Advertisement

ಸಚಿವರ ಸಾಧನೆ ಶೂನ್ಯ: ರಘುಪತಿ ಭಟ್‌ ಟೀಕೆ

06:45 AM Nov 03, 2017 | Team Udayavani |

ಉಡುಪಿ: ಸಂಸದೀಯ ಕಾರ್ಯದರ್ಶಿಯಾಗಿ, ರಾಜ್ಯ ಸಚಿವರಾಗಿದ್ದು ಇದೀಗ ಸಂಪುಟ ದರ್ಜೆಯ ಸಚಿವರಾಗಿರುವ ಪ್ರಮೋದ್‌ ಮಧ್ವರಾಜ್‌ ಅವರ ಸಾಧನೆ ಶೂನ್ಯ ಎಂದು ಮಾಜಿ ಶಾಸಕ ಕೆ.ರಘಪತಿ ಭಟ್‌ ಟೀಕಿಸಿದ್ದಾರೆ.
ಕಲ್ಮಾಡಿ ಬಿಜೆಪಿ ವಾರ್ಡ್‌ನ ಯುವಮೋರ್ಚಾ ನೂತನ ಸಮಿತಿಯ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಬಿಜೆಪಿ ಸರಕಾರದ ಆಡಳಿತ ಅವಧಿಯಲ್ಲಿ  ನಾವು 5 ಪ್ರೌಢಶಾಲೆಗಳು ಮತ್ತು  ಎರಡು ಪದವಿ ಪೂರ್ವಕಾಲೇಜುಗಳನ್ನು ಸ್ಥಾಪಿಸಿದ್ದೆವು. ಮಂಗಳೂರು ವಿಶ್ವವಿದ್ಯಾನಿಲಯದ ಒಂದು ಕಾಲೇಜನ್ನು ಉಡುಪಿ ಜಿÇÉೆಗೆ ಮಂಜೂರು ಮಾಡಿಸಿಕೊಂಡಿದ್ದು ಅದನ್ನು ಜಿÇÉೆಯ ಎಲ್ಲರಿಗೂ ಅನುಕೂಲವಾಗುವಂತೆ ಜಿÇÉೆಯ ಮದ್ಯಭಾಗವಾಗಿರುವ ಉಪ್ಪೂರಿನಲ್ಲಿ ಸ್ಥಾಪಿಸುವ ಪ್ರಸ್ತಾವನೆಯನ್ನು ಕೂಡ ಇಡಲಾಗಿತ್ತು. ಆದರೆ ಕಾಂಗ್ರೆಸ್‌ ಸರಕಾರದಲ್ಲಿ ಸಚಿವರಾಗಿದ್ದ ವಿನಯ ಕುಮಾರ್‌ ಸೊರಕೆ ಅವರು ತಮ್ಮ ಪ್ರಭಾವ ಬಳಸಿಕೊಂಡು ಅವರ ವಿಧಾನಸಭಾ ಕ್ಷೇತ್ರವಾದ ಕಾಪುವಿನ ಬೆಳಪುವಿಗೆ ಮಂಜೂರು ಮಾಡಿಸಿಕೊಂಡರು. ಆಗ ಶಾಸಕರಾಗಿದ್ದ ಪ್ರಮೋದ್‌ ಮಧ್ವರಾಜ… ಅವರು ನಿಷ್ಕ್ರಿಯರಾಗಿದ್ದುದರಿಂದ ಉಡುಪಿ ಕ್ಷೇತ್ರಕ್ಕೆ ಬಹುದೊಡ್ಡ ಅನ್ಯಾಯ ವಾಗಿದೆ ಎಂದವರು ಹೇಳಿದರು.

ತಾಲೂಕು ಪ್ರಕ್ರಿಯೆ ಆರಂಭವಾಗಿಲ್ಲ
ತಾಲೂಕು ರಚನೆ ಕೇವಲ ಘೋಷಣೆ ಮಾತ್ರ ಆಗಿದೆ. ಪ್ರಕ್ರಿಯೆ ಪ್ರಾರಂಭವಾಗಿಲ್ಲ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಏನನ್ನೂ ಮಾಡಲಾಗದ ಸಚಿವರಿಗೆ ಇನ್ನು ಕೇವಲ ಮೂರು ತಿಂಗಳ ಅವಧಿಯ ಅವಕಾಶದಲ್ಲಿ ಏನು ಮಾಡಲು ಸಾಧ್ಯವಿದೆ ಎಂದವರು ಪ್ರಶ್ನಿಸಿದರು.

ಸಮವಸ್ತ್ರ ಬಟ್ಟೆ ಕಳಪೆ 
ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಗ್ರಾಮ ಕಾರಣಿಕರು ಮತ್ತು ಗ್ರಾ.ಪಂ. ಸಿಬಂದಿಯನ್ನು ಬೆಳೆ ಸಮೀಕ್ಷೆ ನಡೆಸಲು ಕಳುಹಿಸಿರುವ ಪರಿಣಾಮ ಪಂಚಾಯತ್‌ ಆಡಳಿತವು ಅವ್ಯವಸ್ಥೆಯ ಆಗರವಾಗಿದೆ. ರಾಜ್ಯಸರಕಾರವು ಶಾಲಾ ಮಕ್ಕಳಿಗೆ ನೀಡಿದ ಸಮವಸ್ತ್ರಗಳಿಗೆ 175 ಕೋ.ರೂ. ಖರ್ಚು ಮಾಡಿದೆ. ಆದರೆ ಒಂದು ತಿಂಗಳು ಕೂಡ ಬಳಸಲಾಗದ ಕಳಪೆ ಬಟ್ಟೆಯನ್ನು ನೀಡಲಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. 

ಜಿÇÉಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
ಈ ಸಮಾರಂಭದಲ್ಲಿ ಕಲ್ಮಾಡಿ ವಾರ್ಡ್‌ ವ್ಯಾಪ್ತಿಯ ಅನೇಕ ಯುವಕರನ್ನು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. 

Advertisement

ಮೀನುಮಾರಾಟ ಫೆಡರೇಶನ್‌ ಅಧ್ಯಕ್ಷ ಯಶಪಾಲ… ಸುವರ್ಣ, ಉಡುಪಿ ಚುನಾವಣಾ ಉಸ್ತುವಾರಿ ಕಪ್ಪೆಟ್ಟು ಪ್ರವೀಣ… ಕುಮಾರ್‌ ಶೆಟ್ಟಿ, ನಗರ ಅಧ್ಯಕ್ಷ  ಪ್ರಭಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಉಪೇಂದ್ರ ನಾಯಕ್‌ ಮತ್ತು  ಜಗದೀಶ್‌ ಆಚಾರ್ಯ, ಕಲ್ಮಾಡಿ  ವಾರ್ಡ್‌ ಅಧ್ಯಕ್ಷ ವಿನಯ ಕುಮಾರ್‌, ಯುವಮೋರ್ಚಾ ನೂತನ ಅಧ್ಯಕ್ಷ ವಿವೇಕ್‌ ಕಲ್ಮಾಡಿ, ದೀಪಕ್‌ ಕೋಟ್ಯಾನ್‌, ಸುಂದರ್‌ ಜಿ. ಕಲ್ಮಾಡಿ, ವೆಂಕಟರಮಣ ಕಿದಿಯೂರು, ಶರತ್‌ ಕುಮಾರ್‌ ಬೈಲಕರೆ, ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು  ಮತ್ತಿತರರು ಉಪಸ್ಥಿತರಿದ್ದರು. 

ಚಂದ್ರಕಾಂತ್‌ ಕುಂದರ್‌ ಸ್ವಾಗತಿಸಿ, ಎಂ. ಲಕ್ಷ್ಮೀಶ ಕುಂದರ್‌ ವಂದಿಸಿದರು. ಪ್ರವೀಣ್‌ಚಂದ್ರ ತೋನ್ಸೆ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next