Advertisement

Modi: ರಿಕಿ ಕೇಜ್‌ ಸಂಯೋಜನೆಗೆ ಮೋದಿ ಮೆಚ್ಚುಗೆ

12:31 AM Aug 16, 2023 | Team Udayavani |

ಹೊಸದಿಲ್ಲಿ: ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ರಿಕಿ ಕೇಜ್‌ ಅವರು ದೊಡ್ಡ ಆರ್ಕೆಸ್ಟ್ರಾ ತಂಡದೊಂದಿಗೆ ರಾಷ್ಟ್ರ ಗೀತೆ ಹಾಡಿನ ಸಂಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಕೆಲವು ದಿನಗಳ ಹಿಂದೆ ಬ್ರಿಟನ್‌ ರಾಜಧಾನಿ ಲಂಡನ್‌ನ ಪ್ರಸಿದ್ಧ ಅಬ್ಬೆ ರೋಡ್‌ ಸ್ಟುಡಿಯೋಸ್‌ನಲ್ಲಿ ರಾಯಲ್‌ ಫಿಲ್ಹಾಮೋರ್ನಿಕ್‌ ಆರ್ಕೆಸ್ಟ್ರಾ (ಆರ್‌ಪಿಒ)ದ 100 ಕಲಾವಿದರು ಸೇರಿ ಭಾರತದ ರಾಷ್ಟ್ರಗೀತೆ “ಜನ ಗಣ ಮನ…’ ಹಾಡಿದರು. ಈ ವೀಡಿಯೋವನ್ನು ರಿಕಿ ಕೇಜ್‌ ಟ್ವಿಟರ್‌ನಲ್ಲಿ ಶೇರ್‌ ಮಾಡಿ ದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ಅದ್ಭುತವಾಗಿದೆ. ಇದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ತರುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next