Advertisement

ಕಾಲಮಿತಿಯಲ್ಲಿ ಮಿಷನ್‌-2022 ಜಾರಿ

12:13 PM Dec 18, 2020 | Suhan S |

ಬೆಂಗಳೂರು: “ಬೆಂಗಳೂರು ಮಿಷನ್‌- 2022′ ನೀಲನಕ್ಷೆ ಜಾರಿಗೆ ಹಣಕಾಸಿನ ಕೊರತೆಯಾಗದಂತೆ ನೋಡಿಕೊಳ್ಳುವ ಜತೆಗೆ 100ಕ್ಕೆ 100ರಷ್ಟು ಯೋಜನೆಗಳನ್ನು2ವರ್ಷಗಳಲ್ಲಿಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.ಈಬಗ್ಗೆ ಸಂಶಯ ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಗುರುವಾರ ನೀಲನಕ್ಷೆಗೆ ಬಿಡುಗಡೆಗೊಳಿಸಿದ ನಂತರ ಅಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆಸಿದ ಸಂವಾದದ ಬಳಿಕ ಮಾತನಾಡಿದರು. ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕವಷ್ಟೇ ನೀಲನಕ್ಷೆ ಸಿದ್ಧಪಡಿಸಲಾಗಿದೆ.ಯೋಜನೆಗಳ ಜಾರಿಗೆ ಅಗತ್ಯ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗುವುದು.6 ತಿಂಗಳಿಗೊಮ್ಮೆ ಕಾರ್ಯ ಪ್ರಗತಿ ಬಗ್ಗೆ ನಾನೇ ಮಾಹಿತಿ ನೀಡುತ್ತೇನೆ. ಜತೆಗೆ ಮಾಧ್ಯಮಗಳೊಂದಿಗೆ ಸ್ಥಳ ಪರಿಶೀಲನೆ ಕೂಡ ನಡೆಸಲಾಗುವುದು. ಇನ್ನಷ್ಟು ಹೆಚ್ಚು ಕಾರ್ಯಗಳಿಗೆ ಒತ್ತು ನೀಡುತ್ತವೆಯೇ ಹೊರತು ಈಗ ಘೋಷಿಸಿರುವ ಯಾವ ಕಾಮಗಾರಿಗೂ ಕೊರತೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದರು.

ಮುಖ್ಯಮಂತ್ರಿಗಳಿಗೆ ಅಭಿನಂದನೆ : ಎನ್‌ಜಿಇಎಫ್ಗೆ ಸೇರಿದ ಪ್ರದೇಶವನ್ನು “ಫ್ಯಾಂಟಸಿ ಡಿಸ್ನಿಲ್ಯಾಂಡ್‌ ಟ್ರೀ ಪಾರ್ಕ್‌’ ರೀತಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಸರ್ಕಾರಘೋಷಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶಾಸಕ ಎಸ್‌.ರಘು ಅಭಿನಂದನೆ ಸಲ್ಲಿಸಿದ್ದಾರೆ. ನನ್ನ ಮನವಿಯಂತೆ ಎನ್‌ ಜಿಇಎಫ್ಗೆ ಸೇರಿದ ಪ್ರದೇಶದಲ್ಲಿ “ಫ್ಯಾಂಟಸಿ ಡಿಸ್ನಿಲ್ಯಾಂಡ್‌ ಟ್ರೀ ಪಾರ್ಕ್‌’ ನಿರ್ಮಿಸುವುದಾಗಿ ಮುಖ್ಯಮಂತ್ರಿಗಳು ಗುರುವಾರ ಬಿಡುಗಡೆ ಮಾಡಿರುವ “ಬೆಂಗಳೂರು ಮಿಷನ್‌- 2022′ ನೀಲನಕೆ Òಯಲ್ಲಿ ಪ್ರಕಟಿಸಿದ್ದಾರೆ.ಕಬ್ಬನ್‌ಪಾರ್ಕ್‌, ಲಾಲ್‌ಬಾಗ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಎಸ್‌.ರಘು ಹೇಳಿದ್ದಾರೆ.

ತ್ಯಾಜ್ಯ ಕರ ಪ್ರಸ್ತಾಪವಿಲ್ಲ: ಸಂವಾದದಲ್ಲಿ ಗೌರವ್‌ಗುಪ್ತ :  ಬಿಬಿಎಂಪಿ ವ್ಯಾಪ್ತಿಯಲ್ಲಿ ಗೃಹ ಹಾಗೂ ವಾಣಿಜ್ಯಕಟ್ಟಡಗಳಿಂದ ತ್ಯಾಜ್ಯ ಸಂಗ್ರಹಕ್ಕೆ ಸೇವಾ ಶುಲ್ಕ ವಿಧಿಸುವ ಪ್ರಸ್ತಾವಕ್ಕೆ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪಾಲಿಕೆ ಸೇವಾ ಶುಲ್ಕ ವಿಧಿಸುವ ಚಿಂತನೆಯಿಂದ ಹಿಂದೆ ಸರಿದಂತಿದೆ. “ಬೆಂಗಳೂರು ಮಿಷನ್‌- 2022′ ನೀಲನಕ್ಷೆ ಬಿಡುಗಡೆ ಸಮಾರಂಭದಲ್ಲಿ ನಡೆದ ಸಂವಾದದಲ್ಲಿ ಸ್ಪಷ್ಟಪಡಿಸಿದ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ, ತ್ಯಾಜ್ಯಸಂಗ್ರಹ ಸಂಬಂಧ ಯಾವುದೇ ಹೊಸಕರ ವಿಧಿಸುವ ಚಿಂತನೆ ಇಲ್ಲ. ಸದ್ಯ ಜಾರಿಯಲ್ಲಿರುವ ವ್ಯವಸ್ಥೆಯನ್ನೇ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲುಕ್ರಮ ಕೈಗೊಳ್ಳಲಾಗುತ್ತಿದೆ. ಅದನ್ನು ಹೊರತುಪಡಿಸಿ ಬೇರೆ ಚಿಂತನೆ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ : ರೈತರ ಪ್ರತಿಭಟನೆ: 11 ದಿನ ಒಂದು ಸಾವಿರ ಕಿಲೋ ಮೀಟರ್ ಸೈಕಲ್ ಪ್ರಯಾಣ-ಬಿಹಾರ ಟು ದೆಹಲಿ

Advertisement

ಕಾಲಮಿತಿಯಲ್ಲಿ ಪೂರ್ಣ :  ಬೆಂಗಳೂರಿನಲ್ಲಿ ಪ್ರಗತಿಯಲ್ಲಿರುವ “ಸ್ಮಾರ್ಟ್‌ ಸಿಟಿ’ ಕಾಮಗಾರಿಗಳನ್ನು ಏಪ್ರಿಲ್‌ನೊಳಗೆ ಪೂರ್ಣಗೊಳಿಸ ಲಾಗುವುದು ಎಂದು ಸಚಿವ ಬೈರತಿ ಬಸವರಾಜು ಭರವಸೆ ನೀಡಿದರು. ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‌ಈಗಾಗಲೇ ನಗರದಲ್ಲಿ ಪ್ರಗತಿಯಲ್ಲಿರುವ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಪರಿಶೀಲಿಸಲಾಗಿದ್ದು,ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸ ಲಾಗಿದೆ. ಕೋವಿಡ್‌, ಮಳೆಗಾಲದ ಹಿನ್ನೆಲೆಯಲ್ಲಿ ತುಸು ವ್ಯತ್ಯಾಸವಾಗಿದೆ. ಕಾಮಗಾರಿಗಳಿಗೆ ವೇಗ ನೀಡಿ ಮಾರ್ಚ್‌, ಏಪ್ರಿಲ್‌ನೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದೆಂದರು.

ಸಿಎಂ ನಗರ ಪ್ರದಕ್ಷಿಣೆ ಮುಂದುವರಿಕೆ :

ನಗರದಲ್ಲಿ ಜಾರಿಯಾಗಲಿರುವ ಯೋಜನೆ, ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲುಹಾಗೂ ಜನರ ಸಮಸ್ಯೆ ಅರಿಯಲು ಮುಖ್ಯಮಂತ್ರಿಗಳುತಿಂಗಳಿಗೊಮ್ಮೆ ನಗರ ಪ್ರದಕ್ಷಿಣೆ ಮುಂದುವರಿಸಲಿದ್ದಾರೆ ಎಂದು ಸಚಿವ ಆರ್‌.ಅಶೋಕ್‌ ಹೇಳಿದರು. ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಮುಖ್ಯಮಂತ್ರಿಗಳು ಈಗಾಗಲೇ 4 ಬಾರಿ ನಗರ ಪ್ರದಕ್ಷಿಣೆ ನಡೆಸಿ ಪರಿಶೀಲಿಸಿದ್ದಾರೆ. ಕೋವಿಡ್‌ ಕಾರಣಕ್ಕೆ9ತಿಂಗಳಿಂದ ಪರಿಶೀಲನೆ ನಡೆಸಿಲ್ಲ. ಇನ್ನು ಮುಂದೆ ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳ ನಗರ ಪ್ರದಕ್ಷಿಣೆ ಮುಂದುವರಿಯಲಿದೆ ಎಂದು ತಿಳಿಸಿದರು.

ಸದ್ಯ ಬಿಬಿಎಂಪಿ ಕೆಎಂಸಿ ಕಾಯ್ದೆಯಂತೆಕಾರ್ಯ ನಿರ್ವಹಿಸುತ್ತಿದ್ದು, ಸುಮಾರು ಒಂದೂವರೆಕೋಟಿ ಜನಸಂಖ್ಯೆ ಇರುವ ನಗರಕ್ಕೆ ಪ್ರತ್ಯೇಕಕಾಯ್ದೆ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ಹೊಸ ಕಾಯ್ದೆ ಜಾರಿಗೊಳಿಸಲಾಗುತ್ತಿದೆ. ಮುಂದೆ ಇನ್ನಷ್ಟು ಅಭಿವೃದ್ಧಿಕಾಣಬೇಕು ಎಂಬ ಉದ್ದೇಶದಿಂದಕಾಯ್ದೆ ಜಾರಿಗೊಳಿಸಲಾಗುತ್ತಿದೆಯೇ ಹೊರತು ಬಿಬಿಎಂಪಿ ಚುನಾವಣೆ ಮುಂದೂಡುವಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next