ಮಂಗಳೂರು: ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ಹಾಗೂ ಕೊಂಕಣಿ ಭಾಷಾ ಕ್ಷೇತ್ರಗಳಿಗೆ ಅಮೂಲ್ಯ ಕೊಡುಗೆ ನೀಡಿರುವ ದಿ| ಪದ್ಮಶ್ರೀ ಡಾ| ಟಿಎಂಎ ಪೈ ಅವರ ಶತಮಾನೋತ್ತರ ರಜತ ಜಯಂತಿಯನ್ನು ಎ. 23ರಂದು ಮಂಗಳೂರಿನ ಸುಜೀರ್ ಸಿ.ವಿ. ನಾಯಕ್ ಸಭಾಗೃಹದಲ್ಲಿ ಆಯೋಜಿಸಲಾಗಿದೆ.
ಜನ್ಮದಿನಾಚರಣೆ ಪ್ರಯುಕ್ತ
ಪದವಿ ಶಿಕ್ಷಣ ವಿದ್ಯಾರ್ಥಿಗಳಿಗೆ ಭಾಷಣ ಹಾಗೂ ಪ್ರೌಢಶಾಲಾ ಮತ್ತು ಪ.ಪೂ. ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಿರುವುದಾಗಿ ಜಿಎಸ್‌ಬಿ ಸೇವಾ ಸಂಘದ ಅಧ್ಯಕ್ಷ ಡಾ| ಕಸ್ತೂರಿ ಮೋಹನ ಪೈ ಶುಕ್ರವಾರ ಪತ್ರಿಕಾ
ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಾ| ಟಿಎಂಎ ಪೈ ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ಹಾಗೂ ಭಾಷೆಗಾಗಿ ನೀಡಿರುವ ಅಮೂಲ್ಯ ಕೊಡುಗೆಯ ಬಗ್ಗೆ 3 ನಿಮಿಷಗಳಲ್ಲಿ ಇಂಗ್ಲಿಷ್, ಕನ್ನಡ,ಕೊಂಕಣಿ, ಹಿಂದಿ, ತುಳು ಹಾಗೂ ಸಂಸ್ಕೃತ ಭಾಷೆಗಳಲ್ಲಿ ಭಾಷಣ ಸ್ಪರ್ಧೆ ನಡೆಯಲಿದೆ.
ಎ. 23ರಂದು ಬೆಳಗ್ಗೆ 9ರಿಂದ 11ರ ವರೆಗೆ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧಾಕಾಂಕ್ಷಿಗಳು ಎ. 15ರೊಳಗೆ ಹೆಸರನ್ನು ಕಾಲೇಜು ಮೂಲಕ ನೋಂದಾಯಿಸಬೇಕು. ಪ್ರತೀ ಭಾಷಾ ವಿಭಾಗದಲ್ಲಿ ಒಂದು ಕಾಲೇಜಿ ನಿಂದ ಒಬ್ಬರು ಮಾತ್ರ ನೋಂದಾಯಿಸಲು ಅವಕಾಶವಿದೆ ಎಂದರು.
Related Articles
ಪ್ರಬಂಧ ಸ್ಪರ್ಧೆಗೆ ಮೇಲಿನ ವಿಷಯಗಳಲ್ಲೇ 1,000ದಿಂದ 1,500 ಪದಗಳಲ್ಲಿ ಮನೆಯಿಂದಲೇ ಕಳುಹಿಸಬಹುದಾಗಿದೆ. ಹಸ್ತ ಲಿಖಿತ ಪ್ರಬಂಧ ಲೇಖನ ಸ್ಪರ್ಧೆಗೆ ಇಂಗ್ಲಿಷ್, ಕನ್ನಡ ಅಥವಾ ದೇವ ನಾಗರಿ ಲಿಪಿಗಳಲ್ಲಿ ಕೊಂಕಣಿ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಬರೆದು ಎ. 15ರೊಳಗೆ ತಲುಪಿಸಬೇಕು.
ಎರಡೂ ಸ್ಪರ್ಧೆಗಳಲ್ಲಿ ಪ್ರತೀ ಭಾಷಾ ವಿಭಾಗದಲ್ಲಿ 1,500 ರೂ. ಪ್ರಥಮ, 1,000 ರೂ. ದ್ವಿತೀಯ ಬಹುಮಾನ ನೀಡಲಾಗುವುದು. ಎ. 23ರಂದು 11.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಡಾ| ಟಿಎಂಎ ಪೈ ಅವರ ಪುತ್ರ, ಮಣಿಪಾಲದ ಡಾ| ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ ಟಿ. ಅಶೋಕ ಪೈ ಮುಖ್ಯ ಅತಿಥಿ ಯಾಗಿರುವರು. ಮಾಹೆ ವಿ.ವಿ.ಯ ಮಂಗಳೂರು ವಿಭಾಗದ ಸಹಕುಲ ಪತಿ ಡಾ| ದಿಲೀಪ್ ನಾಯಕ್, ಮಾಜಿ ಸಹ ಉಪ ಕುಲಪತಿ ಡಾ| ಎಂ.ವಿ. ಪ್ರಭು, ಕೆಎಂಸಿ ಮಂಗಳೂರಿನ ಉಪ ಪ್ರಾಂಶುಪಾಲೆ ಡಾ| ಶ್ರೀಕಲಾ ಬಾಳಿಗಾ, ಉಡುಪಿಯ ಡಾ| ರವೀಂದ್ರ ನಾಥ್ ಶ್ಯಾನುಭಾಗ್, ಆರ್‌ಬಿಐಯ ನಿವೃತ್ತ ಗವರ್ನರ್ ವಿಠಲದಾಸ್ ಲೀಲಾಧರ್, ಉದ್ಯಮಿ ಆನಂದ ಜಿ. ಪೈ ಭಾಗವಹಿಸಲಿದ್ದಾರೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಜsಚಿ gsb-sevasangh@gmail.com ಅಥವಾ//www.gsbsevasangh.org ಸಂಪರ್ಕಿಸಬಹುದು.
ಗೋಷ್ಠಿಯಲ್ಲಿ ಜಿಎಸ್‌ಬಿ ಸೇವಾ ಸಮಿತಿಯ ಕೋಶಾಧಿಕಾರಿ ಜಿ. ವಿಶ್ವನಾಥ ಭಟ್ಟ, ಉಪ ಕಾರ್ಯದರ್ಶಿ ಡಾ| ಎ. ರಮೇಶ ಪೈ, ಕಾರ್ಯಕ್ರಮ ಸಂಯೋಜಕರಾದ ವೆಂಕಟೇಶ ಎನ್. ಬಾಳಿಗಾ, ಸುಚಿತ್ರಾ ಆರ್. ಶೆಣೈ ಉಪಸ್ಥಿತರಿದ್ದರು.