂಲ ಸಂಗ್ರಹಕ್ಕೂ ತೊಡಕಾಗಿದೆ. ಈ ಎಲ್ಲ ಸಮಸ್ಯೆ ಗಳ ಬಗ್ಗೆ ಡಿಸಿ, ಶಾಸಕರ ಗಮನ ಸೆಳೆದಿದ್ದೇವೆ.
-ಪ್ರಸಾದ್‌ಕುಮಾರ್, ಪುರಸಭೆ ಅಧ್ಯಕ್ಷರು ಧನಂಜಯ ಮೂಡುಬಿದಿರೆ