ಬೆಂಗಳೂರು: ದೀಪಾವಳಿ ಮುಗಿಯುತ್ತಿದ್ದಂತೆ “ನಮ್ಮ ಮೆಟ್ರೋ’ 2ನೇ ಹಂತದ ಯೋಜನೆಯ ಯಲಚೇನಹಳ್ಳಿ – ಅಂಜನಾ ಪುರ ನಡುವಿನ ಮಾರ್ಗ ಪರಿಶೀಲನೆಗೆ ರೈಲ್ವೆ ಸುರಕ್ಷಿತ ಆಯುಕ್ತರ ತಂಡ ಭೇಟಿ ನೀಡಲಿದೆ. ಈ ಮೂಲಕ ಉದ್ದೇಶಿತ ಮಾರ್ಗದ ಸೇವೆಗೆಕಾಲ ಸನ್ನಿಹಿತವಾಗಿದೆ.
ಯಲಚೇನಹಳ್ಳಿ- ಅಂಜನಾಪುರ ನಡುವೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಸಿದ್ಧತೆ ನಡೆದಿದ್ದು, ಇದರ ಭಾಗವಾಗಿ ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್)ರಿಗೆ ಆಹ್ವಾನ ಕೂಡನೀಡಲಾಗಿದೆ. ನ.18-19ರಂದು ಸಿಆರ್‌ಎಸ್ ತಂಡ ಭೇಟಿ ನೀಡಲಿದೆ. ಪರಿಶೀಲನೆ ವೇಳೆ ಯಾವುದೇ ಲೋಪಗಳಿಲ್ಲದಿದ್ದರೆ ಶೀಘ್ರ ಪ್ರಮಾಣಪತ್ರ ದೊರೆಯಲಿದೆ. ತಿಂಗಳಾಂತ್ಯಕ್ಕೆ ಚಾಲನೆ ದೊರೆಯಲಿದೆ.
“ಈ ತಿಂಗಳ ಮೊದಲ ವಾರದಲ್ಲಿ ಸಿಆರ್ ಎಸ್ ತಂಡ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಭೇಟಿ ನೀಡಿತ್ತು. ಈ ವೇಳೆ 6.29 ಕಿ.ಮೀ.ಉದ್ದದ ರೀಚ್-4 ಬಿ (ಯಲಚೇನ ಹಳ್ಳಿ -ಅಂಜನಾಪುರ) ಮಾರ್ಗಕ್ಕೆ ಸಂಬಂಧಿಸಿದ ಅಂದಾಜು 300 ಪುಟಗಳುಳ್ಳ ಪವರ್ ಪಾಯಿಂಟ್‌ಗಳೊಂದಿಗೆ ಸುದೀರ್ಘ ಮಾಹಿತಿಯನ್ನು ನಿಗಮದ ಎಂಜಿನಿಯರ್‌ಗಳು ನೀಡಿದ್ದರು. ತದನಂತರ ಪರಿಶೀಲನೆಗೆ ದಿನಾಂಕ ನಿಗದಿಪಡಿಸಿ, ಸೂಚಿಸುವುದಾಗಿ ಸಿಆರ್‌ಎಸ್ ತಂಡಹೇಳಿತ್ತು’ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ “ಉದಯವಾಣಿ’ಗೆಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, “ಸಿಆರ್‌ಎಸ್ ತಂಡ ಪರಿಶೀಲನೆಗೆ ಆಗಮಿಸಲಿದೆ. ಆದಷ್ಟು ಬೇಗ ಭೇಟಿ ನೀಡುವಂತೆ ದೀಪಾವಳಿ ನಂತರ ಮತ್ತೂಮ್ಮೆ ಫೋನ್ ಮೂಲಕ ಮನವಿ ಮಾಡ ಲಾಗುವುದು’ ಎಂದು ಸ್ಪಷ್ಟಪಡಿಸಿದರು. ನ.1ಕ್ಕೆ ಮಾರ್ಗವನ್ನು ವಾಣಿಜ್ಯ ಸೇವೆಗೆ ಮುಕ್ತಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿತ್ತು. ತಾಂತ್ರಿಕ ಕಾರಣ ಸಣ್ಣ ಪುಟ್ಟ ಕಾಮಗಾರಿ ಇನ್ನೂ ಬಾಕಿ ಇದ್ದರಿಂದ ಸಿಆರ್ ಎಸ್‌ಗೆ ಆಹ್ವಾನ ನೀಡುವಲ್ಲಿ ತಡವಾಯಿತು.
20ಕ್ಕೆ ಎಂದಿನಂತೆ ಸೇವೆ : ಈ ಮಧ್ಯೆ ಯಲಚೇನಹಳ್ಳಿ- ಅಂಜನಾಪುರ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಪೂರ್ವಸಿದ್ಧತೆಕಾರ್ಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಹಸಿರು ಮಾರ್ಗದ ಆರ್.ವಿ.ರಸ್ತೆ-ಯಲಚೇನ ಹಳ್ಳಿ ನಡುವೆ ನ.17ರಿಂದ19ರವರೆಗೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ.17ರ ಬೆಳಗ್ಗೆ 7ರಿಂದ ರಾತ್ರಿ9ರವರೆಗೆ ನಾಗಸಂದ್ರ ನಿಲ್ದಾಣದಿಂದ ಆರ್.ವಿ.ರಸ್ತೆ ನಿಲ್ದಾಣದವರೆಗೆ ಮಾತ್ರ ಸೇವೆ ಇರಲಿದೆ. ನ.20 ರಂದು ಎಂದಿನಂತೆ ನಾಗಸಂದ್ರ- ಯಲಚೇನಹಳ್ಳಿ ನಡುವೆ ಸೇವೆ ಪುನಾ ರಂಭಗೊಳ್ಳಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ತಿಳಿಸಿದೆ.
ಮಾರ್ಗದಲ್ಲಿನ ಮೆಟ್ರೋ ನಿಲ್ದಾಣಗಳು : ಅಂಜನಾಪುರ ರೋಡ್‌ಕ್ರಾಸ್,ಕೃಷ್ಣಲೀಲಾ ಪಾರ್ಕ್, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್‌ಶಿಪ್