Advertisement

ಕ್ರೀಡೆಗಳಿಂದ ಮಾನಸಿಕ ಸದೃಢತೆ

11:43 AM Sep 11, 2017 | |

ಬೀದರ: ಕ್ರೀಡೆಗಳಿಂದ ಶಾರೀರಕ ಮತ್ತು ಮಾನಸಿಕ ಸದೃಢತೆ ಸಾಧ್ಯ ಎಂದು ಜಿಪಂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ ಹೇಳಿದರು.

Advertisement

ನಗರದ ಎನ್‌ಎಫ್‌ ಕಾಲೇಜು ಮೈದಾನದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಡಾ| ಬಿ.ಆರ್‌. ಅಂಬೇಡ್ಕರ ಮಹಾವಿದ್ಯಾಲಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. 

ವಿದ್ಯಾರ್ಥಿಗಳು ಸೋಲು-ಗೆಲುವು ಎನ್ನದೆ ಸಕ್ರಿಯವಾಗಿ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರ, ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.

ಕ್ರೀಡಾಜ್ಯೋತಿ ಸ್ವಾಗತಿಸಿ ಮಾತನಾಡಿದ ನಗರಸಭೆ ಉಪಾಧ್ಯಕ್ಷೆ ಶಾಲಿನಿ ಚಿಂತಾಮಣಿ, ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ವಿಜಯದ ಗುರಿ ಮುಟ್ಟಬೇಕು. ಜೀವನದ ಪ್ರತಿ ಹಂತದಲ್ಲಿ ಗುರಿ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಜ ಪಾಟಿಲ, ಕ್ರೀಡೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯವಿದೆ. ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಆರೋಗ್ಯವಂತ ಯುವಕರ ಪಾತ್ರ ಪ್ರಮುಖವಾಗಿದೆ. ನಿರ್ಣಾಯಕರು ನ್ಯಾಯಯುತವಾದ ನಿರ್ಣಯ ನೀಡುವ ಮನೋಭಾವದವರಾಗಿದ್ದು, ಕ್ರೀಡಾಪಟುಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ರೇ. ಎಂ.ಪಿ ಜೈಪಾಲ್‌ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಯಲ್ಲಿ ಆಸಕ್ತಿ ತೋರಿಸುವಂತಹ ಮನೋಭಾವವುಳ್ಳವರಾಗಿರಬೇಕು. ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು. ನಗರಸಭೆ ಸದಸ್ಯೆ ಗ್ರೇಸ್‌ ಪದ್ಮಿಣಿ ಕ್ರೀಡಾ ಕೂಟದ ಘೋಷಣೆ ಮಾಡಿದರು.

ಕಾಲೇಜಿನ ಪ್ರಾಚಾರ್ಯ ಬಿ.ಬಿ. ಪೊಲೀಸ್‌ಪಾಟೀಲ, ಪ್ರೊ| ಉಮಕಾಂತ ಮೀಸೆ, ಡಾ| ಅಬ್ದುಲ್‌ ಖಲೀಲ್‌, ಸುನೀಲ ಅರಿಕೇರೆ, ಹಣಮಂತರಾವ ಮೈಲಾರೆ, ರಾಜಶೇಖರ ಮಂಗಲಗಿ, ವಿಠ್ಠಲದಾಸ ಪ್ಯಾಗೆ, ಶಿವಕುಮಾರ ರಾಜೋಳೆ, ವಿಜಯಕುಮಾರ, ಬಸವರಾಜ ಸ್ವಾಮಿ, ಎ.ಎಂ. ಹಳ್ಳಿಖೇಡೆ, ವೀರಣ್ಣ ಕಮಲಾಪುರಕರ್‌, ರಮೇಶ ಪಾಟೀಲ, ಶ್ರೀಮಂತ ಹಲಮಂಡಗೆ, ಸೂರ್ಯಕಾಂತ ಸಿಂಗಾರೆ, ಮನೋಜಕುಮಾರ ಕೀರ್ತಿಕರ, ರೇಖಾ ಕಾಂಗೆ, ಐ.ಡಿ. ಲೋಣಿ, ಸತೀಶ ಚಾಲಕ, ಈಶ್ವರ ಗೋಖಲೆ, ಶಂಕರ ಕೇಸರಿ, ಅಶೋಕ ಅಂಬಾಟೆ, ಶೋಭಾ ಆರ್ಯ, ಬಸಮ್ಮ ಸ್ವಾಮಿ, ದಶರಥ, ಲಕ್ಷ್ಮಣ ಮತ್ತು ಆರ್‌.ಪಿ. ಪಾಟೀಲ, ಸಂಜಯ ಜೇಸ್ಸಿ, ಕಾಶಿನಾಥ ಗಾಂವಕರ್‌, ಸುವಿ.

Advertisement

Udayavani is now on Telegram. Click here to join our channel and stay updated with the latest news.

Next