Advertisement
ಪಟ್ಟಿಯಲ್ಲಿನ ಮಹತ್ವಪೂರ್ಣ ಬದಲಾವಣೆ ಎಂದರೆ ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಹಾಲಿ ಸಂಸದ ಎಲ್.ಕೆ.ಆಡ್ವಾಣಿ ಸ್ಥಾನದಲ್ಲಿ ಬಿಜೆಪಿ ಅಧ್ಯಕ್ಷ ಅಧ್ಯಕ್ಷ ಅಮಿತ್ ಷಾ ಸ್ಪರ್ಧಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಎದುರು ಅಮೇಥಿಯಲ್ಲಿ ಸ್ಮತಿ ಇರಾನಿ ಸ್ಪರ್ಧಿಸಲಿದ್ದಾರೆ.
Related Articles
Advertisement
ಶೀಘ್ರದಲ್ಲಿಯೇ ಬಿಹಾರ ಪಟ್ಟಿ: ಬಿಹಾರದ ಪಟ್ಟಿ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆ.ಪಿ.ನಡ್ಡಾ 17 ಮಂದಿ ಮೊದಲ ಪಟ್ಟಿಗೆ ಬಿಜೆಪಿ ಚುನಾವಣಾ ಸಮಿತಿ ಅನುಮತಿ ನೀಡಿದೆ. ಅದನ್ನು ರಾಜ್ಯ ಘಟಕಕ್ಕೆ ಕಳುಹಿಸಲಾಗಿದೆ. ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದಿದ್ದಾರೆ.
ಮೋದಿ ಕ್ಷೇತ್ರ ಬದಲಾವಣೆ ಇಲ್ಲಪ್ರಧಾನಿ ನರೇಂದ್ರ ಮೋದಿ ಈ ಬಾರಿ ಒಡಿಶಾದ ಪುರಿಯಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಊಹಾಪೋಹ ಈಗ ಹುಸಿಯಾಗಿದೆ. ಕಳೆದ ಬಾರಿ ವಾರಾಣಸಿಯಲ್ಲಿ ಎಎಪಿಯ ಅರವಿಂದ ಕೇಜ್ರಿವಾಲ್ ಹಾಗೂ ಕಾಂಗ್ರೆಸ್‌ನ ಅಜಯ್ ರಾಯ್ ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಒಡಿಶಾ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮಹತ್ವದ ಜಯಗಳಿಸಿದ್ದರಿಂದಾಗಿ, ಅಲ್ಲಿ ಮೋದಿ ಸ್ಪರ್ಧಿಸುವ ಊಹಾಪೋಹ ಕೇಳಿಬಂದಿತ್ತು. ಆಡ್ವಾಣಿ ಸ್ಪರ್ಧೆ ಇಲ್ಲ
ಬಿಜೆಪಿಯ ಹಿರಿಯ ನಾಯಕ ಲಾಲಕೃಷ್ಣ ಆಡ್ವಾಣಿ ವಯಸ್ಸಿನ ಕಾರಣದಿಂದ ಈ ಬಾರಿ ಸ್ಪರ್ಧಿಸುತ್ತಿಲ್ಲ. ಮೂಲಗಳ ಪ್ರಕಾರ ಅವರು ಸ್ಪರ್ಧಿಸಲು ನಿರಾಕರಿ ಸಿ ದ್ದರಿಂದ, ಗಾಂಧಿನಗರದಿಂದ ಅಮಿತ್ ಶಾ ಸ್ಪರ್ಧಿಸಲಿದ್ದಾರೆ. ಈಗಾಗಲೇ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲದ ಆಡ್ವಾಣಿ, ಸಾರ್ವಜನಿಕ ಜೀವನದಿಂ ದಲೇ ದೂರವಾಗಿದ್ದಂತಿದೆ. ಎನ್‌ಪಿಪಿ ಪಟ್ಟಿಯಲ್ಲಿ ಬಿಜೆಪಿ ವಲಸಿಗರೇ ಹೆಚ್ಚು
ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ನ್ಯಾಷನಲ್ ಪೀಪಲ್ಸ್ ಪಾರ್ಟಿ 29 ಕ್ಷೇತ್ರಗಳಿಗಾಗಿ ಅಭ್ಯರ್ಥಿಗಳ ಮೊದಲಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಗೃಹ ಸಚಿವ ಕುಮಾರ್ ವೈ, ಪ್ರವಾಸೋದ್ಯಮ ಸಚಿವ ಜರ್ಕಾರ್ ಗಾಮ್ಲಿನ್‌ರನ್ನು ಕ್ರಮವಾಗಿ ಬಾಮೆಂಗ್ ಮತ್ತು ಆಲೋ (ಪೂರ್ವ) ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ. ಅವರಿಬ್ಬರಿಗೆ ಬಿಜೆಪಿಯಿಂದ ಟಿಕೆಟ್ ನಿರಾಕರಿಸಲಾಗಿತ್ತು. ಬಿಜೆಪಿಯಿಂದ ಟಿಕೆಟ್ ನಿರಾಕರಿಸಲ್ಪಟ್ಟಿರುವ ತಪುಕ್ ಟಕು, ಪಾನಿ ತರಮ್, ತಾಗ್ವಾಂಗ್ ವಾಂಘಂ, ಪಕ್ನಾಗಾ ಬಾಗೆ ಅವರಿಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿ ಟಿಕೆಟ್ ನೀಡಿದೆ. ಒಟ್ಟು 17 ಮಂದಿ ಹೊಸಬರಿಗೆ ಮೇಘಾಲಯ ಮುಖ್ಯಮಂತ್ರಿ ಕೊನಾರ್ಡ್ ಸಂಗ್ಮಾ ನೇತೃತ್ವದ ಪಕ್ಷ ಟಿಕೆಟ್ ನೀಡಿದೆ. ಏ.11ರಂದು ಮೊದಲ ಹಂತದ ಚುನಾವಣೆಯಲ್ಲಿ ಲೋಕಸಭೆ, ವಿಧಾನಸಭೆಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.