Advertisement

ಅಚಲಾಪೂರದ ಗರ್ಭಿಣಿಯರ ಸಮಸ್ಯೆಗೆ ಶಾಸಕ ಮುನವಳ್ಳಿ ಸ್ಪಂದನೆ

05:29 PM Feb 12, 2022 | Team Udayavani |

ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದ ಅಚಲಾಪೂರ ಗ್ರಾಮದ ಗರ್ಭಿಣಿಯರು ಮಾಸಿಕ ಚಿಕಿತ್ಸೆ ಹಾಗೂ ಸರಕಾರಿ ಯೋಜನೆಗಳನ್ನು ಪಡೆಯಲು 30 ಕಿ.ಮೀ.ದೂರದ ಬೊಮ್ಮನಾಳ ಸರಕಾರಿ ಆಸ್ಪತ್ರೆಯ ಬದಲು ಸಮೀಪದ 4 ಕಿ.ಮೀ.ಸಮೀಪವಿರುವ ಇರಕಲ್ ಗಡಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡುವಂತೆ ಆಚಲಾಪೂರ ಗ್ರಾಮದ 20 ಕ್ಕೂ ಹೆಚ್ಚು ಗರ್ಭಿಣಿಯರು ಶನಿವಾರ ಶಾಸಕ ಪರಣ್ಣ ಮುನವಳ್ಳಿಯವರಿಗೆ ಮನವಿ ಸಲ್ಲಿಸಿದರು.

Advertisement

ಕೂಡಲೇ ಸ್ಪಂದಿಸಿದ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಆರೋಗ್ಯ ಸಂರಕ್ಷಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾತನಾಡಿ, ಸರಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ಪ್ರಾಯೋಗಿಕ ಚಿಂತನೆ ಮಾಡಬೇಕು. ಅಚಲಾಪೂರ ಬೊಮ್ಮನಾಳ ಮಧ್ಯೆ 30 ಕಿ.ಮೀ. ಅಂತರವಿದ್ದು ಇರಕಲ್‌ಗಡಾ ಕೇವಲ 4 ಕಿ.ಮೀ.ಅಂತರವಿದ್ದು ಗರ್ಭಿಣಿಯರು 30 ಕಿ.ಮೀ. ದೂರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಅಥವಾ ಸರಕಾರಿ ಯೋಜನೆ ಪಡೆಯುವುದು ದುಸ್ತಾರವಾಗಿದ್ದು ಕೂಡಲೇ ಹತ್ತಿರ ಇರಕಲ್‌ಗಡಾ ಸರಕಾರಿ ಆಸ್ಪತ್ರೆಯಲ್ಲಿ ಅಚಲಾಪೂರ ಗ್ರಾಮದ ಗರ್ಭಿಣಿಯರು ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದರು.

ನಂತರ ಗರ್ಭಿಣಿಯರೊಂದಿಗೆ ಮಾತನಾಡಿ ಮೊಬೈಲ್ ಕರೆ ಮಾಡಿದರೆ ಸಾಕು ನೀವೆಲ್ಲ ಇಷ್ಟು ದೂರ ಆಗಮಿಸಿದ್ದು ಸರಿಯಲ್ಲ. ಅಧಿಕಾರಿಗಳು ಅವೈಜ್ಞಾನಿಕವಾಗಿ ಕೆಲವು ನಿಯಮಗಳನ್ನು ಮಾಡಿರುತ್ತಾರೆ. ಗರ್ಭಿಣಿಯರು ಇನ್ನೊಂದು ಜೀವಕ್ಕೆ ಪ್ರಾಣ ನೀಡುವವರು ನೀವು ಹೀಗೆಲ್ಲ ದೂರ ಬರಬಾರದು. ಒಂದು ಮೊಬೈಲ್ ಕರೆ ಮಾಡಿದ್ದರೆ ನಾನೇ ನಿಮ್ಮಲ್ಲಿಗೆ ಬರುತ್ತಿದೆ ಅಥವಾ ಸಮಸ್ಯೆ ಪರಿಹಾರ ಮಾಡುತ್ತಿದ್ದೆ ಎಂದು ತಮ್ಮಲ್ಲಿಗೆ ಆಗಮಿಸಿದ್ದ ಎಲ್ಲಾ ಗರ್ಭಿಣಿಯರಿಗೆ ಉಪಹಾರ ನೀಡಿ ಕಳುಹಿಸಿಕೊಟ್ಟರು.

ಈ ಸಂದರ್ಭದಲ್ಲಿ ಅಚಲಾಪೂರ ಗ್ರಾಮದ ಮುಖಂಡರು ಆಶಾ, ಆರೋಗ್ಯ ಕಾರ್ಯಕರ್ತೆಯರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next