Advertisement
ಇತಿಹಾಸವನ್ನು ನೋಡಿದರೆ, ಥಾಮಸ್ ಜೆಫರ್‌ಸನ್, ಜೂಲಿಯಸ್ ಸೀಸರ್, ಸರ್ವಾಂಟಿಸ್, ಸಿಗ¾ಂಡ್ ಪ್ರಾಯ್ಡ, ಯೂಲಿಸಿಸ್ ಎಸ್. ಗ್ರಾಂಟ್, ಲೂವಿಸ್ ಕ್ಯಾರಲ್, ವಿನ್ಸೆಂಟ್ ವ್ಯಾನ್‌ಗೊ – ಈ ಮುಂತಾದ ಖ್ಯಾತನಾಮರೆಲ್ಲ ಮೈಗ್ರೇನ್ ತಲೆನೋವಿನಿಂದ ಬಳಲುತ್ತಿದ್ದವರೇ.
ಈ ಆರೋಗ್ಯ ಸಮಸ್ಯೆಯು ಆಗಾಗ ಮರುಕಳಿಸುವ, ಉಂಟಾದರೆ 4ರಿಂದ 72 ತಾಸು ಇರುವ ತೊಂದರೆಯಾಗಿ ಕಾಣಿಸಿಕೊಳ್ಳುತ್ತದೆ.
ಸಾಮಾನ್ಯ ದೈನಿಕ ಬದುಕನ್ನು ಬಾಧಿಸಬಲ್ಲ ಮೈಗ್ರೇನ್ ತಲೆನೋವು ಕೆಳಕಂಡ ಗುಣಲಕ್ಷಣಗಳಲ್ಲಿ ಕನಿಷ್ಟ ಎರಡನ್ನು ಹೊಂದಿರುತ್ತದೆ:
1. ತಲೆಯ ಒಂದು ಪಾರ್ಶ್ವದಲ್ಲಿ ಉಂಟಾಗುವುದು,
2. ತಲೆ ಸಿಡಿಯುವ ಲಕ್ಷಣ,
3. ಮಧ್ಯಮದಿಂದ ತೀವ್ರದ ವರೆಗಿನ ತೀಕ್ಷ್ಣತೆ,
4. ರೂಢಿಗತ ದೈನಿಕ ಚಟುವಟಿಕೆಯ ಜತೆ ಉಲ್ಬಣಿಸುವ ನೋವು. ತಲೆನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಕೆಳಕಂಡ ಲಕ್ಷಣಗಳಲ್ಲಿ ಕನಿಷ್ಟ ಎರಡು ಒಳಗೊಂಡಿರುತ್ತವೆ:
1. ಹೊಟ್ಟೆ ತೊಳೆಸುವಿಕೆ, ಕೆಲವೊಮ್ಮೆ ವಾಂತಿ,
2. ಪ್ರತಿಸ್ಪಂದನಾತ್ಮಕ ಪ್ರಚೋದನೆಗಳಿಗೆ ಸೂಕ್ಷ್ಮವಾಗಿ ರುವುದು (ಬೆಳಕು ಮತ್ತು ಧ್ವನಿ)
Related Articles
ಮೈಗ್ರೇನ್ ತಲೆನೋವು ವ್ಯಕ್ತಿಯು ಎಚ್ಚರವಾಗಿರುವಾಗಲೇ ಕಾಣಿಸಿಕೊಳ್ಳುತ್ತದೆ. ನಿದ್ದೆಯಿಂದ ಎಚ್ಚರಗೊಳ್ಳುವಾಗ ಆರಂಭವಾಗಿರಬಹುದಾದರೂ ಅದು ರಾತ್ರಿ ವ್ಯಕ್ತಿಯನ್ನು ಎಚ್ಚರಗೊಳಿಸುವ ಸಾಧ್ಯತೆ ಕಡಿಮೆ. ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿಯು ತಲೆನೋವು ಆರಂಭವಾಗಿ ಸಾಕಷ್ಟು ಕಾಲದ ಬಳಿಕ ಅನುಕ್ರಮವಾಗಿ ಶೇ.80 ಮತ್ತು ಶೇ.50 ಬಾಧಿತ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹಸಿವಾಗದಿರುವಿಕೆ, ಆಹಾರ ಒಗ್ಗದಿರುವಿಕೆ ಕೂಡ ಇರುತ್ತದೆ. ವಿಶೇಷವಾಗಿ ವಾಂತಿ ಹೆಚ್ಚಿದ್ದರೆ ಮೈಗ್ರೇನ್ ಪೀಡಿತ ಕೆಲವು ವ್ಯಕ್ತಿಗಳು ಕಳೆಗುಂದಿ ನಿಶ್ಶಕ್ತರಾಗಿರುವುದು ಕಂಡುಬರುತ್ತದೆ.
Advertisement
ಬೆಳಕಿನ ಹೆದರಿಕೆ/ ಸಹಿಸದಿರುವಿಕೆ (ಫೊಟೊಫೋಬಿಯಾ) ಮತ್ತು/ ಅಥವಾ ಧ್ವನಿಯ ಹೆದರಿಕೆ/ ಸಹಿಸದಿರುವಿಕೆ (ಫೊನೊಫೋಬಿಯಾ) ಹಾಗೂ ಕೆಲವೊಮ್ಮೆ ವಾಸನೆಗಳ ಬಗ್ಗೆ ಹೆದರಿಕೆ/ ಸಹಿಸದಿರುವಿಕೆ (ಓಸೊ¾ಫೋಬಿಯಾ) ಕೂಡ ಮೈಗ್ರೇನ್ ತಲೆನೋವಿನ ಜತೆಗೆ ಇರುತ್ತದೆ. ತಲೆನೋವು ಸಾಮಾನ್ಯವಾಗಿ ದಿನದ ಬಳಿಕ ನಿಧಾನವಾಗಿ ಮಾಯವಾಗುತ್ತದೆ, ಸಾಮಾನ್ಯವಾಗಿ ಇದು ಒಂದು ನಿದ್ದೆಯ ಬಳಿಕ ನಡೆಯುತ್ತದೆ. ಆ ಬಳಿಕ ರೋಗಿಯು ದಣಿದಿರುತ್ತಾನೆ ಮತ್ತು ದುರ್ಬಲನಾಗಿರುತ್ತಾನೆ. ಮೈಗ್ರೇನ್ ಅನುಭವಿಸುವ ರೋಗಿಗಳಲ್ಲಿ ಶೇ. 60ರಷ್ಟು ಮಂದಿ ಈ ಸಮಸ್ಯೆ ಆರಂಭವಾಗುವ ಪೂರ್ವಲಕ್ಷಣಗಳ ಸ್ಥಿತಿಯನ್ನು ಅನುಭವಿಸುತ್ತಾರೆ. ಇದು ಸಾಮಾನ್ಯವಾಗಿ ನಿಜವಾದ ತಲೆನೋವು ಆರಂಭವಾಗುವುದಕ್ಕೆ ಕೆಲವು ತಾಸು ಅಥವಾ ದಿನ ಮುಂಚಿತವಾಗಿ ಉಂಟಾಗುತ್ತದೆ. ರೋಗಿಗಳು ಮಾನಸಿಕ, ನರಶಾಸ್ತ್ರೀಯ, ವರ್ತನಾತ್ಮಕ ಅಥವಾ ಚಲನಾತ್ಮಕ ಸಂಬಂಧಿ ಭಾವನೆಗಳ ಅಥವಾ ನಡವಳಿಕೆಗಳ ಬದಲಾವಣೆಯನ್ನು ತಾವು ಅನುಭವಿಸುವುದಾಗಿ ವಿವರಿಸುತ್ತಾರೆ.
ಮೈಗ್ರೇನ್ ಕಾಯಿಲೆಯ ಹಂತಗಳುಮೈಗ್ರೇನ್ ಐದು ಹಂತಗಳನ್ನು ಒಳಗೊಂಡಿರುತ್ತದೆ. ಅವು: ಮೈಗ್ರೇನ್‌ನ ತಲೆನೋವು ಪೂರ್ವ ಹಂತವನ್ನು ಪೂರ್ವಲಕ್ಷಣ ಸ್ಥಿತಿ ಮತ್ತು ಔರಾ ಫೇಸ್ ಪ್ರಿಡೋಮ್ ಎಂಬುದಾಗಿ ವಿಭಾಗಿಸಬಹುದು. ಈ ಹಂತಗಳಲ್ಲಿ ನಿರ್ದಿಷ್ಟವಾದ ಲಕ್ಷಣಗಳಿಲ್ಲದಿದ್ದರೂ ಮೈಗ್ರೇನ್ ಉಂಟಾಗಲಿದೆ ಎಂಬುದರ ಸಂಕೇತಗಳು ಕಾಣಿಸಿಕೊಳ್ಳುತ್ತಿರುತ್ತವೆ. ಸಾಮಾನ್ಯ ಸಂಕೇತಗಳೆಂದರೆ, ದಣಿವು, ಕಿರಿಕಿರಿ ಉಂಟಾಗುವುದು, ಹಸಿವಿಲ್ಲದಿರುವುದು, ಹೊಟ್ಟೆ ತೊಳೆಸುವಿಕೆ, ಭಾವನಾತ್ಮಕ ಬದಲಾವಣೆಗಳು, ಕುತ್ತಿಗೆ ಮತ್ತು ತಲೆಯ ಸ್ನಾಯುಗಳಲ್ಲಿ ನೋವು ಮತ್ತು ನಿರ್ದಿಷ್ಟ ಆಹಾರಗಳಿಗಾಗಿ ಕಾತರ. ಈ ಲಕ್ಷಣಗಳು ಮಿದುಳಿನಲ್ಲಿ ಸೆರೊಟಿನ್ ಮತ್ತು/ ಅಥವಾ ಡೋಪಮೈನ್ ರಾಸಾಯನಿಕಗಳ ಬದಲಾವಣೆಗಳಿಂದಾಗಿ ಉಂಟಾಗುತ್ತವೆ ಎಂದು ಭಾವಿಸಲಾಗಿದೆ. ಇದನ್ನು ಮೈಗ್ರೇನ್‌ನ ರಾಸಾಯನಿಕ ಹಂತ ಎಂಬುದಾಗಿಯೂ ವಿವರಿಸಬಹುದಾಗಿದೆ. ಈ ಪೂರ್ವ ಲಕ್ಷಣ ಸ್ಥಿತಿಯು ಮೈಗ್ರೇನ್ ಪ್ರಕರಣಗಳ ಪೈಕಿ ಶೇ. 50ರಿಂದ ಶೇ. 70ರಲ್ಲಿ ಮೈಗ್ರೇನ್‌ಗೆ ಮುನ್ನ ಉಂಟಾಗುತ್ತದೆ. ಪೂರ್ವ ಲಕ್ಷಣ ಸ್ಥಿತಿಯನ್ನು ಅನುಭವಿಸುವವರ ಮೇಲೆ ಇತ್ತೀಚೆಗೆ ನಡೆಸಲಾದ ಒಂದು ಇಲೆಕ್ಟ್ರಾನಿಕ್ ಡೈರಿ ಅಧ್ಯಯನದಲ್ಲಿ ಕಂಡುಬಂದಿರುವಂತೆ, ಮೈಗ್ರೇನ್ ತಲೆನೋವುಗಳ ಶೇ. 50ರ ಪೈಕಿ ಶೇ. 83 ಮಂದಿ ಖಚಿತವಾಗಿ ಮೈಗ್ರೇನನ್ನು ನಿರೀಕ್ಷಿಸಿದ್ದರು. ಹಂತ 2
ಈ ಹಂತವು ಇಲೆಕ್ಟ್ರಿಕಲ್ ಅಸ್ಥಿರತೆಯದ್ದಾಗಿದೆ. ಮಿದುಳಿನ ಕಾರ್ಟೆಕ್ಸ್ ಭಾಗದಲ್ಲಿ ವಿದ್ಯುದೀಯ ಚಟುವಟಿಕೆಯ ಅಲೆ ಚಲಿಸುತ್ತದೆ ಎಂದು ತಿಳಿಯಲಾಗಿದೆ. ದುರ್ಬಲ ನ್ಯೂರಾನ್‌ಗಳು ಈ ಚಟುವಟಿಕೆಯ ಅಲೆಯಲ್ಲಿ “ಸಿಲುಕಿಕೊಂಡರೆ’ ಅವು ಸ್ಕೊಟೊಮಾ ಅಥವಾ ಪೇರೆಸ್ಥೆಸಿಸ್‌ನಂತಹ ದೃಶ್ಯ ನರಶಾಸ್ತ್ರೀಯ ಲಕ್ಷಣಗಳನ್ನು ಉತ್ಪಾದಿಸುತ್ತವೆ. ಕೇವಲ ಸುಮಾರು ಶೇ. 15ರಷ್ಟು ಮೈಗ್ರೇನ್ ತಲೆನೋವು ಪ್ರಕರಣಗಳು ಔರಾದೊಂದಿಗೆ ಸಂಬಂಧ ಹೊಂದಿರುತ್ತವೆ. – ಮುಂದಿನ ವಾರಕ್ಕೆ – ಡಾ| ಶಿವಾನಂದ,
ನ್ಯುರಾಲಜಿ ವಿಭಾಗ
ಕೆಎಂಸಿ ಆಸ್ಪತ್ರೆ, ಮಂಗಳೂರು.