Advertisement

MONEY ಕೀ ಬಾತ್‌

12:30 AM Feb 18, 2019 | |

ವಿದೇಶಿ ವಿನಿಮಯ ಸಂಗ್ರಹ ದೃಢವಾಗಿದ್ದರೆ, ದೇಶದ  ವಿದೇಶಿ ವಿನಿಮಯ ದರವು ಸ್ಥಿರವಾಗಿ ಇರುತ್ತದೆ. ವಿದೇಶಿ ವಿನಿಮಯಕ್ಕಾಗಿ ಮಾರುಕಟ್ಟೆಯಲ್ಲಿ ಖರೀದಿಸಬೇಕಾದ ಅನಿವಾರ್ಯತೆ   ಇರದೇ, ನಮ್ಮದೇ ಸಂಗ್ರಹವನ್ನು ಬಳಕೆ ಮಾಡುವುದರಿಂದ  ವಿನಿಮಯ ದರದಲ್ಲಿ ಏರು  ಪೇರು ಆಗುವುದಿಲ್ಲ.  ಈ ಹಣವನ್ನು ತುರ್ತು ಸ್ಥಿತಿಯಲ್ಲಿ ಬಳಸಬಹುದು.  

Advertisement

ಒಂದು ದೇಶದ ಆರ್ಥಿಕ ಸ್ಥಿತಿ ಹೇಗಿದೆ ಅನ್ನೋದನ್ನು ತಿಳಿಯುವುದು .ಆ ದೇಶದ ವಿದೇಶಿ ವಿನಿಯಮದಿಂದ. ಇತ್ತೀಚಿನ ರಿಸರ್ವ್‌ ಬ್ಯಾಂಕ್‌ ವರದಿ ಪ್ರಕಾರ  ಫೆಬ್ರವರಿ ಮೊದಲ ವಾರದಲ್ಲಿ ಭಾರತದ  ವಿದೇಶಿ ವಿನಿಮಯ ಸಂಗ್ರಹದ ಪ್ರಮಾಣ 400.24 ಬಿಲಿಯನ್‌ ಡಾಲರ್‌.

ವಿದೇಶಿ ವಿನಿಮಯದಿಂದ ನಮಗೇನು ಲಾಭ? ಹೀಗಂತ ಕೇಳಬೇಡಿ. 

ನಮ್ಮ ಬಂಗಾರಕ್ಕೂ, ವಿದೇಶಿ ವಿನಿಮಯಕ್ಕೂ ಸಂಬಂಧ ಇದೆ. ಬಂಗಾರದ  ಬೆಲೆಯಲ್ಲಿ ಏರುಪೇರು ಆಗುವುದಕ್ಕೂ ಈ  ವಿನಿಮಯ ಕಾರಣವಾಗಬಹುದು.  ಈ ವಿದೇಶಿ ವಿನಿಮಯ ಸಂಗ್ರಹವನ್ನು, ವಿನಿಮಯದರ (exchange rate) ಮತ್ತು ಬಂಗಾರದ ದರದ ಏರುಪೇರನ್ನು  ರಿಸರ್ವ್‌ ಬ್ಯಾಂಕ್‌ ಪ್ರತಿ ವಾರವೂ  ಪುನರ್‌ ಮೌಲಿÂàಕರಣ (revaluation) ಮಾಡುತ್ತಿರುತ್ತದೆ. ವಿದೇಶಿ ವಿನಿಮಯದ ವ್ಯವಹಾರ ಮಾಡುವ  ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು, ಏಜೆಂಟರುಗಳು, ಪ್ರತಿ ಹದನೈದು ದಿನಕ್ಕೊಮ್ಮೆ ವ್ಯವಹಾರದ ಒಟ್ಟೂ ಮಾಹಿತಿಯನ್ನು  ಆರ್‌ಬಿಐಗೆ  ಸಲ್ಲಿಸಬೇಕು.  ಈ ಮಾಹಿತಿಯ  ಆಧಾರದ ಮೇಲೆ ರಿಸರ್ವ್‌ ಬ್ಯಾಂಕ್‌ ವಿದೇಶಿ ವಿನಿಮಯ ಸಂಗ್ರಹದ ಪ್ರಮಾಣವನ್ನು  ಲೆಕ್ಕ ಹಾಕುವುದು. 

ವಿದೇಶಿ ವಿನಿಮಯ ಸಂಗ್ರಹ  ಎಂದರೇನು?
ದೇಶದ  ಮಧ್ಯವರ್ತಿ ಅಥವಾ ಸೆಂಟ್ರಲ್‌ ಬ್ಯಾಂಕ್‌ (ಭಾರತದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ)ಹೊಂದಿರುವ  ಒಟ್ಟೂ ವಿದೇಶಿ  ಕರೆನ್ಸಿ ಮೌಲ್ಯವನ್ನು ವಿದೇಶಿ ವಿನಿಮಯ ಸಂಗ್ರಹ ಎನ್ನುತ್ತಾರೆ.  ಈ ಸಂಗ್ರಹದಲ್ಲಿ ವಿದೇಶಿಬ್ಯಾಂಕ್‌ಗಳ ನೋಟುಗಳು, ಬಾಂಡ್‌, ಠೇವಣಿ, ಸರ್ಕಾರಿ ಸೆಕ್ಯುರಿಟಿ, ಟ್ರೆಜರಿ ಬಿಲ್‌ಗಳು, ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿರುವ ಠೇವಣಿ, ಬಂಗಾರದ ದಾಸ್ತಾನು ಮತ್ತು  ಅಂತಾರಾಷ್ಟ್ರೀಯ ಹಣಕಾಸು ನಿಧಿ ನೀಡುವ special drawing  rights  ಎಲ್ಲವೂ ಸೇರಿರುತ್ತದೆ.  ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ 373.43 ಬಿಲಿಯನ್‌ ಡಾಲರ್‌ ವಿದೇಶಿ  ಕರೆನ್ಸಿ  ಸ್ವತ್ತುಗಳು (assets), ಬಂಗಾರ 22.68 ಬಿಲಿಯನ್‌ ಡಾಲರ್‌ಗಳು, ಸ್ಪೆಷಲ್‌ ಡ್ರಾಯಿಂಗ್‌ ರೈಟ್ಸ್‌ 1.47 ಬಿಲಿಯನ್‌ ಡಾಲರ್‌  ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ  2,65 ಬಿಲಿಯನ್‌  ಡಾಲರ್‌ಗಳು ಇವೆ.  ಅತಿ ಹೆಚ್ಚು ವಿದೇಶಿ ವಿನಿಮಯ ಸಂಗ್ರಹದಲ್ಲಿ ಭಾರತ,  ಮೊದಲ ಹತ್ತು ಸ್ಥಾನಗಳಲ್ಲಿ  7ನೇ  ಕ್ರಮಾಂಕದಲ್ಲಿ ಇದ್ದರೆ, 3,210 ಬಿಲಿಯನ್‌ ಡಾಲರ್‌ ಸಂಗ್ರಹ ಇರುವ  ಚೀನಾ  ದೇಶ  ಮೊದಲನೇ ಸ್ಥಾನದಲ್ಲಿ ಇದೆ. ಜಪಾನ್‌ ( 1259 ಬಿಲಿಯಲನ್‌ ಡಾಲರ್‌) ಎರಡನೇ ಸ್ಥಾನ, 804 ಬಿಲಿಯನ್‌  ಡಾಲರ್‌ ಇರುವ  ಸ್ವಿಟ್ಜರ್‌ಲ್ಯಾಂಡ್‌ ಮೂರನೇ ಸ್ಥಾನದಲ್ಲಿ ಇದೆ.

Advertisement

ವಿದೇಶಿ ವಿನಿಮಯ ಸಂಗ್ರಹದ ಮೂಲ ಯಾವುದು?
ಪ್ರಪಂಚದಲ್ಲಿ ಯಾವ ದೇಶವೂ ಸ್ವಾವಲಂಬಿಯಲ್ಲ. ಹಾಗಾಗಿ, ಅವುಗಳ ಬೇಡಿಕೆಗೆ ಅನುಗುಣವಾಗಿ ಆಮದು, ರಫ್ತು ವ್ಯವಹಾರಗಳು ನಡೆಯುತ್ತಿರುತ್ತವೆ.  ಡಾಲರ್‌, ಪೌಂಡ್‌, ಯುರೋ, ಯೆನ್‌ ಹೀಗೆ ಜಾಗತಿಕ ಕರೆನ್ಸಿಗಳಲ್ಲಿ ಚಾಲ್ತಿಯಲ್ಲಿವೆ. ನಮ್ಮ ಕರೆನ್ಸಿ ಭಾರತವನ್ನು ಬಿಟ್ಟರೆ, ನೇಪಾಳದಲ್ಲಿ ಮಾತ್ರ  ಚಾಲನೆಯಲ್ಲಿದೆ.  ಯಾವ ದೇಶವು  ಆಯಾತಕ್ಕಿಂತ, ನಿರ್ಯಾತ ಮಾಡುತ್ತದೆಯೋ, ಆ ದೇಶದ ಬಳಿ ಹೆಚ್ಚಿಗೆ ವಿದೇಶಿ ವಿನಿಮಯ ಇರುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ,  ಅಂತಾರಾಷ್ಟ್ರೀಯ  ವ್ಯಾಪಾರದಲ್ಲಿ ಭಾರತವು  ಕೊರತೆ ವ್ಯಾಪಾರ (Trade Deficit)  ಅನುಭವಿಸುತ್ತಿದೆ.   ಸುಮಾರು 11 ಮಿಲಿಯನ್‌ ಭಾರತೀಯರು ವಿದೇಶಗಳಲ್ಲಿ ದುಡಿಯುತ್ತಿದ್ದು, ಅವರು ಸುಮಾರು  80 ಬಿಲಿಯನ್‌ ಡಾಲರ್‌ ಹಣವನ್ನು ಭಾರತಕ್ಕೆ ಕಳುಹಿಸುತ್ತಿದ್ದಾರೆ.  ಇದು, ದೇಶದ ವಿದೇಶಿ ವಿನಿಮಯ ಸಂಗ್ರಹ ಸಮಾಧಾನಕರವಾಗಿರುವಂತೆ  ಮಾಡಿದೆ.  ಅತಿಹೆಚ್ಚು ವಿದೇಶಿ remittance ಬರುವ ದೇಶಗಳಲ್ಲಿ ಭಾರತ  ಮೊದಲನೇ  ಸ್ಥಾನದಲ್ಲಿ ಇದೆ.  ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಕೂಡಾ ಈ ನಿಟ್ಟಿನಲ್ಲಿ ಸುಮಾರು 60 ಬಿಲಿಯನ್‌ ಡಾಲರ್‌ ಕೂಡಿಸಿದೆ.  ಅಂತಾರಾಷ್ಟ್ರೀಯ  ಮಟ್ಟದಲ್ಲಿ ಈವರೆಗೆ  ವಿದೇಶಿ ನೇರ ಬಂಡವಾಳ ಹೂಡಿಕೆಗೆ ಚೀನಾ ಅಧ್ಯತೆ ಯಾಗಿದ್ದರೆ, ಈಗ  ಭಾರತ ಮೊದಲ ಸ್ಥಾನದಲ್ಲಿದೆ.  ದೇಶದ ವಿದೇಶಿ ವಿನಿಮಯ ಸಂಗ್ರಹಕ್ಕೆ  ಪ್ರವಾಸೋದ್ಯಮದ  ಕೊಡುಗೆಯೂ ಗಮನಾರ್ಹವಾಗಿರುತ್ತದೆ. 

ಬಳಕೆ ಹೇಗೆ?
ವಿದೇಶಿ ವಿನಿಮಯ ಸಂಗ್ರಹದ  ಹೆಚ್ಚಿನ  ಪ್ರಮಾಣ ವಿದೇಶಗಳಿಂದ ಆಯಾತ ಮಾಡಿಕೊಳ್ಳುವುದಕ್ಕೆ ಬಳಕೆಯಾಗುತ್ತದೆ. ಕಳೆದ ವರ್ಷದ  ಸೆಪ್ಟೆಂಬರ್‌ ಹೊತ್ತಿಗೆ  ಆಯಾತದ ಪ್ರಮಾಣ ವಿದೇಶಿ  ವಿನಿಮಯ ಸಂಗ್ರಹಕ್ಕೆ ಹತ್ತಿರವಿತ್ತಂತೆ. ಭಾರತದಲ್ಲಿ  ತೈಲ ಅವಶ್ಯಕತೆಯ ಒಟ್ಟು ಪ್ರಮಾಣದಲ್ಲಿ ಶೇ. 80ರಷ್ಟು  ವಿದೇಶದಿಂದ  ಬರುತ್ತಿದ್ದು, ನಮ್ಮ  ಅಪಾರ ವಿದೇಶಿ ವಿನಿಮಯ ತೈಲ  ಆಯಾತಕ್ಕೆ ಬಳಕೆಯಾಗುತ್ತದೆ. ಹಾಗೆಯೇ, ಪ್ರವಾಸೋದ್ಯಮ ಮತ್ತು ವಿದೇಶಿ ಶಿಕ್ಷಣಕ್ಕೆ ಕೂಡಾ  ಸಾಕಷ್ಟು ಬಳಕೆಯಾಗುತ್ತದೆ. ಕಳೆದ ವರ್ಷ  ಭಾರತೀಯರು  ವಿದೇಶಿ ಶಿಕ್ಷಣಕ್ಕಾಗಿ  8.17 ಬಿಲಿಯನ್‌ ಡಾಲರ್‌, ವಿದೇಶ ಪ್ರವಾಸಕ್ಕಾಗಿ  25 ಬಿಲಿಯನ್‌ ಡಾಲರ್‌ ಖರ್ಚು ಮಾಡಿದ್ದಾರೆ. ವಿದೇಶಿ ಪ್ರವಾಸೋದ್ಯಮದಲ್ಲಿ  ಜಗತ್ತಿನಲ್ಲಿ  ಭಾರತೀಯರ ಸಂಖ್ಯೆಯೇ ಹೆಚ್ಚು.  ವಿದೇಶಿಯರು  ನಮ್ಮ ದೇಶದಲ್ಲಿ ಹೂಡಿಕೆ ಮಾಡಿದಂತೆ, ಭಾರತೀಯರೂ ವಿದೇಶದಲ್ಲಿ ಹೂಡಿಕೆ ಮಾಡುತ್ತಾರೆ. ಭಾರತೀಯರು ವಿದೇಶದಲ್ಲಿ  ರಿಯಲ್‌ ಎಸ್ಟೇಟ್‌ನಲ್ಲಿ , ಈಕ್ವಿಟಿ ಕ್ಯಾಪಿಟಲ್‌ ನಲ್ಲಿ  ಹೂಡಬಹುದು. ಒಬ್ಬರು ಗರಿಷ್ಠ 25,0000 ಡಾಲರ್‌ ಹೂಡಿಕೆ ಮಾಡಬಹುದು. 2017-18 ರಲ್ಲಿ ಭಾರತೀಯರು 11.33 ಬಿಲಿಯನ್‌ ಡಾಲರ್‌ ಹೂಡಿದ್ದರೆ, ಈ ವರ್ಷ  ಈವರೆಗೆ 10. 96 ಬಿಲಿಯನ್‌ ಡಾಲರ ಹೂಡಿಕೆ ಮಾಡಿ¨ªಾರೆ. 

ಅರ್ಥಿಕತೆಗೆ ಹೇಗೆ  ಬಲ ನೀಡುತ್ತದೆ?
ವಿದೇಶಿ ವಿನಿಮಯ ಸಂಗ್ರಹ ದೃಢವಾಗಿದ್ದರೆ, ದೇಶದ  ವಿದೇಶಿ ವಿನಿಮಯ ದರವು ಸ್ಥಿರವಾಗಿ ಇರುತ್ತದೆ. ವಿದೇಶಿ ವಿನಿಮಯಕ್ಕಾಗಿ ಮಾರುಕಟ್ಟೆಯಲ್ಲಿ ಖರೀದಿಸಬೇಕಾದ ಅನಿವಾರ್ಯತೆ   ಇರದೇ, ನಮ್ಮದೇ ಸಂಗ್ರಹವನ್ನು ಬಳಕೆ ಮಾಡುವುದರಿಂದ  ವಿನಿಮಯ ದರದಲ್ಲಿ ಏರು  ಪೇರು ಆಗುವುದಿಲ್ಲ.  ಈ ಹಣವನ್ನು ತುರ್ತು ಸ್ಥಿತಿಯಲ್ಲಿ ಬಳಸಬಹುದು.  ಸಾಕಷ್ಟು ವಿದೇಶಿ ವಿನಿಮಯ  ಸಂಗ್ರಹವಿದ್ದರೆ, ವಿದೇಶಿ  ಹೂಡಿಕೆದಾರರಿಗೆ  ತಮ್ಮ ಹೂಡಿಕೆ ಬಗೆಗೆ  ಭರವಸೆ ಬರುತ್ತದೆ.

ಪ್ರಮಾಣ  ಎಷ್ಟಿರಬೇಕು?
ಈ ಸಂಗ್ರಹ ಎಷ್ಟಿರಬೇಕು ಎನ್ನುವುದರ ಬಗೆಗೆ ಯಾವುದೇ ಸ್ಪಷ್ಟ   ನೀತಿ ನಿಯಮಗಳಿಲ್ಲ. ವಿದೇಶಿ ವಿನಿಮಯ ಸಂಗ್ರಹ ಹೆಚ್ಚು ಇರುವಷ್ಟು ದೇಶದ ಅರ್ಥಿಕತೆಗೆ  ಒಳ್ಳೆಯದು ಎನ್ನುವ ಭಾವನೆ ಮಾತ್ರ  ಇದೆ.  1993 ರಲ್ಲಿ ರಂಗರಾಜನ್‌ ಸಮಿತಿಯು, ಈ ಪ್ರಮಾಣ ಮೂರು ತಿಂಗಳ  ಆಮದು ಬಿಲ…ಅನ್ನು ( Import Bill) ಪಾವತಿಸುವಷ್ಟು  ಇದ್ದರೆ ಸಾಕು ಎಂದು ಅಭಿಪ್ರಾಯ ಪಟ್ಟಿದೆ.   ಹೊರಗಿನ ಋಣಭಾರ- ಹೊರೆಯನ್ನು ಇರಿಸಿಕೊಂಡು, ಅದಕ್ಕೆ ಬಡ್ಡಿ ತೆರುತ್ತಾ ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸಿಕೊಳ್ಳುವುದನ್ನು ಹಣಕಾಸು ಸ್ಥಿತಿಯ  ಒಳ್ಳೆಯ ನಿರ್ವಹಣೆ ಎನ್ನಲಾಗದು.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next