Advertisement
ಎನ್‌ಎಸ್‌ವಿ ಚಿಕಿತ್ಸೆ ಮಾಡಿಸಿಕೊಂಡರೆ ಲೈಂಗಿಕ ಹಾಗೂ ದುಡಿಯುವ ಶಕ್ತಿ ಕುಂದುತ್ತದೆ ಎಂಬ ಅಪನಂಬಿಕೆಗೆ ಕಟ್ಟು ಬಿದ್ದಿರುವ ಪುರುಷರು ಎನ್‌ಎಸ್‌ವಿಗೆ ಹಿಂದೇಟು ಹಾಕುತ್ತಿದ್ದಾರೆ. ಎನ್‌ಎಸ್‌ವಿ ವಿಚಾರ ಎತ್ತಿದರೆ ಪುರುಷರು ಮಾರು ದೂರ ಓಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ಸ್ವಯಂ ಪ್ರೇರಣೆಯಿಂದ ಸಂತಾನ ಹರಣ ಚಿಕಿತ್ಸೆಗೆ ಒಳಪಡುತ್ತಾರೆ. ಮಹಿಳೆಯರಲ್ಲಿ ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿದೆ. ಆದರೆ, ಪುರುಷರು ಇನ್ನೂ ಮೂಢನಂಬಿಕೆಗೆ ಜೋತು ಬಿದ್ದಿದ್ದು,ಕುಟುಂಬ ಯೋಜನೆಯಲ್ಲಿ ಪುರುಷರು ಮಹಿಳೆಯರಷ್ಟೇ ಪ್ರಧಾನ ಪಾತ್ರ ವಹಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಎನ್‌ಎಸ್‌ವಿ (ನೋ ಸ್ಕಾಲ್‌ಪೆಲ್ ವ್ಯಾಸೆಕ್ಟಮಿ) ಅನುಷ್ಠಾನದಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲಿ ತುಂಬಾ ಹಿಂದಿದೆ. ಪ್ರತಿ ತಿಂಗಳು ಜಿಲ್ಲೆಯಲ್ಲಿ ಒಂದರಿಂದ ಒಂದೂ ವರೆ ಸಾವಿರದಷ್ಟು ಮಹಿಳೆಯರು ಸಂತಾನ ಹರಣ ಚಿಕಿತ್ಸೆಗೆ ಒಳಪಡುತ್ತಿ ದ್ದಾರೆ. ಆದರೆ, ಈ ಪೈಕಿ ಪುರುಷರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.
Related Articles
Advertisement
ಹಿಂದೇಟು ಹಾಕಲು ಕಾರಣವೇನು ? : ಎನ್‌ಎಸ್‌ವಿಯಿಂದಲೈಂಗಿಕ ಹಾಗೂದುಡಿಯುವ ಶಕ್ತಿ ಕುಂದುತ್ತದೆ ಎಂಬತಪ್ಪು ತಿಳಿವಳಿಕೆ ಸಾಕಷ್ಟು ಮಂದಿಯಲ್ಲಿದೆ. ಚಿಕಿತ್ಸೆ ಮಾಡಿಸಿಕೊಂಡ ನೂರಾರು ಮಂದಿಯಲ್ಲಿ ಈ ರೀತಿಯ ಯಾವುದೇ ಲಕ್ಷಣಗಳು ಇದುವರೆಗೆ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಿದರೂಸಾಕಷ್ಟು ಮಂದಿ ನಿರಾಸಕ್ತಿ ತೋರಲು ಮತ್ತೂಂದು ಪ್ರಮುಖ ಕಾರಣ, ಅದೆಲ್ಲ ಮಹಿಳೆಯರಿಗೆ ಬಿಟ್ಟವಿಚಾರ ಎಂಬತಾತ್ಸರ ಭಾವನೆಯೂ ಇದೆ. ಈ ಭಾವನೆ ದೂರವಾಗಬೇಕಾಗಿದೆ.
ಎನ್‌ಎಸ್‌ವಿ ಚಿಕಿತ್ಸೆಕುರಿತು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಜನರಿಗೆ ಚಿಕಿತ್ಸಾ ಪದ್ಧತಿ ಕುರಿತು ಸಂಪೂರ್ಣ ಮಾಹಿತಿ ಇದ್ದರೂ ಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ. ಈ ವರ್ಷ ಇಲ್ಲಿಯವರೆಗೆ ಇಬ್ಬರು ಮಾತ್ರ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಇಂದಿನಿಂದ ಈ ಬಗ್ಗೆ ಜಾಗೃತಿ ಮೂಡಿಸಲು ಸಪ್ತಾಹ ಹಮ್ಮಿಕೊಳ್ಳಲಾಗಿದೆ. –ಡಾ.ಪಿ.ರವಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ.
– ಸತೀಶ್ ದೇಪುರ