Advertisement

ಸಮರಕ್ಕೆ ಅಮೆರಿಕ ಸಿದ್ಧತೆ

06:45 AM Jan 17, 2018 | Team Udayavani |

ವಾಷಿಂಗ್ಟನ್‌: ಉತ್ತರ ಕೊರಿಯಾ ಮತ್ತು ಅಮೆರಿಕ ಮಧ್ಯೆ ಯುದ್ಧ ಭೀತಿ ಉಂಟಾಗಿ ತಿಂಗಳುಗಳೇ ಕಳೆದಿವೆ. ಉಭಯ ದೇಶಗಳ ನಾಯಕರ ಮಧ್ಯೆ ಮಾತಿನ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಸಾಗಿದಂತೆ ಅಮೆರಿಕದ ಸೇನೆ ಯುದ್ಧ ಸಿದ್ಧತೆ ನಡೆಸುತ್ತಿದೆ. ಕಳೆದ ತಿಂಗಳು ಉತ್ತರ ಕೆರೊಲಿನಾದಲ್ಲಿನ ಫೋಟ್‌ ಬ್ರಾಗ್‌ನಲ್ಲಿ 48 ಅಪಾಚೆ ಗನ್‌ಶಿಪ್‌ಗ್ಳು ಮತ್ತು ಚಿನೂಕ್‌ ಕಾರ್ಗೋ ಹೆಲಿಕಾಪ್ಟರುಗಳು ಕವಾಯತು ನಡೆಸಿವೆ. ಅಲ್ಲದೆ ಸಂಪೂರ್ಣ ಯುದ್ಧ ಸಿದ್ಧತೆಯ ಕವಾಯತು ನಡೆದಿವೆ. ನಂತರ ಎರಡು ದಿನಗಳ ಬಳಿಕ ನೆವಾಡಾದಲ್ಲಿ 119 ಯೋಧರು ಸಿ-17 ಯುದ್ಧ ವಿಮಾನದಿಂದ ಪ್ಯಾರಾಚೂಟ್‌ ಕಟ್ಟಿಕೊಂಡು ಹಾರಿ ಪ್ರಯೋಗ ನಡೆಸಿದ್ದಾರೆ.

Advertisement

ವಿದೇಶಕ್ಕೆ ತಕ್ಷ ಸೇನೆಯನ್ನು ಕಳುಹಿಸುವುದು ಹೇಗೆ ಎಂಬ ಬಗ್ಗೆ ಮುಂದಿನ ತಿಂಗಳು 1 ಸಾವಿರಕ್ಕೂ ಹೆಚ್ಚು ಮೀಸಲು ಯೋಧರಿಗೆ ತರಬೇತಿ ನೀಡಲಾಗುತ್ತದೆ. ಮುಂದಿನ ತಿಂಗಳು ದಕ್ಷಿಣ ಕೊರಿಯಾದಲ್ಲಿ ವಿಂಟರ್‌ ಒಲಿಂಪಿಕ್ಸ್‌ ನಡೆಯಲಿದ್ದು, ಈ ವೇಳೆ ಉತ್ತರ ಕೊರಿಯಾ ಗಡಿಗೆ ಹೆಚ್ಚಿನ ಸೇನೆಯನ್ನು ಜಮಾವಣೆ ಮಾಡಲು ನಿರ್ಧರಿಸಲಾಗಿದೆ.

ಹುಚ್ಚುನಾಯಿಯ ಕೂಗು!: ಉ.ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಬಳಿ ಇರುವುದಕ್ಕಿಂತಲೂ ದೊಡ್ಡ ನ್ಯೂಕ್ಲಿಯರ್‌ ಬಟನ್‌ ನನ್ನ ಬಳಿ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಕ್ಕೆ ಉ.ಕೊರಿಯಾ ಪ್ರತಿಕ್ರಿಯಿಸಿದ್ದು, ಟ್ರಂಪ್‌ ಹೇಳಿಕೆ ಹುಚ್ಚುನಾಯಿ ಬೊಗಳಿದಂತಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next