Advertisement

ಭದ್ರಾವತಿ ತಾಲೂಕಿಗೂ ವ್ಯಾಪಿಸಿದ ಮಂಗನ ಮಾರಿ

01:00 AM Jan 25, 2019 | Team Udayavani |

ಶಿವಮೊಗ್ಗ: ಮಲೆನಾಡು ಭಾಗಕ್ಕೆ ಸೀಮಿತವಾಗಿದ್ದ ಮಂಗನ ಕಾಯಿಲೆ ಈಗ ಅರೆ ಮಲೆನಾಡು ಭದ್ರಾವತಿ ತಾಲೂಕಿಗೂ ವ್ಯಾಪಿಸಿದೆ. ಈ ಮೂಲಕ ಜಿಲ್ಲೆಯ ಶಿವಮೊಗ್ಗ ತಾಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳಲ್ಲೂ ಮಂಗನ ಕಾಯಿಲೆ ಕಾಣಿಸಿಕೊಂಡಂತಾಗಿದೆ.

Advertisement

ಭದ್ರಾವತಿ ತಾಲೂಕಿನ ಸಂಕ್ಲೀಪುರ ಹಾಗೂ ಬೆಳಗೆರೆ ಗ್ರಾಮದಲ್ಲಿ ಮೃತಪಟ್ಟ ಎರಡು ಮಂಗಗಳಲ್ಲಿ ಕೆಎಫ್‌ಡಿ ವೈರಸ್‌ ಪತ್ತೆಯಾಗಿದ್ದು ತೀವ್ರ ಆತಂಕಕ್ಕೆ ಎಡೆಮಾಡಿದೆ. ಆದರೆ ಈ ವರೆಗೆ ಯಾವುದೇ ವ್ಯಕ್ತಿಗಳಲ್ಲಿ ಕೆಎಫ್‌ಡಿ ವೈರಸ್‌ ಪತ್ತೆಯಾಗಿಲ್ಲ. ಮುಂಜಾಗ್ರತೆ ಕ್ರಮವಾಗಿ ವ್ಯಾಕ್ಸಿನೇಷನ್‌ ಮಾಡಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜ.23 ರವರೆಗೆ ಮಂಗನ ಕಾಯಿಲೆಯಿಂದ ಈ ವರೆಗೆ 8 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ 96 ಮಂದಿಯಲ್ಲಿ ಕೆಎಫ್‌ಡಿ ವೈರಸ್‌ ಪತ್ತೆಯಾಗಿದೆ. ಇದರಲ್ಲಿ 90 ಮಂದಿ ಸಾಗರ, ಆರು ಮಂದಿ ತೀರ್ಥಹಳ್ಳಿಯವರು. 75 ಮಂದಿ ಗುಣಮುಖರಾಗಿದ್ದು ಊರಿಗೆ ಮರಳಿದ್ದಾರೆ. 13 ಮಂದಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 91 ಮಂಗಗಳು ಮೃತಪಟ್ಟಿರುವುದು ಕಂಡಿದ್ದು, 14 ರಲ್ಲಿ ಮಾತ್ರ ಕೆಎಫ್‌ಡಿ ವೈರಸ್‌ ಇರುವುದು ದೃಢಪಟ್ಟಿದೆ.

ವೈದ್ಯಾಧಿಕಾರಿಗೂ ಸೋಂಕು: ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಡಗದ್ದೆ ಸಮೀಪದ ಕೆಲ ಗ್ರಾಮಗಳಲ್ಲಿ ಕೆಎಫ್‌ಡಿ ವೈರಸ್‌ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲು ತೆರಳಿದ್ದರು. ಈ ವೇಳೆ ಅವರಿಗೂ ಸೋಂಕು ತಗುಲಿದ್ದು, ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next