Advertisement

ಮೇ 4 ರ ನಂತರವಷ್ಟೇ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಸಾಧ್ಯ: ಲಕ್ಷ್ಮಣ ಸವದಿ

11:37 AM Apr 06, 2021 | Team Udayavani |

ಕಲಬುರಗಿ: ಸಾರಿಗೆ ನೌಕರರ ಎಂಟು ಬೇಡಿಕೆಯನ್ನು ಈಡೇರಿಸಿದ್ದವೆ. ಇನ್ನೂ ಒಂದು ಬಾಕಿ ಇರುವ ವೇತನ ಹೆಚ್ಚಳವನ್ನೂ ಸಹ ಮೇ 4ರ ನಂತರ ಈಡೇರಿಕೆಗೆ ಮನವರಿಕೆ ಮಾಡಿ ಕೊಡಲಾಗಿದೆ ಎಂದು ಉಪಮುಖ್ಯಮಂತ್ರಿಯಾಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

Advertisement

ಬಸವಕಲ್ಯಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ವಿಮಾನದ ಮೂಲಕ ಬಂದಿಳಿದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಇದನ್ನೂ ಓದಿ:ನಾಳೆ ಬಸ್‌ ಇಲ್ಲ ? ಸರಕಾರದ ಮನವೊಲಿಕೆಗೆ ಬಗ್ಗದ ಸಾರಿಗೆ ನೌಕರರು

ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬೇಡಿಕೆ ಈಡೇರಿಸಲಿಕ್ಕಾಗುತ್ತಿಲ್ಲ. ಹೀಗಾಗಿ ಚುನಾವಣಾ ಫಲಿತಾಂಶ ನಂತರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಲಾಗಿದೆ ಎಂದು ವಿವರಣೆ ನೀಡಿದರು.

ಕೋವಿಡ್-19 ಸಂಧರ್ಭದಲ್ಲಿ ಬಡವರಿಗೆ ಮಧ್ಯಮ ವರ್ಗದವರಿಗೆ ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರೆ ಆಗುತ್ತದೆ ಎಂಬುದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕೆಂದರು.

Advertisement

ಇದನ್ನೂ ಓದಿ: ತಮಿಳುನಾಡು ಚುನಾವಣೆ: ಮತದಾರರ ಪಟ್ಟಿಯಲ್ಲಿಲ್ಲ ‘ಚಿನ್ನಮ್ಮ’ನ ಹೆಸರು!

ಕೋಡಿಹಳ್ಳಿ ಚಂದ್ರಶೇಖರ್ ಮೇಧಾವಿ, ಬಹಳ ಬುದ್ದಿವಂತರು. ಅವರ ಬುದ್ದಿ ನಮ್ಮ ಸರ್ಕಾರಕ್ಕೆ ಇಲ್ಲಾ ಅಂತಾ ಅಂದುಕೊಳ್ಳತ್ತೇನೆ. ಅನಾವಶ್ಯಕವಾಗಿ ಸರ್ಕಾರ ಮತ್ತು ನೌಕರರ ಮಧ್ಯೆ ಗೊಂದಲ ಸೃಷ್ಟಿ ಮಾಡುವುದಕ್ಕೆ ಮುಂದಾಗಿದ್ದಾರೆ. ಒಂದು ವೇಳೆ ಬಸ್ ಸಂಚಾರ ಬಂದ್ ಮಾಡಿದರೆ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನ ತಂದು ಓಡಿಸುತ್ತೇವೆ ಎಂದು ಸಚಿವ ಸವದಿ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next