Advertisement

3,4ನೇ ಟೆಸ್ಟ್‌ ಪಂದ್ಯದಿಂದ ಮಿಚೆಲ್‌ ಮಾರ್ಷ್‌ ಔಟ್‌

12:16 PM Mar 09, 2017 | |

ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯ ತಂಡದ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಭುಜದ ಗಾಯಕ್ಕೆ ತುತ್ತಾಗಿದ್ದಾರೆ. ಭಾರತದ ವಿರುದ್ಧ ನಡೆಯಲಿರುವ 3 ಮತ್ತು 4ನೇ ಟೆಸ್ಟ್‌ ಪಂದ್ಯಗಳಿಂದ ಅವರು ಹೊರಗುಳಿಯಲಿದ್ದಾರೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯ ಖಚಿತಪಡಿಸಿದೆ. 

Advertisement

ಸದ್ಯ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದೆ. ಹೀಗಾಗಿ ಅವರು ಆಸ್ಟ್ರೇಲಿಯಕ್ಕೆ ವಾಪಸ್‌ ತೆರಳಲಿದ್ದಾರೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯದ ಫಿಸಿಯೋ ಡೇವಿಡ್‌ ಬೆಕ್ಲಿ ತಿಳಿಸಿದ್ದಾರೆ. ಸದ್ಯ ಟೆಸ್ಟ್‌ ಸರಣಿ 1-1ರಿಂದ ಸಮಬಲದಲ್ಲಿದೆ. ಸರಣಿ ನಿರ್ಣಾಯಕ ಹಂತದಲ್ಲಿರುವಾಗ ಮಿಚೆಲ್‌ ಹೊರಹೋಗಿರುವುದು ಆಸೀಸ್‌ಗೆ ದೊಡ್ಡ ಹೊಡೆತವೇ ಸರಿ. ಮೂರನೇ ಟೆಸ್ಟ್‌ ರಾಂಚಿಯಲ್ಲಿ ಮಾ. 16ರಿಂದ ಆರಂಭವಾಗಲಿದೆ.

ಮಾರ್ಷ್‌ ಮೆಲ್ಬರ್ನ್ಗೆ ತೆರಳಲಿದ್ದಾರೆ. ಅವರ ಬದಲಿಗೆ ಯಾರನ್ನು ಆಯ್ಕೆ ಮಾಡುವ ಕುರಿತು ಮುಂದಿನೆರಡು ದಿನಗಳಲ್ಲಿ ನಿರ್ಧರಿಸ ಲಾಗುವುದು ಎಂದು ತಂಡದ ಕೋಚ್‌ ಡ್ಯಾರನ್‌ ಲೆಹ್ಮನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next