Advertisement
ಕಂಪ್ಲಿಯ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಕೈಗೊಂಡ ಪಾದಯಾತ್ರೆ ಅಂಬೇಡ್ಕರ್ ವೃತ್ತದ ಮೂಲಕ ಸಣಾಪುರ ರಸ್ತೆಯಲ್ಲಿರುವ ಶಾರದಾ ಶಾಲೆ ಆವರಣಕ್ಕೆ ತಲುಪಿತು. ಬಳಿಕ ತೆರೆದ ವೇದಿಕೆಯಲ್ಲಿ ಎರಡನೇ ಹಂತದ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷ, ಸಿಎಂ ಸಿದ್ದರಾಮಯ್ಯ, ಮುಸಲ್ಮಾನರ ವಿರುದ್ಧ ಆರೋಪಗಳ ಸುರಿಮಳೆಗೈದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಸಿಎಂ ಸಿದ್ದರಾಮಯ್ಯ ಪದೇಪದೆ ತನ್ನನ್ನು ತಾನು ದೇವರಾಜ ಅರಸು ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಅರಸು ಅವರು ಜನರಿಗೆ ಭೂಮಿ ನೀಡಿದರೆ, ಸಿಎಂ ಸಿದ್ದರಾಮಯ್ಯ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಅಡ್ಜೆಸ್ಟ್ಮೆಂಟ್ ರಾಜಕಾರಣಿಗಳು ರಾಜ್ಯದಲ್ಲಿ ತುಂಬಿಕೊಂಡಿದ್ದಾರೆ. ಅಡ್ಜೆಸ್ಟ್ಮೆಂಟ್ ರಾಜಕಾರಣಿಗಳು ವಕ್ಫ್ ಹೋರಾಟ ಹಳ್ಳ ಹಿಡಿಸುತ್ತಾರೆಂದು ನಾವು ಹೋರಾಟ ಮಾಡ್ತಿದ್ದೇವೆ. ಮೊದಲ ಹಂತದ ಹೋರಾಟದ ಬಳಿಕ ಜೆಪಿಸಿ, ಕೇಂದ್ರ ಸಚಿವರ ಜೊತೆಗೆ ಮಾತನಾಡಿ ಬಂದಿದ್ದೇವೆ. ಭಾಷಣ ಕೊಡುವ ಹೋರಾಟ ನಮ್ಮದಲ್ಲ ಬಡವರಿಗೆ ನ್ಯಾಯ ಕೊಡಿಸುವ ಉದ್ದೇಶ ಮಾತ್ರವಿದೆ ಎಂದು ಹೇಳಿದರು.
Related Articles
Advertisement
ನಮ್ಮದು 130 ಸ್ಥಾನ ತರುವ ಗುಂಪು: ಬಸನಗೌಡ ಯತ್ನಾಳ್“ಭಿನ್ನಮತೀಯರ ಮೇಲೆ ಹೈಕಮಾಂಡ್ ಗರಂ ಆದರೆ, ಕಂಪ್ಲಿಗೆ ಏಕೆ ಬರುತ್ತೇವೆ? ನಾವೆಲ್ಲ ಬಿಜೆಪಿ ಗುಂಪು, ಮುಂದಿನ ದಿನಗಳಲ್ಲಿ 130 ಸ್ಥಾನಗಳನ್ನು ತರುವ ಗುಂಪು, ಸಿಎಂ ಆಗಿ ಲೂಟಿ ಮಾಡೋ ಗುಂಪು ಅಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಗುಡುಗಿದರು. ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿ, ವಕ್ಫ್ ವಿರುದ್ಧ ಹೋರಾಟ ಮಾಡುವ ನಮ್ಮನ್ನು ಭಿನ್ನಮತೀಯರು ಎನ್ನುತ್ತಾರೆ. ಯತ್ನಾಳ್ ಉಚ್ಚಾಟನೆ ಎಂದು ಪ್ರಚಾರ ಮಾಡುತ್ತಾರೆ. ಅದು ಸಾಧ್ಯವೇ? ಎಂದು ಪ್ರಶ್ನಿಸಿದರು. ನಾವೆಲ್ಲ ಬಿಜೆಪಿ ಗುಂಪು. ಸಿಎಂ ಅಗಿ ಲೂಟಿ ಮಾಡೋ ಗುಂಪು ಅಲ್ಲ. ಎಷ್ಟೇ ಆಸ್ತಿ ಮಾಡಿದರೂ, ಗುಂಡಿಗೆ ಹಾಕೋದು ತಪ್ಪಲ್ಲ ಎಂದು ಹಾಡು ಹಾಡಿ ವ್ಯಂಗ್ಯವಾಡಿದರು.