Advertisement

ತಣ್ತೀ ಆಧಾರಿತ ಆರೋಗ್ಯಸೇವೆ: ಡಾ|ಶಾಂತಾರಾಮ ಶೆಟ್ಟಿ ಕರೆ

03:59 PM Jan 14, 2018 | Team Udayavani |

ಉಡುಪಿ: ನೀತಿ, ತಣ್ತೀ ಆಧಾರಿತ ಆರೋಗ್ಯ ಸೇವೆಗೆ ನಾವು ಕಂಕಣಬದ್ಧರಾಗಬೇಕಾಗಿದೆ ಎಂದು ನಿಟ್ಟೆ ವಿ.ವಿ. ಸಹಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ ಹೇಳಿದರು.  ಮಣಿಪಾಲ ವಿ.ವಿ., ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌, ಸಿಂಡಿಕೇಟ್‌ ಬ್ಯಾಂಕ್‌ ಜಂಟಿ ಆಶ್ರಯದಲ್ಲಿ ಮಣಿಪಾಲದ ಹೊಟೇಲ್‌ ವ್ಯಾಲಿವ್ಯೂ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಹೊಸ ವರ್ಷದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿ ತಿರುವಿನಲ್ಲಿದೆ. ನಾವು ವಾಸ್ತವವನ್ನು ಅರಿತು ವೈದ್ಯ ವೃತ್ತಿಯ ಶ್ರೇಷ್ಠ ನೀತಿ ಅನುಸರಿಸುವುದರೊಂದಿಗೆ ವೈದ್ಯಕೀಯ ಶಿಕ್ಷಣವನ್ನು ಜ್ಞಾನದಿಂದ ಕೌಶಲಕ್ಕೆ, ಕೌಶಲದಿಂದ ವಿವೇಕಯುಕ್ತ ಜ್ಞಾನಕ್ಕೆ ಪರಿವರ್ತಿಸಬೇಕು. ಅಂತಿಮವಾಗಿ ಇದರ ಲಾಭ ಸಾಮಾನ್ಯ ಜನರಿಗೆ ದೊರಕಬೇಕು ಎಂದು ಆಶಿಸಿದರು. 

Advertisement

ಜಗತ್ತಿನೆಲ್ಲೆಡೆ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಅಪಾರ ಗೌರವವಿದೆ. ಅದರಲ್ಲೂ ವಿಶೇಷವಾಗಿ ಅಮೆರಿಕ, ಇಂಗ್ಲೆಂಡ್‌ನ‌ಲ್ಲಿ ಹೆಚ್ಚಿನ ಗೌರವವಿದೆ. ಭಾರತೀಯ ವಿದ್ಯಾಭವನದವರು ಭಾರತದಿಂದ ಸಂಗೀತ, ನೃತ್ಯ, ವಾದ್ಯ ವಿದ್ವಾಂಸರನ್ನು ಕರೆಸಿಕೊಂಡು ಪಾಠ ಮಾಡಿಸುತ್ತಿದ್ದಾರೆ ಎಂದು ಪ್ರಶಸ್ತಿ ಪುರಸ್ಕೃತ ಸ್ಯಾಕೊÕàಫೋನ್‌ ವಾದಕ ಡಾ| ಕದ್ರಿ ಗೋಪಾಲನಾಥ್‌ ಹೇಳಿದರು. 

ಡಾ| ಟಿಎಂಎ ಪೈಯವರು ಮಾನವೀಯತೆ ಆಧರಿತ ಶಿಕ್ಷಣ, ಆರೋಗ್ಯ, ಹಣಕಾಸು ಕ್ಷೇತ್ರಕ್ಕೆ ಕೈಹಾಕಿ ಮಣಿಪಾಲವನ್ನು ಬೆಳೆಸಿದರು. ಇವರ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ತನಗೆ ದೊರಕಿದೆ ಎಂದು ಪ್ರಶಸ್ತಿ ಪುರಸ್ಕೃತ ಮಣಿಪಾಲ ವಿ.ವಿ. ಕುಲಪತಿ ಡಾ| ಎಚ್‌. ವಿನೋದ ಭಟ್‌ ಹೇಳಿದರು. 

ಡಾ| ಶಾಂತಾರಾಮ ಶೆಟ್ಟಿಯವರನ್ನು ಸಿಂಡಿಕೇಟ್‌ ಬ್ಯಾಂಕ್‌ ಆಡಳಿತ ನಿರ್ದೇಶಕ ಮೆಲ್ವಿನ್‌ ರೇಗೋ, ಕದ್ರಿ ಗೋಪಾಲನಾಥ್‌ ಅವರನ್ನು ಡಾ| ಟಿಎಂಎ ಪೈ ಪ್ರತಿಷ್ಠಾನದ ಕಾರ್ಯದರ್ಶಿ, ಖಜಾಂಚಿ ಟಿ. ಅಶೋಕ್‌ ಪೈ, ವೈದೇಹಿ ಅವರನ್ನು ಮಣಿಪಾಲ ವಿ.ವಿ. ಪ್ರಥಮ ಮಹಿಳೆ  ವಸಂತಿ ಆರ್‌. ಪೈ, ಮಣಿಪಾಲ ವಿ. ವಿ. ಕುಲಪತಿ ಡಾ| ಎಚ್‌. ವಿನೋದ ಭಟ್‌ ಅವರನ್ನು ಎಂಇಎಂಜಿ ಅಧ್ಯಕ್ಷ ಡಾ| ರಂಜನ್‌ ಪೈಯವರು ಅಭಿನಂದಿಸಿದರು. ಅಕಾಡೆಮಿ ಅಧ್ಯಕ್ಷ  ಡಾ|ಎಚ್‌.ಎಸ್‌. ಬಲ್ಲಾಳ್‌ ಸ್ವಾಗತಿಸಿ ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌ ಕಾರ್ಯಕ್ರಮ ನಿರ್ವಹಿಸಿದರು.

ಸರಳ ಬೋಧನ ಕ್ರಮ ವೈದೇಹಿ ವಿಶ್ವಾಸ ಪ್ರಾಥಮಿಕ ಶಿಕ್ಷಣದಲ್ಲಿ ಬೋಧನ ಕ್ರಮ ಸರಳವಾಗಿರಬೇಕು, ಮಕ್ಕಳ ಆಹಾರದಂತೆ ಸುಲಭವಾಗಿ ಜೀರ್ಣ ಗೊಳ್ಳುವಂತಿರಬೇಕು. ಮಕ್ಕಳ ಮನಸ್ಸು ಕಷ್ಟ ಪಡದೆ ಪಾಠವನ್ನು ಓದುವಂತಿರ
ಬೇಕು. ಇಂದಿನ ಕಾಲಕ್ಕೆ ತಕ್ಕಂತೆ ಕನ್ನಡ ಮಾಧ್ಯಮ ಶಾಲೆಗಳನ್ನು ಮೇಲ್ದರ್ಜೆ ಗೇರಿಸಬೇಕು. ಪೋಷಕರು ಸ್ವಯಂ ಆಸಕ್ತಿಯಿಂದ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸುವಂತೆ ಸುಸಜ್ಜಿತವಾಗಿರಿಸಬೇಕು. ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮವಾಗಿ ರದೆ ಒಂದು ಭಾಷೆಯಾಗಿ ಪಠ್ಯಕ್ರಮ ದಲ್ಲಿರಬೇಕು. ಪ್ರಾಥಮಿಕ ಶಾಲೆಗಳು ಪುಸ್ತಕ, ಪಾಠಗಳ ಭಾರದಿಂದ ಮುಕ್ತ ವಾಗಿ ಸರಳ ಬೋಧನ ಕ್ರಮ ಜಾರಿಯಾ ಗುವ ಕಾಲ ಬರುತ್ತದೆ ಎಂದು ಪ್ರಶಸ್ತಿ ಪುರಸ್ಕೃತೆ ಸಾಹಿತಿ ವೈದೇಹಿ ಆಶಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next