ಉದ್ಯಮಶೀಲತೆ ಇಲಾಖೆಯ (ರಾಜ್ಯಖಾತೆ) ಸಚಿವ ರಾಜೀವ್ ಚಂದ್ರಶೇಖರ್ ಮಂಗಳವಾರ ಉದ್ಘಾಟಿಸಿದರು.
Advertisement
ಸ್ಥಳೀಯ ಯುವ ಜನತೆಗೆ ಉದ್ಯೋಗಾಧಾರಿತ ಕೌಶಲ ಒದಗಿಸುವ ಸದುದ್ದೇಶದಿಂದ ಡಾ| ಟಿಎಂಎ ಪೈ ಪ್ರತಿಷ್ಠಾನವು ಎಂಎಸ್‌ಡಿಸಿಯನ್ನು ಸ್ಥಾಪಿಸಿದೆ. ಇಲ್ಲಿರುವ ಎಲ್ಲ ಕೋರ್ಸ್‌ಗಳು ಕೇಂದ್ರ ಸರಕಾರದ ನ್ಯಾಶನಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (ಎನ್‌ಎಸ್‌ಡಿಸಿ)ನಿಂದ ಮಾನ್ಯವಾಗಿವೆ. ಕೈಗಾರಿಕೆಗಳಿಗೆ ಪೂರಕವಾದ ತಂತ್ರ ಜ್ಞಾನ ಆಧಾರಿತ ತರಬೇತಿಯನ್ನು ಮತ್ತು ರೋಬೋ ಬಳಸಿಕೊಂಡು ಹತ್ತಾರು ಪ್ರಮುಖ ಕಾರ್ಯಗಳನ್ನು ಹೇಗೆ ನಿರ್ವಹಿಸಬಹುದು ಎಂಬ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಇಂಡಸ್ಟ್ರಿಯಲ್ ರೋಬೋಟ್ ಫಾರ್ ವೈಸ್ ಕಮಾಂಡ್, ಕಲರ್, ಮೆಟಿರಿಯಲ್ ಗುರುತಿಸುವಿಕೆ ಇತ್ಯಾದಿಗಳನ್ನು ಒಳಗೊಂಡಿದೆ.
“ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್’ (ಎಂಎಸ್‌ಡಿಸಿ)ನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಯಂತ್ರೋಪಕರಣಗಳ ಮೂಲಕ ಆಧುನಿಕ ಕೌಶಲಗಳ ತರಬೇತಿಗೆ ಅನುಕೂಲವಾಗುವ 16 ಘಟಕಗಳನ್ನು ಸಿದ್ಧಗೊಳಿಸಲಾಗಿದೆ.ಇಲ್ಲಿ ಪ್ರಮುಖವಾಗಿ ಒರೇನ್ ಇಂಟರ್‌ನ್ಯಾಶನಲ್ ಅವರ ಬ್ಯೂಟಿ ಆ್ಯಂಡ್ ವೆಲ್‌ನೆಸ್ ಘಟಕವು ಸೌಂದರ್ಯ ಮತ್ತು ಆರೋಗ್ಯ ವೃದ್ಧಿಯ ತರಬೇತು ನೀಡಲಾಗುವುದು. ಒರೇನ್ ಇಂಟರ್‌ನ್ಯಾಶನಲ್ ವಿಶ್ವದ ಸಿಬ್‌ಟ್ಯಾಕ್ ಮತ್ತು ಸಿಡೆಸ್ಕೋದಿಂದ ಮಾನ್ಯತೆ ಪಡೆದಿದ್ದು ಇಲ್ಲಿ ಸೌಂದರ್ಯ, ಮುಖವರ್ಣಿಕೆ, ತಲೆಕೂದಲು, ಉಗುರನ್ನು ಕಾಪಾಡುವ ತರಬೇತಿ ನೀಡಲಾಗುವುದು.
Related Articles
Advertisement
ಪವರ್ ಆ್ಯಂಡ್ ಎನರ್ಜಿ ಸಿಸ್ಟಮ್ ಲ್ಯಾಬ್‌ನಲ್ಲಿ ವಿದ್ಯುತ್ ಸ್ವಿಚ್‌ಗೇರ್, ಮೋಟಾರ್ ಜನರೇಟರ್, ಸೋಲಾರ್ ಎನರ್ಜಿ ಕುರಿತು ತರಬೇತಿ ನೀಡಲಾಗುತ್ತದೆ. ಡೈಕಿನ್ ರೆಫ್ರಿಜರೇಶನ್ ಏರ್‌ಕಂಡೀಶನ್ ಲ್ಯಾಬ್ ಅನ್ನು ಎಸಿ ಮೆಷಿನ್ ತರಬೇತಿಗೆ ಬಳಸಲಾಗುತ್ತದೆ. ಆಟೋಮೊಬೈಲ್ ಸರ್ವಿಸ್ ಸ್ಟೇಷನ್‌ನಲ್ಲಿ ವಾಹನದ ಡೆಂಟಿಂಗ್, ವ್ಹೀಲ್ ಅಲೈನ್‌ಮೆಂಟ್ ಆ್ಯಂಡ್ ಬ್ಯಾಲೆನ್ಸಿಂಗ್, ಪೈಂಟಿಂಗ್, ಕಾರ್ ವಾಶ್ ಇತ್ಯಾದಿಗಳನ್ನು ಕಲಿಸಿಕೊಡಲಾಗುವುದು. ಸಂಸ್ಥೆಯ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಡಿಪ್ಲೊಮಾ, ಐಟಿಐ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್‌ಗೆ ಅನುಕೂಲವಾಗಲಿದೆ ಎಂದು ಪ್ರಾಂಶುಪಾಲ ಪ್ರೊ| ಎ.ಎನ್. ಕಾಂತರಾಜ್ ತಿಳಿಸಿದ್ದಾರೆ.
16 ಸ್ಕಿಲ್ ಲ್ಯಾಬ್ಸ್ರೋಬೋಟಿಕ್ಸ್ ಸೆಂಟರ್ ಫಾರ್ ಎಕ್ಸೆಲೆನ್ಸಿಯು ಎಂಎಸ್‌ಡಿಸಿಯ 16ನೇ ಕೌಶಲ ಶಾಲೆಯಾಗಿದೆ. ಆಟೋಫಿನಾ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಇಂಡಸ್ಟ್ರಿಯಲ್ ರೋಬೋಟಿಕ್ಸ್, ರೋಬೋಟಿಕ್ಸ್ ಆ್ಯಂಡ್ 3ಡಿ ಪ್ರಿಂಟಿಂಗ್ ಲ್ಯಾಬ್, ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸಿಎನ್‌ಸಿ ಮೆಷಿನ್ಸ್, ವುಡ್ ವರ್ಕಿಂಗ್ ವರ್ಕ್‌ಶಾಪ್, ಡಿಜಿಟಲ್ ಪ್ರಿಂಟಿಂಗ್ ಲ್ಯಾಬ್, ಏವಿಯೋಸಿಯನ್ ಟೆಕ್ನಾಲಜೀಸ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಡ್ರೋನ್ ಟೆಕ್ನಾಲಜಿ, ಎಸ್‌ವಿಆರ್ ರೋಬೋಟಿಕ್ಸ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಇಂಡಸ್ಟ್ರಿಯಲ್ ಆಟೋಮೇಶನ್, ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಟ್ರೈನಿಂಗ್ ಸೆಂಟರ್ ಬೈ ಟಿಫ್ ಲ್ಯಾಬ್ಸ್, ಪಿಸಿಬಿ ಡಿಸೈನ್ ಆ್ಯಂಡ್ ಪ್ರೋಟೋಟೈಪಿಂಗ್ ಸ್ಟುಡಿಯೋ, ಪವರ್ ಆ್ಯಂಡ್ ಎನರ್ಜಿ ಸಿಸ್ಟಮ್ಸ್ ಲ್ಯಾಬ್, ಡೈಕಿನ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ರೆಫ್ರಿಜರೇಶನ್ ಆ್ಯಂಡ್ ಏರ್‌ಕಂಡೀಶನಿಂಗ್, ಡಾ ವಿನ್ಸಿ ಸೆಂಟರ್ ಫಾರ್ ಆ್ಯನಿಮೇಶನ್ ಟೆಕ್ನಾಲಜಿ, ಒರೇನ್ ಸ್ಕೂಲ್ ಆಫ್ ಬ್ಯೂಟಿ ಆ್ಯಂಡ್ ವೆಲ್‌ನೆಸ್, ಸ್ಕೂಲ್ ಆಫ್ ಇಂಟೀರಿಯರ್ ಡಿಸೈನ್ ಬೈ ಕ್ಯಾಡ್ ಸೆಂಟರ್, ಸೆಂಟರ್ ಆಫ್ ಎಕ್ಸೆಲೆನ್ಸ್ ಇನ್ ಎಕೆಕ್ಟ್ರಿಕ್ ವೆಹಿಕಲ್ಸ್ ಬೈ ಕ್ಯಾಡ್ ಸೆಂಟರ್, ಆಟೋಮೊಬೈಲ್ ಸರ್ವಿಸ್ ಸ್ಟೇಷನ್ ಸಹಿತ 16 ಘಟಕಗಳನ್ನು ಸಿದ್ಧಗೊಳಿಸಲಾಗಿದೆ.