Advertisement

Bengaluru: ಬೆಂಗಳೂರಿನಲ್ಲಿ 1.35 ಕೋಟಿ ರೂ. ನಗದು ವಶ

10:38 AM Apr 14, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ಏರುತ್ತಿರುವಂತೆಯೇ ಕುರುಡು ಕಾಂಚಾಣದ ಕುಣಿತ ಜೋರಾಗಿದೆ. ಶನಿವಾರ ಬೆಂಗಳೂರಿನ ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿ ಚುನಾವಣಾಧಿಕಾರಿಗಳು 1.35 ಕೋಟಿ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.

Advertisement

ಈ ಸಂಬಂಧ ಎರಡು ಕಾರು ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ. ವಾಹನಗಳ ಮಾಲೀಕರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಯನಗರದ ಗಣಪತಿ ದೇವಾಲಯದ ಬಳಿ ಖಚಿತ ಮಾಹಿ ತಿಯ ಮೇರೆಗೆ ನಗದು ಸಾಗಿಸುತ್ತಿದ್ದ ಎರಡು ಕಾರುಗಳನ್ನು ಚುನಾವಣಾ ಸಿಬ್ಬಂದಿ ತಪಾಸಣೆ ನಡೆಸಿದರು. ಕಾರು ಪರಿಶೀಲನೆ ನಡೆಸಿದಾಗ ನಗದು ಪತ್ತೆಯಾಗಿದೆ.

1.35 ಕೋಟಿ ರೂ. ನಗದು ಸಿಕ್ಕಿದ್ದು ಆದಾಯ ತೆರಿಗೆ ಇಲಾಖೆಯ ವಶಕ್ಕೆ ನೀಡಲಾಗಿದೆ. ಅನುಮಾನ ಬಾರದಿರಲಿ ಎಂದು ಹಣ ವನ್ನು ಗೋಣಿಚೀಲದಲ್ಲಿ ತುಂಬಲಾಗಿತ್ತು. ಅಧಿಕಾರಿಗಳು ತಪಾಸಣೆಗೆ ಮುಂದಾದಾಗ ಮಾವಿನ ಹಣ್ಣಿನ ಬ್ಯಾಗ್‌ ಎಂದು ನೆಪ ಹೇಳಿ ಕಾರನ್ನು ಲಾಕ್‌ ಮಾಡಲಾಗಿದೆ.

ಅನುಮಾನಗೊಂಡ ಚುನಾಣಾಧಿಕಾರಿಗಳು ಕಾರಿನ ಗ್ಲಾಸ್‌ ಒಡೆದು ಪರಿಶೀಲಿಸಿದಾಗ ನಗದು ಪತ್ತೆಯಾಗಿದೆ. ಹಣ ಸಿಗುತ್ತಿದ್ದಂತೆ ಕಾರಿನಲ್ಲಿದ್ದವರು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಘಟನೆ ಬಗ್ಗೆ ಮಾಹಿತಿ ನೀಡಿದ ಚುನಾವಣಾಧಿಕಾರಿ ಮೌನೀಶ್‌ ಮುದ್ಗಿಲ್‌, ವಾಹನದಲ್ಲಿ ಹಣ ಇರುವ ಶಂಕೆ ವ್ಯಕ್ತಪಡಿಸಿ ಶನಿವಾರ ಬೆಳಗ್ಗೆ ನಮಗೊಂದು ಅಪರಿಚಿತ ಕರೆ ಬಂದಿತ್ತು. ಕರೆ ಬಂದ ಮೂರು ನಿಮಿಷಕ್ಕೆ ನಮ್ಮ ಅಧಿಕಾರಿ ವಿನೋತ್‌ ಪ್ರಿಯಾ ಅವರು ಸ್ಥಳಕ್ಕೆ ಭೇಟಿ ನೀಡಿದರು. ಅಧಿಕಾರಿಗಳು ಬಂದಾಗ ಸ್ಕೂಟರ್‌ನಿಂದ ಫಾರ್ಚೂನರ್‌ ಕಾರಿಗೆ ಹಣ ವರ್ಗಾಯಿಸುತ್ತಿದ್ದರು. ಫಾರ್ಚೂನರ್‌ನಲ್ಲಿ ಒಟ್ಟು ಐವರು ಇದ್ದರು.

ಈ ಬಗ್ಗೆ ಚುನಾವಣಾ ಮಹಿಳಾ ಅಧಿಕಾರಿ ಪ್ರಶ್ನಿಸಿದ್ದರು. ಒಬ್ಬರೇ ಇದ್ದಿದ್ದರಿಂದ ತಕ್ಷಣ ದ್ವಿಚಕ್ರ ವಾಹನದಲ್ಲಿದ್ದ ಒಂದು ಬ್ಯಾಗ್‌ ಜಪ್ತಿ ಮಾಡಿದ್ದರು. ಸ್ಥಳದಿಂದ ಪರಾರಿ ಆಗಿರುವ ಫಾರ್ಚೂನರ್‌ ಕಾರಿನ ನಂಬರ್‌ ನೋಟ್‌ ಮಾಡಲಾಗಿದ್ದು ಮುಂದಿನ ಕಾನೂನು ಕ್ರಮವನ್ನ ಪೊಲೀಸರು ತೆಗೆದುಕೊಳ್ಳಲಿದ್ದಾರೆ ಎಂದರು.

Advertisement

ಕಾರಿನ ಒಳಗಡೆ ಇದ್ದ ದಾಖಲಾತಿಗಳನ್ನ ಚುನಾವಣಾಧಿಕಾರ ಗಳು ವಶಕ್ಕೆ ಪಡೆದಿದ್ದಾರೆ. ಕಾರಿನ ಒಳಗಡೆ ಇದ್ದ ಒಂದು ಮೊಬೈಲ್‌ ಮತ್ತು ದಾಖಲಾತಿಗಳು ಚುನಾ ವಣಾಧಿಕಾರಿಗಳಿಗೆ ಲಭ್ಯವಾಗಿದ್ದು, ಸೋಮಶೇಖರ್‌ ಗಂಗಾಧರಯ್ಯ ಎಂಬುವರ ಹೆಸರಲ್ಲಿ ಕೆಲವು ದಾಖಲೆಗಳು ಪತ್ತೆ ಯಾಗಿವೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next