Advertisement

Atul Subhash Case: ಟೆಕಿ ಅತುಲ್‌ ಸುಭಾಷ್‌ ವಿಡಿಯೋ ವೈರಲ್‌

12:34 PM Dec 12, 2024 | Team Udayavani |

ಬೆಂಗಳೂರು: ಖಾಸಗಿ ಕಂಪನಿಯ ನಿರ್ದೇಶಕ, ಉತ್ತರ ಪ್ರದೇಶದ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣ ಮತ್ತೂಂದು ತಿರುವು ಪಡೆದುಕೊಡಿದ್ದು, ಆತ್ಮಹತ್ಯೆಗೂ ಮೊದಲು ಅತುಲ್‌ ಸುಭಾಷ್‌ ಮಾಡಿದ್ದ ಸೆಲ್ಫಿ ವಿಡಿಯೋ ವೈರಲ್‌ ಆಗಿದೆ.

Advertisement

90 ನಿಮಿಷಗಳ ವಿಡಿಯೋದಲ್ಲಿ ಪತ್ನಿಯ ನಿಖಿತಾ ಮತ್ತು ಆಕೆಯ ಕುಟುಂಬ ಸದಸ್ಯರು ನೀಡಿದ ನಿರಂತರ ಕಿರುಕುಳ ಹಾಗೂ ದೌರ್ಜನ್ಯದ ಬಗ್ಗೆ ಉಲ್ಲೇಖೀಸಿರುವ ಅತುಲ್‌, ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಮಾತ್ರವಲ್ಲದೆ, ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಟೆಸ್ಲಾಂ ಕಂಪನಿಯ ಸಿಇಓ ಎಲಾನ್‌ ಮಸ್ಕ್ ಬಳಿ ಸಹಾಯ ಕೇಳಿದ್ದಾರೆ.

ಪತ್ನಿ ನಿಖಿತಾ ಹಾಗೂ ಆಕೆಯ ಕುಟುಂಬದವರು ಚಿತ್ರಹಿಂಸೆ ನೀಡುತ್ತಿದ್ದರು. ತಪ್ಪು ಇಲ್ಲದಿದ್ದರೂ ನನ್ನ ವಿರುದ್ಧ 9 ಪ್ರಕರಣ ದಾಖಲು ಮಾಡಿದ್ದರು. ಹೈಕೋರ್ಟ್‌ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ 8 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಒಂದು ಪ್ರಕರಣವನ್ನು ಆಕೆ ವಾಪಸ್‌ ಪಡೆದುಕೊಂಡಿದ್ದರು ಎಂದಿರುವ ಅತುಲ್‌, ಭಾರತದಲ್ಲಿ ನರಮೇಧ ನಡೆಯುತ್ತಿದೆ. ಜನರನ್ನು ರಕ್ಷಿಸಿ ವಾಕ್‌ ಸ್ವಾತಂತ್ರ್ಯ ಮರುಸ್ಥಾಪಿಸಿ ಎಂದು ಡೊನಾಲ್ಡ್‌ ಟ್ರಂಪ್‌ ಮತ್ತು ಎಲಾನ್‌ ಮಸ್ಕ್ಗೆ ಕೋರಿದ್ದಾನೆ.

ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅಂತ್ಯಕ್ರಿಯೆಗೆ ಪತ್ನಿ ಬರುವುದು ಬೇಡ. ತನ್ನ ಮಗನನ್ನು ಪೋಷಕರಿಗೆ ಒಪ್ಪಿಸಿ. 4 ವರ್ಷದ ಪುತ್ರನಿಗೆ ಉಡುಗೊರೆ ತಲುಪಿಸಿ. ನ್ಯಾಯ ಸಿಗುವವರೆಗೂ ಚಿತಾಭಸ್ಮವನ್ನು ನೀರಿನಲ್ಲಿ ಬಿಡುವುದು ಬೇಡ. ನ್ಯಾಯ ಕೊಡಲು ಸಾಧ್ಯ ಆಗದಿದ್ದರೆ ಚಿತಾಭಸ್ಮವನ್ನು ನ್ಯಾಯಾಲಯದ ಎದುರು ಚರಂಡಿಗೆ ಹಾಕಿ ಎಂದು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next