ಮುಂಬೈ: ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನಾ- ಎನ್ ಸಿಪಿ- ಕಾಂಗ್ರೆಸ್ ಮೈತ್ರಿ ಸರಕಾರದ ಖಾತೆ ಹಂಚಿಕೆಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅನುಮೋದನೆ ನೀಡಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದು, ಸಚಿವ ಖಾತೆ ಹಂಚಿಕೆ ಕುರಿತ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ಪ್ರಸ್ತಾವನೆಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅನುಮೋದನೆ ನೀಡಿದ್ದಾರೆ ಎಂದು ಹೇಳಿದೆ.
ಖಾತೆ ಹಂಚಿಕೆಯಲ್ಲಿ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಪಕ್ಷಕ್ಕೆ ಪ್ರಮುಖ ಸಚಿವ ಸ್ಥಾನಗಳು ದೊರೆತಿದೆ ಎಂದು ವರದಿಯಾಗಿದೆ.
ಉಪಮುಖ್ಯಮಂತ್ರಿ , ಎನ್ ಸಿಪಿ ನಾಯಕ ಅಜಿತ್ ಪವಾರ್ ಗೆ ಹಣಕಾಸು ಮತ್ತು ಯೋಜನಾ ಕಾರ್ಯಲಯ ಖಾತೆ ದೊರೆತಿದೆ. ಎನ್ ಸಿಪಿಯನ ಅನಿಲ್ ದೇಶ್ ಮುಖ್ ರಾಜ್ಯದ ಗೃಹ ಸಚಿವ ಸ್ಥಾನ ದೊರೆತಿದೆ ಎಂದು ವರದಿಯಾಗಿದೆ.
ಯುವ ಶಿವಸೇನಾ ನಾಯಕ ಆದಿತ್ಯ ಠಾಕ್ರೆಗೆ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ನೀಡಲಾಗಿದೆ. ಕಾಂಗ್ರೆಸ್ ನಾಯಕ ಬಾಳಾ ಸಾಹೇಬ್ ಥಾರೋಟ್ ಗೆ ಕಂದಾಯ ಖಾತೆ ನೀಡಲಾಗಿದೆ ಎಂದು ವರದಿಯಾಗಿದೆ.