Advertisement

World Cup 2023; ಡೇನಿಯಲ್ ವೆಟೋರಿ ದಾಖಲೆ ಸರಿಗಟ್ಟಿದ ಮಿಚೆಲ್ ಸ್ಯಾಂಟ್ನರ್

06:04 PM Nov 09, 2023 | Team Udayavani |

ಬೆಂಗಳೂರು: ಮಿಚೆಲ್ ಸ್ಯಾಂಟ್ನರ್ ಅವರು ಏಕದಿನ ವಿಶ್ವಕಪ್‌ ನ ಒಂದೇ ಆವೃತ್ತಿಯಲ್ಲಿ ಸ್ಪಿನ್ನರ್‌ ನಿಂದ ಹೆಚ್ಚು ವಿಕೆಟ್‌ ಗಳನ್ನು ಗಳಿಸಿದ ನ್ಯೂಜಿಲ್ಯಾಂಡ್‌ ನ ದಾಖಲೆಯನ್ನು ಸರಿಗಟ್ಟಿದ್ದಾರೆ. ಪ್ರಸ್ತುತ 2023 ರ ವಿಶ್ವಕಪ್ ನಲ್ಲಿ ಸ್ಯಾಂಟ್ನರ್, ಪಂದ್ಯಾವಳಿಯ ತಮ್ಮ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 2 ವಿಕೆಟ್‌ಗಳನ್ನು ಪಡೆದ ನಂತರ ಈ ಸಾಧನೆಯನ್ನು ತಲುಪಿದರು.

Advertisement

ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸ್ಯಾಂಟ್ನರ್ ಅವರು ಆ್ಯಂಜಲೋ ಮ್ಯಾಥ್ಯೂಸ್ ಮತ್ತು ಧನಂಜಯ ಡಿಸಿಲ್ವ ವಿಕೆಟ್ ಪಡೆದರು. ಅವರು ಈ ಕೂಟದಲ್ಲಿ ಇದುವರೆಗೆ 16 ವಿಕೆಟ್ ಪಡೆದಿದ್ದಾರೆ.

2007ರ ವಿಶ್ವಕಪ್ ಆವೃತ್ತಿಯಲ್ಲಿ ಡೇನಿಯಲ್ ವೆಟೋರಿ ಅವರು 16 ವಿಕೆಟ್ ಕಿತ್ತಿದ್ದರು. ಇದು ನ್ಯೂಜಿಲ್ಯಾಂಡ್ ದಾಖಲೆಯಾಗಿದೆ.

ಸ್ಪಿನ್ನರ್ ಸ್ಯಾಂಟ್ನರ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪಂದ್ಯಾವಳಿಯಲ್ಲಿ ಕೇವಲ ಎರಡು ಬಾರಿ ವಿಕೆಟ್ ಪಡೆದಿಲ್ಲ. ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ಪಾಕಿಸ್ತಾನದ ವಿರುದ್ಧ ಅವರು ವಿಕೆಟ್ ಪಡೆದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next