Advertisement

ಎಲ್ಲ 39 ಲೋಕಸಭಾ ಸ್ಥಾನಗಳಿಗೆ MNM ಸ್ಪರ್ಧೆ: ಕಮಲಹಾಸನ್‌

01:56 PM Feb 07, 2019 | Team Udayavani |

ಕೊಯಮುತ್ತೂರು : ತನ್ನ ಮಕ್ಕಳ್‌ ನೀತಿ ಮಯ್ಯಮ್‌ ಪಕ್ಷ  (ಎಂಎನ್‌ಎಂ) ತಮಿಳು ನಾಡಿನ ಎಲ್ಲ 39 ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಲಿದೆ ಎಂದು ನಟ – ರಾಜಕಾರಣಿ ಕಮಲ ಹಾಸನ್‌ ಅವರಿಂದು ಹೇಳಿದರು. 

Advertisement

ಆ ಮೂಲಕ ಅವರು ಇತರ ಪಕ್ಷಗಳೊಂದಿಗೆ ರಾಜಕೀಯ ಮೈತ್ರಿ ಸಾಧಿಸುವ ತನ್ನನೀತಿಯಲ್ಲಿ ಆಗಿರುವ ಬದಲಾವಣೆಯನ್ನು  ಬಹಿರಂಗಪಡಿಸಿದರು. 

ನಾವು ನಮ್ಮ ಶುದ್ಧ ಹಸ್ತಗಳಿಂದ ಜನರಿಗೆ ಸೇವೆ ಸಲ್ಲಿಸಲು ಯತ್ನಿಸುತ್ತಿದ್ದೇವೆ.ನಾವು ಯಾವುದೇ ಡ್ರಾವಿಡ ಪಕ್ಷದೊಂದಿಗೆ ಚುನಾವಣಾ ಮೈತ್ರಿ ಹೊಂದಲು ಬಯಸುವುದಿಲ್ಲ ಎಂದು 64ರಹರೆಯದ ಕಮಲಹಾಸನ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಈ ಹಿಂದೆ ಕಮಲಹಾಸನ್‌ ಅವರು ಸಮಾನ ಮನಸ್ಕ ಪಕ್ಷಗಳೊಂದಿಗೆ ಲೋಕಸಭಾ ಚುನಾವಣೆಗಾಗಿ ಮೈತ್ರಿ ಹೊಂದಲು ಬಯಸಿರುವುದಾಗಿ ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next