Advertisement

“ಭಕ್ತಿ”ಯ ಪರಾಕಾಷ್ಠೆ..ಮೋದಿ ಅವರಲ್ಲಿ ಸರ್ವಾಧಿಕಾರಿ ಗುಣಗಳಿವೆ; ಗುಹಾ

04:11 PM Oct 28, 2017 | Sharanya Alva |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿ ಗುಣವನ್ನು ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಯಾರ ಬಳಿ ಸರ್ವಾಧಿಕಾರಿ ಗುಣ ಇಲ್ಲವೋ ಅಂತಹ ಮುಖಂಡರನ್ನು ಜನರು ಬೆಂಬಲಿಸಬೇಕೆಂದು ಹಿರಿಯ ಲೇಖಕ, ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಶನಿವಾರ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಾಹಿತ್ಯೋತ್ಸವದಲ್ಲಿ “ಅತೀರೇಕದ ರಾಷ್ಟ್ರಭಕ್ತಿ ಮತ್ತು ದೇಶಪ್ರೇಮ” ವಿಷಯದ ಬಗ್ಗೆ ಉಪನ್ಯಾಸ ನೀಡಿದ ಗುಹಾ, ಈ ಸಂದರ್ಭದಲ್ಲಿ ಭಾರತದಲ್ಲಿನ ಎಡ ಮತ್ತು ಬಲಪಂಥೀಯರ ವಿರುದ್ಧ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದರು. ಇವರ ವೈಫಲ್ಯದಿಂದಾಗಿಯೇ ದೇಶದಲ್ಲಿ ಅತಿಯಾದ ರಾಷ್ಟ್ರಪ್ರೇಮ ಬೆಳೆಯಲು ಕಾರಣವಾಗಿದೆ ಎಂದು ದೂರಿದರು.

ಭಾರತದಲ್ಲಿ ನಡೆಯುವ ಸಾಹಿತ್ಯೋತ್ಸವ ತುಂಬಾ ಗ್ಲಾಮರಸ್ ಆಗಿರಬೇಕೆಂಬ ನಿಯಮವಿದೆ. ಹೀಗಾಗಿಯೇ ಅದಕ್ಕೆ ಕಾರ್ಪೋರೇಟ್ ಸಂಸ್ಥೆಗಳು ದೊಡ್ಡ ಮೊತ್ತದ ದೇಣಿಗೆ ನೀಡುತ್ತವೆ ಎಂದು ದೇಶದಲ್ಲಿ ನಡೆಯುತ್ತಿರುವ ಸಾಹಿತ್ಯೋತ್ಸವದ ಬಗ್ಗೆ ಅಭಿಪ್ರಾಯವ್ಯಕ್ತಪಡಿಸಿದರು.

ದೇಶಪ್ರೇಮ ಮತ್ತು ಅತಿರೇಕದ ರಾಷ್ಟ್ರಭಕ್ತಿ 19ನೇ ಶತಮಾನದ ಯುರೋಪಿಯನ್ ರಾಷ್ಟ್ರಪ್ರೇಮದ ಮಾದರಿಯಾಗಿದೆ. ಬೇರೆಯವರಿಗಿಂತ ಒಂದು ಧರ್ಮ, ಒಂದು ಭಾಷೆ ಹಾಗೂ ಒಂದು ಸಂಸ್ಕೃತಿ ತುಂಬಾ ಶ್ರೇಷ್ಠವಾದದ್ದು ಎಂಬ ಭಾವನೆ ತಳೆಯಲಾಗಿತ್ತು. ಅದಕ್ಕೆ ಉದಾಹರಣೆ ಎಂಬಂತೆ ಮೊಹಮ್ಮದ್ ಅಲಿ ಜಿನ್ನಾ..ಅದರ ಪ್ರತಿಫಲವೇ ಜಿನ್ನಾ ಮಾದರಿಯ ಪಾಕಿಸ್ತಾನ ಜನ್ಮತಳೆದಿದೆ ಎಂದು ವಿಶ್ಲೇಷಿಸಿದರು.

ಜಗತ್ತಿನಲ್ಲಿ ಅಮೆರಿಕ ಅತಿ ದೊಡ್ಡ ರಾಷ್ಟ್ರಪ್ರೇಮವನ್ನು ಹೊಂದಿರುವ ದೇಶವಾಗಿದೆ ಎಂದರು. ಭಕ್ತಿ ರಾಜಕೀಯಗೊಂಡಾಗ ಅಲ್ಲಿ ಸರ್ವಾಧಿಕಾರ ಬೆಳೆಯುತ್ತದೆ ಎಂದು ಅಂಬೇಡ್ಕರ್‍‍ ಅವರು ತಮ್ಮ ಕೊನೆಯ ಭಾಷಣದಲ್ಲಿ ಹೇಳಿದ್ದರು. ಧರ್ಮ ಮಾರ್ಗದಲ್ಲಿರುವ ಭಕ್ತಿ ದೇವರನ್ನು ತಲುಪುವಂತಾದ್ದು, ಆದರೆ ರಾಜಕೀಯದಲ್ಲಿನ ಭಕ್ತಿ ಮಾರ್ಗ ಸರ್ವಾಧಿಕಾರಕ್ಕೆ ದಾರಿಯಾಗಿದೆ. ಮಮತಾ ಬ್ಯಾನರ್ಜಿ ಮತ್ತು ನರೇಂದ್ರ ಮೋದಿ ಅವರಲ್ಲಿ ಸರ್ವಾಧಿಕಾರಿ ಗುಣಗಳಿವೆ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next