ಕಾರ್ಕಳ/ಸಾಗರ: ಜನರಲ್ಲಿ ಆತಂಕ ಸೃಷ್ಟಿಸಿದ ಮಂಗನ ಕಾಯಿಲೆ ಇದೀಗ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವಿವಿಧೆಡೆಗೂ ವ್ಯಾಪಿಸಿರುವುದು ದೃಢಪಟ್ಟಿದೆ. ಬುಧವಾರ ಮತ್ತೆ ಆರು ಮಂದಿಗೆ ಜ್ವರ ಕಾಣಿಸಿಕೊಂಡಿದೆ.
ಅಲ್ಲದೆ, ಸಾಗರ ತಾಲೂಕಿನ ಅರಲಗೋಡು ಗ್ರಾಪಂನಿಂದ ಆರಂಭವಾಗಿ ರಾಜ್ಯದ ಮಲೆನಾಡು, ಕರಾವಳಿಯ ವಿವಿಧ ತಾಲೂಕುಗಳಲ್ಲಿ ಕಳೆದ ವಾರ ಮೃತಪಟ್ಟ ಮಂಗಗಳ ಪೋಸ್ಟ್ ಮಾರ್ಟ್‌ಂ ವರದಿ ಬುಧವಾರ ಲಭ್ಯವಾಗಿದೆ.
ಪರೀಕ್ಷೆಗೊಳಗಾದ ಎಲ್ಲಾ 18 ಪ್ರಕರಣಗಳಲ್ಲಿ ಮಂಗನ ಕಾಯಿಲೆಯ ವೈರಸ್ ಇರುವುದು ದೃಢಪಟ್ಟಿದೆ. ಸಾಗರ ತಾಲೂಕಿನ ಮೂರು ಪ್ರಕರಣಗಳು ಸೇರಿದಂತೆ ಕುಂದಾಪುರ, ಸಿದ್ದಾಪುರ, ಉಡುಪಿ, ಹೊಸನಗರ, ಶಿಕಾರಿಪುರ, ಸೊರಬ, ಕಾರ್ಕಳ ಮೊದಲಾದೆಡೆ ಸಾವನ್ನಪ್ಪಿದ ಮಂಗಗಳಲ್ಲೂ ಪುಣೆಯ ರಾಷ್ಟ್ರೀಯ ಸೂûಾಣುಜೀವಿ ಸಂಶೋಧನಾಲಯ ನಡೆಸಿದ ಪರೀಕ್ಷೆಯಲ್ಲಿ ಕೆಎಫ್‌ಡಿ ವೈರಸ್ ಇರೋದು ದೃಢಪಟ್ಟಿದೆ.
ಸಾಗರ ತಾಲೂಕು ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬುಧವಾರ ಆರು ಮಂದಿಗೆ ಜ್ವರ ಕಾಣಿಸಿಕೊಂಡಿದ್ದು, ಅವರೆಲ್ಲರನ್ನೂ ಮಣಿಪಾಲ್‌ಗೆ ರವಾನಿಸಲಾಗಿದೆ.
ಈ ಮಧ್ಯೆ, ತಾಲೂಕಿನ ಹೊನ್ನೇಸರದಲ್ಲಿ ಒಂದು ಮಂಗ ಮೃತಪಟ್ಟಿದ್ದು ಪಶು ಇಲಾಖೆ ಪೋಸ್ಟ್‌ಮಾಟ್ ಮಾಡಿ ಸ್ಯಾಂಪಲ್‌ನ್ನು ಪುಣೆಗೆ ಕಳುಹಿಸಿದೆ. ಬುಧವಾರ ಪುಣೆಯಿಂದ ಲಭ್ಯವಾದ ಪ್ರಯೋಗಾಲಯದ ವರದಿ ಪ್ರಕಾರ ಬಂದಗದ್ದೆ, ಸಿರಿವಂತೆ ಹಾಗೂ ಎಂಎಲ್ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಮೃತಪಟ್ಟ ಮಂಗಗಳ ಪೋಸ್ಟ್‌ಮಾರ್ಟ್‌ಂ ಸ್ಯಾಂಪಲ್‌ಗಳಲ್ಲಿ ಕೆಎಫ್‌ಡಿ ವೈರಸ್ ಕುರಿತ ಪರೀಕ್ಷೆ ಪಾಸಿಟಿವ್ ಬಂದಿದೆ.
ಇದೇ ವೇಳೆ, ಕಾರ್ಕಳ ತಾಲೂಕಿನ ನಕ್ರೆಯಲ್ಲಿ 1 ಹಾಗೂ ಕುಕ್ಕುಂದೂರು ಅಯ್ಯಪ್ಪನಗರದಲ್ಲಿ 1 ಕೋತಿಯ ಶವ ಬುಧವಾರ ಪತ್ತೆಯಾಗಿದೆ. ಒಂದು ಶವ ಸಂಪೂರ್ಣ ಕೊಳೆತಿದ್ದು, ಮತ್ತೂಂದರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ನಡುವೆ, ಸಾಗರ ಹಾಗೂ ಆಸುಪಾಸಿನ ಸುಮಾರು 83 ಜನರು ಇಲ್ಲಿಯವರೆಗೆ ಶಂಕಿತ ಮಂಗನ ಕಾಯಿಲೆ ರೋಗಕ್ಕೆ ಚಿಕಿತ್ಸೆ ಪಡೆಯಲು ಮಣಿಪಾಲದ
ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾ ರೆ.