Advertisement

ಮೆಟ್ರೋ; ಬದಲಾಗುತ್ತಾ ಜೀವನ ಶೈಲಿ?

03:44 PM Aug 28, 2021 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಮತ್ತೊಂದು ವಿಸ್ತರಿತ ಮಾರ್ಗ ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ಲೋಕಾರ್ಪಣೆಗೆ ಈಗಕ್ಷಣಗಣನೆ. ನಗರದ ಸಂಚಾರದಟ್ಟಣೆ ತಗ್ಗಿಸಲು ನಿರ್ಮಾಣಗೊಂಡ ಈ ಮಾರ್ಗವು ಮುಂಬರುವ ದಿನಗಳಲ್ಲಿ ಆ ಭಾಗದ
ಸಾಮಾಜಿಕ-ಆರ್ಥಿಕತೆಯ ಬದಲಾವಣೆಗೂ ಇದು ಬಹುದೊಡ್ಡ ಪಾತ್ರ ನಿರ್ವಹಿಸಲಿದೆ.

Advertisement

ಕೆಂಗೇರಿಯಿಂದ ಮೈಸೂರು ಮಾರ್ಗದುದ್ದಕ್ಕೂ ಬಿಡದಿ,ರಾಮನಗರ,ಮಂಡ್ಯ,ಮದ್ದೂರು,ಚನ್ನಪಟ್ಟಣ, ಶ್ರೀರಂಗಪಟ್ಟಣ ಸೇರಿದಂತೆ ಹತ್ತಾರು ಊರುಗಳು ಬರುತ್ತವೆ. ಅಲ್ಲಿನ ಸಾವಿರಾರು ನಿವಾಸಿಗಳು ನಿತ್ಯದ ವಿವಿಧ ಕೆಲಸ-ಕಾರ್ಯಗಳಿಗೆ ನಗರದ ಕಡೆ ಮುಖಮಾಡಿದ್ದಾರೆ. ಆದರೆ, ನಗರಕ್ಕೆ ಹತ್ತಿರದಲ್ಲೇ ಇದ್ದರೂ, ಸಂಚಾರದಟ್ಟಣೆಯಿಂದ ಪ್ರತಿ ದಿನದ ಪ್ರಯಾಣ ಆ ಭಾಗದ ಜನರಿಗೆ ಪ್ರಯಾಸದಾಯಕ ಆಗಿದೆ. ಈ ಹಿನ್ನೆಲೆಯಲ್ಲಿ ಮನೆಗಳನ್ನು ಬಾಡಿಗೆ ಪಡೆದು ಇಲ್ಲಿ ವಾಸ ಇರಬೇಕಾದ ಅನಿವಾರ್ಯತೆ ಇದೆ. ಆದರೆ, ಈಗ ನಗರದ ಹೃದಯಭಾಗ ಮೆಜೆಸ್ಟಿಕ್‌ ನಿಂದ ಕೆಂಗೇರಿ ಕೇವಲ 40-45 ನಿಮಿಷಗಳ ದಾರಿ. ಅಲ್ಲಿಂದ ಮೈಸೂರು ಹತ್ತು ಪಥಗಳ ರಸ್ತೆಯಾಗಿದೆ.

ಹಾಗಾಗಿ, ಸಂಚಾರದಟ್ಟಣೆಗೆ ಬಹುತೇಕ ಮುಕ್ತಿ ದೊರೆಯಲಿದ್ದು, ನಗರದಲ್ಲೇ ವಾಸವಿರಬೇಕಾದ ಅನಿವಾರ್ಯತೆ ತಪ್ಪಲಿದೆ. ಇದರಿಂದ ಆರ್ಥಿಕ ಹೊರೆ ತಕ್ಕಮಟ್ಟಿಗೆ ತಗ್ಗುವುದರ ಜತೆಗೆ ಸಂಜೆಯಾಗುತ್ತಿದ್ದಂತೆ ಜನ ಗೂಡು ಸೇರಬಹುದು. ಉಳಿತಾಯ ಆಗುವ ಸಮಯವನ್ನು ತಮ್ಮ ಕುಟುಂಬದ ಸದಸ್ಯರೊಂದಿಗೆ ಕಳೆಯಲಿಕ್ಕೂ ಸಾಧ್ಯವಾಗಲಿದೆ.

ಸಮಯ ಉಳಿತಾಯ ಮಾತ್ರವಲ್ಲ; ಮಕ್ಕಳ ಶಿಕ್ಷಣದ ಹೊರೆ ತಗ್ಗಲಿದೆ. ನಗರದ ಮೇಲಿನ ಒತ್ತಡ ಕಡಿಮೆಆಗಲಿದೆ. ವೃತ್ತಿಯ ಜತೆಗೆ ಕೃಷಿ ಮತ್ತಿತರ ಚಟುವಟಿಕೆಗಳಲ್ಲಿ ಆಸಕ್ತಿ ಇರುವವರಿಗೆ ಪೂರಕವಾಗಲಿದ್ದು, ಆ ಮೂಲಕ ಉತ್ಪಾದಕತೆಹೆಚ್ಚಲಿದೆ.ಇದುಪರೋಕ್ಷವಾಗಿ ಒಟ್ಟಾರೆ ಆಂತರಿಕ ವೃದ್ಧಿಗೂ ನೆರವಾಗಲಿದೆ. ಮಾರ್ಗದ ಉದ್ದ ಬರೀ 7.50 ಕಿ.ಮೀ. ಇರಬಹುದು. ಆದರೆ, ಭವಿಷ್ಯದಲ್ಲಿ ಮೆಟ್ರೋ ಜಾಲ ಮತ್ತಷ್ಟು ಹಿಗ್ಗಲಿದೆ. ಆ ದೃಷ್ಟಿಯಿಂದ ಇದರ ಪರಿಣಾಮ ಉತ್ತಮವಾಗಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ಪ್ರಯಾಣಿಕರು ಏನಂತಾರೆ?: ಮೆಟ್ರೋ ಬರುತ್ತಿರುವುದು ನಿರೀಕ್ಷೆಗಳು ಮತ್ತೆ ಚಿಗುರೊಡೆಯುವಂತೆ ಮಾಡಿದೆ. ಪ್ರಯಾಣ ದರ ತುಸು ಕೈಗೆಟುವಂತಾದರೆ, ಪ್ರತಿ ದಿನ ಊರಿಂದಲೇ ಬಂದುಹೋಗುತ್ತೇನೆ’ ಎಂದು ಬಿಎಂಟಿಸಿ ಬಸ್‌ ನಿರ್ವಾಹಕ ಚನ್ನಪಟ್ಟಣದ ನಿವಾಸಿ ಮಹೇಶ್‌ ತಿಳಿಸುತ್ತಾರೆ. ಕೆಂಗೇರಿವರೆಗೂ ಮೆಟ್ರೋ ಬರುತ್ತಿರುವುದು ಖುಷಿ ತಂದಿದೆ. ಯಾಕೆಂದರೆ, ನಮಗೆ ಊರಿನಿಂದ ಕೆಂಗೇರಿ ತಲುಪುವುದು ಸುಲಭವಾಗಿತ್ತು. ಆದರೆ, ಅಲ್ಲಿಂದ ಕೆಲಸ ಮಾಡುವ ಜಾಗಕ್ಕೆ ತೆರಳಲು ಹರಸಾಹಸ ಮಾಡಬೇಕಾಗಿತ್ತು. ಇನ್ಮುಂದೆ ಅದರ ಚಿಂತೆ ಕಾಡದು’ ಎಂದು ಖಾಸಗಿ ಉದ್ಯೋಗಿ ಮಂಡ್ಯ ಮೂಲನಿವಾಸಿ ವಿನೋದ್‌ ಹೇಳುತ್ತಾರೆ.

Advertisement

ಸಮಸ್ಯೆಗಳೂ ಇವೆ: ಈ ಮಾರ್ಗದಲ್ಲೊಂದಿಷ್ಟು ತಾಂತ್ರಿಕ ಸಮಸ್ಯೆಗಳೂ ಇವೆ. ಜ್ಞಾನಭಾರತಿ ಮೆಟ್ರೋ ನಿಲ್ದಾಣ ಪಕ್ಕದಲ್ಲೇ ರೈಲು ನಿಲ್ದಾಣ ಇದೆ. ಎರಡರ ನಡುವೆ ಸಂಪರ್ಕ ಕಲ್ಪಿಸುವ ಕೆಲಸ ಆಗಿಲ್ಲ. ಪ್ಯಾಸೆಂಜರ್‌ ರೈಲುಗಳು ಮಾತ್ರ ನಿಲುಗಡೆ ಆಗುತ್ತವೆ. ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ವ್ಯವಸ್ಥೆ ಇಲ್ಲ. ಪ್ರಸ್ತುತ ಕಾರ್ಯಾಚರಣೆಮಾಡುವರೈಲುಗಳಕಾರ್ಯಕ್ಷಮತೆ ಹೆಚ್ಚಬೇಕು. ಅಂದರೆ ಸಂಜೆ ಮತ್ತು ಬೆಳಗ್ಗೆ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ರೈಲು ಸೇವೆ ಮತ್ತು ಬಸ್‌ ಸೇವೆಗಳು ದೊರೆಯುವಂತಾಗಬೇಕು. ಅದು ಅಂದುಕೊಂಡಷ್ಟು ಸರಳವಾಗಿಯೂ ಇಲ್ಲ. ಇದೆಲ್ಲವೂ ಆಗದಿದ್ದರೆ, ಉದ್ದೇಶವೂ ಸಾಕಾರಗೊಳ್ಳುವುದಿಲ್ಲ ಎಂದು ನಗರ ರೈಲ್ವೆ ಹೋರಾಟಗಾರ ಸಂಜೀವ ದ್ಯಾಮಣ್ಣವರ ಅಭಿಪ್ರಾಯ ಪಡುತ್ತಾರೆ.

ಹೈಟೆಕ್‌ ಆಯ್ತು ಬದುಕಿನ ಬಂಡಿ
ಆರಂಭದಲ್ಲಿ ಮೇಲ್ಮಧ್ಯಮ ವರ್ಗಕ್ಕೆ ಸೀಮಿತವಾಗಿತ್ತು. ಆದರೆ, ಒಂದೂವರೆ ವರ್ಷದ ಅಂತರದಲ್ಲಿ ಬೀದಿ ಬದಿ ವ್ಯಾಪಾರಿಗಳು, ತರಕಾರಿ ಮಾರುವವರು, ಕೂಲಿಕಾರ್ಮಿಕರೆ ಲ್ಲರನ್ನೂ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ನಿತ್ಯ ಅವರೆಲ್ಲಾ ತುಂಬಿತುಳುಕುವ
ಗೂಡ್ಸ್‌ ಆಟೋ, ಟೆಂಪೋ, ಖಾಸಗಿ, ಬಿಎಂಟಿಸಿ ಬಸ್‌ಗಳಲ್ಲಿ ನಿಂತು ನಿಗದಿತ ಸ್ಥಳ ತಲುಪಬೇಕಿತ್ತು. ಅದೇ ರೀತಿ, ಮಧ್ಯಮ
ವರ್ಗದ ಜನ ಸ್ವಂತ ವಾಹನಗಳನ್ನು ಏರಿ, ಮುಖಕ್ಕೊಂದು ಮಾಸ್ಕ್ ಹಾಕಿಕೊಂಡು(ಸದ್ಯ ಕೊರೊನಾದಿಂದ ಬಚಾವಾಗಲು ಮಾಸ್ಕ್
ಹಾಕಲಾಗುತ್ತಿದೆ) ಓಡಾಡಬೇಕಿತ್ತು. ಈಗಇವರೆಲ್ಲರ “ಬದುಕಿನ ಬಂಡಿ’ ಹೈಟೆಕ್‌ ಆಗಲಿದೆ. ಹವಾನಿಯಂತ್ರಿತ ಮೆಟ್ರೋದಲ್ಲಿ ಬಂದಿಳಿದು, ಕೆಲಸ ಮುಗಿಸಿಕೊಂಡು ನಿಶ್ಚಿಂತೆಯಾಗಿ ಮನೆಗೆ ಹಿಂತಿರುಗುತ್ತಾರೆ. ಇದರಿಂದ ಗುಣಮಟ್ಟದ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಇಂಧನ ಉಳಿತಾಯ ಆಗುತ್ತಿದೆ. ಬೆನ್ನುನೋವು, ಅಲರ್ಜಿ, ನಿರಂತರಕೆಮ್ಮಿನಂತಹ ಅನಾರೋಗ್ಯ ಸಮಸ್ಯೆಗಳು ಕಡಿಮೆಯಾಗಿವೆ.

“ಲಾಸ್ಟ್‌ಮೈಲ್‌ ಕನೆಕ್ಟಿವಿಟಿ ಪರಿಣಾಮಕಾರಿ ಆಗಲಿ’
ಬೆಂಗಳೂರಿನಂತಹ ಮಹಾನಗರಗಳಲ್ಲಿನ ಸಂಚಾರದಟ್ಟಣೆ ಸಮಸ್ಯೆಗೆ ಮೆಟ್ರೋಒಂದು ಸುಸ್ಥಿರ ಹಾಗೂದೀರ್ಘಾವಧಿ ಪರಿಹಾರ ಎಂಬುದರಲ್ಲಿ
ಎರಡು ಮಾತಿಲ್ಲ.ಆದರೆ,ಅದು ನಿರೀಕ್ಷಿತ ಪರಿಣಾಮಬೀರಬೇಕಾದರೆ,ಕನಿಷ್ಠ ಎರಡೂ ಹಂತಗಳನ್ನಾದರೂ ಪೂರ್ಣಗೊಳಿಸಬೇಕು. ಅದಕ್ಕೆ
ಪೂರಕವಾಗಿ “ಲಾಸ್ಟ್‌ಮೈಲ್‌ಕನೆಕ್ಟಿವಿಟಿ’ ಅಂದರೆ ನಿಲ್ದಾಣಕ್ಕೆಬಂದಿಳಿಯುವ ಪ್ರಯಾಣಿಕರು ನಿಗದಿತ ಸ್ಥಳ ತಲುಪಲು ಸೂಕ್ತ ಸಾರಿಗೆ ವ್ಯವಸ್ಥೆ
ಕಲ್ಪಿಸಬೇಕಾಗುತ್ತದೆ. ವಿಚಿತ್ರವೆಂದರೆ ಈ ವರೆಗೆ ಇದಾವುದೂ ಸಮರ್ಪಕವಾಗಿ ಆಗಿಲ್ಲ.ಹೊಸದಾಗಿ ಸೇರ್ಪಡೆಗೊಳ್ಳಲಿರುವಕೆಂಗೇರಿ ಮಾರ್ಗದಲ್ಲೂ ಅದು ಪುನರಾವರ್ತನೆ ಆಗದಿರಲಿ.ಇಲ್ಲಿಪ್ರತಿ 15 ನಿಮಿಷಕ್ಕೊಂದು ಮೆಟ್ರೋ ಸಂಪರ್ಕ ಸೇವೆಗಳನ್ನು ಬಿಎಂಟಿಸಿ ಪರಿಚಯಿಸಲು ನಿರ್ಧರಿಸಿದೆ.

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next