Advertisement

“ಪ್ರತಾಪ್‌’ಗೆ ಸೇನಾ ಬೀಳ್ಕೊಡುಗೆ

12:52 PM Dec 18, 2017 | Team Udayavani |

ಬೆಂಗಳೂರು: ಕಳೆದ 45 ವರ್ಷಗಳ ಕಾಲ ಭಾರತೀಯ ವಾಯುಸೇನೆಯ ಅವಿಭಾಜ್ಯ ಅಂಗವಾಗಿ ಹತ್ತಾರು ಕಾರ್ಯಾಚರಣೆಗಳಲ್ಲಿ ಬಳಕೆಯಾಗಿದ್ದ ಎಂ-8 “ಪ್ರತಾಪ್‌’ ಹೆಲಿಕಾಪ್ಟರ್‌ಗೆ ಭಾನುವಾರ ಸೇವೆಯಿಂದ ಬೀಳ್ಕೊಡಲಾಯಿತು.

Advertisement

ವಾಯುಸೇನೆ ಕೈಗೊಂಡಿದ್ದ ಸಿಯಾಚಿನ್‌ ಹಿಮಪ್ರವಾಹ, ಶ್ರೀಲಂಕಾದ ಆಪರೇಷನ್‌ ಪವನ್‌ ಸೇರಿದಂತೆ ಪ್ರಮುಖ ಕಾರ್ಯಾಚರಣೆಗಳಲ್ಲಿ ಎಂ-8 “ಪ್ರತಾಪ್‌’ ತನ್ನ ಪಾತ್ರ ನಿಭಾಯಿಸಿತ್ತು. ಇದಲ್ಲದೆ ದೇಶದ ವಿವಿಧೆಡೆ ನಡೆದ ಪ್ರವಾಹ ಹಾಗೂ ತುರ್ತು ಸಂಧರ್ಭಗಳಲ್ಲಿ ಸೇನೆ ನಡೆಸಿದ ವಿಪತ್ತು ನಿರ್ವಹಣಾ ಕಾರ್ಯದಲ್ಲಿಯೂ ಬಳಕೆಯಾಗಿತ್ತು. ಜೊತೆಗೆ ದೇಶದ ಗಣ್ಯರ/ಅತಿಗಣ್ಯರ ಪ್ರಯಣಕ್ಕೂ ದಶಕಗಳ ಕಾಲ ಬಳಕೆಯಾಗಿದ್ದು ವಿಶೇಷ.

ಯಲಹಂಕದ ವಾಯುನೆಲೆಯಲ್ಲಿ ನಡೆದ ” ಪ್ರತಾಪ್‌’ ಸೇನಾಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನಿವೃತ್ತ  ಏರ್‌ಚೀಫ್ ಮಾರ್ಷಲ್‌  ಮೇಜರ್‌ ಫಾಲಿ ಹೋಮಿ ಸೇರಿದಂತೆ ವಾಯುಸೇನೆಯ ಅಧಿಕಾರಿಗಳು, ಸೇನಾ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next