Advertisement

ಸೋತರೂ 50 ವರ್ಷ ಹಿಂದಿನ ದಾಖಲೆ ಮುರಿದ ಮೀರಾ

07:50 AM Jul 22, 2017 | Team Udayavani |

ಹೊಸದಿಲ್ಲಿ: ದೇಶದ 14ನೇ ರಾಷ್ಟ್ರಪತಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ  ವಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್‌ ಅವರು ಎನ್‌ಡಿಎ ಅಭ್ಯರ್ಥಿ ಕೋವಿಂದ್‌ ಅವರ ವಿರುದ್ಧ ಸೋತಿರುವುದೇನೋ ನಿಜ. 

Advertisement

ಆದರೆ ಪರಾಜಿತ ಅಭ್ಯ ರ್ಥಿಗಳ ಮತ ಗಳಿಕೆಗೆ ಸಂಬಂಧಿಸಿ ಮೀರಾ ಅವರು 50 ವರ್ಷಗಳ ದಾಖಲೆ ಮುರಿದಿದ್ದಾರೆ. ರಾಷ್ಟ್ರಪತಿ ಚುನಾವಣೆ ಇತಿಹಾಸದಲ್ಲೇ ಅತಿ ಹೆಚ್ಚು ಮತಗಳನ್ನು ಪಡೆದ ಪರಾಜಿತ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಮೀರಾ ಪಾತ್ರರಾಗಿದ್ದಾರೆ. 10.69 ಲಕ್ಷ ಮತಗಳ ಪೈಕಿ ಮೀರಾ 3.67 ಲಕ್ಷ ಮತ ಪಡೆದಿ ದ್ದಾರೆ. ಇದು ಪರಾಜಿತ ರಾಷ್ಟ್ರಪತಿ ಅಭ್ಯರ್ಥಿಯೊಬ್ಬರು ಈವರೆಗೆ ಪಡೆದ ಅತಿ ಹೆಚ್ಚು ಮತಗಳಾಗಿವೆ. ಹಿಂದೆ 1967ರ ರಾಷ್ಟ್ರಪತಿ ಚುನಾವಣೆ ಯಲ್ಲಿ ಜಾಕಿರ್‌ ಹುಸೇನ್‌ ವಿರುದ್ಧ ಸ್ಪರ್ಧಿಸಿದ್ದ ನ್ಯಾ.ಕೆ. ಸುಬ್ಬರಾವ್‌ 3.63 ಲಕ್ಷ ಮತ ಪಡೆದದ್ದೇ ಈವರೆಗಿನ ಅಧಿಕ ಮತ ಗಳಿಕೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next