Advertisement
“ಮೆಲ್ಬರ್ನ್ನ ವಾತಾವರಣ ಪರ್ತ್‌ಗಿಂತ ಬಹಳ ಭಿನ್ನ. ಈ ಸರಣಿಯಲ್ಲಿ ಭಾರತದ ಫಾಸ್ಟ್ ಬೌಲಿಂಗ್ ಯೂನಿಟ್ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದೆ. ವೇಗಿಗಳು ಅಡಿಲೇಡ್ ಮತ್ತು ಪರ್ತ್‌ನ ಬಿಸಿ ವಾತಾ ವರಣದಲ್ಲಿ ಸಾಕಷ್ಟು ಓವರ್‌ಗಳನ್ನು ಎಸೆದಿದ್ದಾರೆ. ಆದರೆ ಆಸ್ಟ್ರೇಲಿಯದ ವಿಕೆಟ್‌ಗಳನ್ನು ಕೀಳಲು ಇನ್ನಷ್ಟು ಶ್ರಮ ಅಗತ್ಯವಿದೆ. ಮೆಲ್ಬರ್ನ್ನಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಆಡಿಸುವುದು ಉತ್ತಮ ನಡೆ. ಫಾರ್ಮ್ನಲ್ಲಿದ್ದಾಗ ಅವರನ್ನು ನಮ್ಮ ಮಿಚೆಲ್ ಮಾರ್ಷ್‌ಗೆ ಹೋಲಿಸಬಹುದು. ಆಸ್ಟ್ರೇ ಲಿಯದಲ್ಲಿ 4 ಪಂದ್ಯಗಳ ಸರಣಿಯ ವೇಳೆ ಪೇಸ್ ಬೌಲರ್‌ಗಳ ಮೇಲೆ ಒತ್ತಡ ಸಹಜ. ಇದನ್ನು ನಿಭಾಯಿಸಲು ಪಾಂಡ್ಯ ಅವರಂಥ ಬೌಲಿಂಗ್ ಆಲ್‌ರೌಂಡರ್‌ಗಳಿಂದ ಸಾಧ್ಯ…’ ಎಂಬುದಾಗಿ ಮೈಕಲ್ ಹಸ್ಸಿ ಅಭಿಪ್ರಾಯಪಟ್ಟರು.
“ಪರ್ತ್ ಟೆಸ್ಟ್‌ನಲ್ಲಿ ಸ್ಪಿನ್ನರ್ ಅಶ್ವಿನ್ ಗೈರು ಭಾರತವನ್ನು ಕಾಡಿದ್ದು ಸುಳ್ಳಲ್ಲ. ನಥನ್ ಲಿಯೋನ್ ಎಷ್ಟೊಂದು ಚೆನ್ನಾಗಿ ಬೌಲಿಂಗ್ ಮಾಡಿದರು ಎಂಬುದನ್ನು ಗಮನಿಸಿದಾಗ ಇದು ಮನದಟ್ಟಾಗುತ್ತದೆ. 4 ಮಂದಿ ಸ್ಪೆಷಲಿಸ್ಟ್ ವೇಗಿಗಳನ್ನು ಆಡಿಸುವುದು ತಪ್ಪಲ್ಲ. ಆದರೆ ಇವರೊಂದಿಗೆ ಓರ್ವ ಕ್ವಾಲಿಟಿ ಸ್ಪಿನ್ನರ್ ಇದ್ದರೆ ಲಾಭ ಹೆಚ್ಚು. ಮೆಲ್ಬರ್ನ್ನಲ್ಲಿ ಅಶ್ವಿನ್ ಆಡಬೇಕಾದ ಅಗತ್ಯವಿದೆ’ ಎಂದರು. 2. ಕಾಡಿದೆ ಓಪನಿಂಗ್ ವೈಫಲ್ಯ
“ಓಪನಿಂಗ್ ವೈಫಲ್ಯ ಈ ಎರಡು ಟೆಸ್ಟ್‌ಗಳಲ್ಲಿ ಭಾರತವನ್ನು ತೀವ್ರವಾಗಿ ಕಾಡಿದೆ. ಆಸ್ಟ್ರೇಲಿಯದ ಟೆಸ್ಟ್‌ಗಳಲ್ಲಿ ಯಾವತ್ತೂ ಮೊದಲ ದಿನ ಬ್ಯಾಟಿಂಗ್ ಅತ್ಯಂತ ಸುಲಭ. ಹಾಗೆ ನೋಡಹೋದರೆ ಆಸೀಸ್ ಓಪನಿಂಗ್ ಬಗ್ಗೆಯೂ ಅನುಮಾನಗಳಿದ್ದವು. ಮುಖ್ಯವಾಗಿ ಫಿಂಚ್ ಫಾರ್ಮ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಹ್ಯಾರಿಸ್ ಹೊಸಬ. ಇವರಿಬ್ಬರೂ ಪರ್ತ್ ಪರಿಸ್ಥಿತಿಯನ್ನು ಚೆನ್ನಾಗಿಯೇ ನಿಭಾಯಿಸಿದರು’ ಎಂಬುದಾಗಿ ಹೇಳಿದರು.
Related Articles
ಭಾರತ ತಂಡ ವಿರಾಟ್ ಕೊಹ್ಲಿ ಅವರನ್ನು ಹೆಚ್ಚು ಅವಲಂಬಿಸಿದೆಯೇ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಸ್ಸಿ, “ಕೊಹ್ಲಿ ವಿಶ್ವದ ಆತ್ಯುತ್ತಮ ಆಟಗಾರ. ಹೀಗಾಗಿ ಭಾರತ ತಂಡ ಅವರನ್ನು ಹೆಚ್ಚಾಗಿ ಅವಲಂಬಿಸಿದೆ. ಇದು ತಪ್ಪಲ್ಲ. ಅಡಿಲೇಡ್‌ನಲ್ಲಿ ಪೂಜಾರ ಪ್ರದರ್ಶನ ಉತ್ತಮವಾಗಿತ್ತು. ರಹಾನೆ ಅಲ್ಲಲ್ಲಿ ಮಿಂಚಿ ದ್ದಾರೆ. ಆದರೆ ಪರ್ತ್‌ನಲ್ಲಿ ಹೆಚ್ಚುವರಿ ವೇಗಿಯಿಂದಾಗಿ ಭಾರತದ ಬಾಲ ಬೆಳೆ ಯಿತು. ಇದು ಬ್ಯಾಟಿಂಗ್ ಸಮತೋಲಕ್ಕೆ ಧಕ್ಕೆ ಉಂಟುಮಾಡಿತು’ ಎಂದರು.
Advertisement