Advertisement

ರಾಹುಲ್‌ ದ್ವೇಷದ ದಲ್ಲಾಳಿ: ಸಚಿವ ಗೋಯಲ್‌, ಇರಾನಿ ಟೀಕಾಸ್ತ್ರ

03:42 PM Jul 23, 2018 | Team Udayavani |

ಹೊಸದಿಲ್ಲಿ : ರಾಜಸ್ಥಾನದ ಅಳವಾರ್‌ನಲ್ಲಿ ಈಚೆಗೆ ಗೋ ಕಳ್ಳಸಾಗಣೆಗಾರನೆಂಬ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಚಚ್ಚಿ ಕೊಲ್ಲಲಾದ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇನ್ನಿಲ್ಲದ ರೀತಿಯಲ್ಲಿ  ವಾಕ್ಸಮರ ನಡೆಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌  ಅವರು “ದ್ವೇಷದ ದಲ್ಲಾಳಿ’ ಎಂದು ಕರೆದಿದ್ದಾರೆ. 

Advertisement

‘ರಾಜಸ್ಥಾನ ಸರಕಾರ ಗುಂಪು ಹಿಂಸೆಯ ತಪ್ಪುಗಾರರಿಗೆ ಕಠಿನ ಶಿಕ್ಷೆ ನೀಡುವುದಾಗಿ ಹೇಳಿ ಈಗಾಗಲೇ ಚುರುಕಿನ ತನಿಖೆಯನ್ನು ನಡೆಸುತ್ತಿದೆ. ಹಾಗಿದ್ದರೂ ರಾಹುಲ್‌ ಗಾಂಧಿ ಅವರು ಮೊಸಳೆ ಕಣ್ಣೀರು ಸುರಿಸಿ ಚುನಾವಣಾ ಲಾಭಕ್ಕಾಗಿ ಸಮಾಜವನ್ನು ಒಡೆಯಲು ಯತ್ನಿಸುತ್ತಿದ್ದಾರೆ’ ಎಂದು ಗೋಯಲ್‌ ಅವರು ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ. 

ಇದೇ ವೇಳೆ ಕೇಂದ್ರ ಸಚಿವೆಯಾಗಿರುವ ಬಿಜೆಪಿ ನಾಯಕಿ ಸ್ಮತಿ ಇರಾನಿ ಅವರು ಕೂಡ ತಮ್ಮ ಟ್ವಿಟರ್‌ ಖಾತೆಯಲ್ಲಿ “ರಾಹುಲ್‌ ಗಾಂಧಿ ಅವರು ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. 

“1984ರ ಸಿಕ್ಖ ವಿರೋಧಿ ಹಿಂಸೆಯಲ್ಲಿ ರಾಹುಲ್‌ ಗಾಂಧಿ ಕುಟುಂಬ ಆ ಘೋರ ಪ್ರಕರಣದ ನೇತೃತ್ವವನ್ನೇ ವಹಿಸಿತ್ತು. ಮಾತ್ರವಲ್ಲದೆ ಭಾಗಲ್ಪುರ ಮತ್ತು ನೆಲ್ಲೀ ಹಾಗೂ ಆ ಬಗೆಯ ಇತರ ಪ್ರಕರಣಗಳಲ್ಲಿ ಕೂಡ ಕಾಂಗ್ರೆಸ್‌ ಪಕ್ಷ  ಹಿಂಸೆಯ ರೂವಾರಿಯಾಗಿತ್ತು. ರಾಹುಲ್‌ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆಯುವ ಒಂದೇ ಒಂದು ಅವಕಾಶವನ್ನು ಕೂಡ ಬಿಟ್ಟುಕೊಡುತ್ತಿಲ್ಲ’ ಎಂದು ಇರಾನಿ ಟೀಕಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next