Advertisement

ಸ್ಟಾರ್‌ ಸಿಂಗರ್ ಧ್ವನಿಯಲ್ಲಿ ಮೆಲೋಡಿ ಸಾಂಗ್ಸ್‌

04:25 PM Feb 19, 2023 | Team Udayavani |

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಮೆಲೋಡಿ ಡ್ರಾಮ’ ಸಿನಿಮಾದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿದೆ.

Advertisement

ಕಿರಣ್‌ ರವೀಂದ್ರನಾಥ್‌ ಸಂಗೀತ ಸಂಯೋಜನೆಯ “ಮೆಲೋಡಿ ಡ್ರಾಮ’ ಸಿನಿಮಾದಲ್ಲಿ ಎಂಟು ಹಾಡುಗಳಿದ್ದು, ಸೋನು ನಿಗಮ್, ಕೈಲಾಶ್‌ ಖೇರ್‌, ಪಲಾಕ್‌ ಮುಚ್ಚಲ್‌ ಮೊದಲಾದವರು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಜಯಂತ್‌ ಕಾಯ್ಕಿಣಿ, ಡಾ. ವಿ. ನಾಗೇಂದ್ರ ಪ್ರಸಾದ್‌, ಹೃದಯ ಶಿವ, ಧನಂಜಯ್‌ ರಂಜನ್‌ ಗೀತಗಳಿಗೆ ಸಾಹಿತ್ಯ ರಚಿಸಿದ್ದಾರೆ. ‌

ಸತ್ಯ, ಸುಪ್ರಿತಾ ಸತ್ಯನಾರಾಯಣ್‌ ಜೋಡಿಯಾಗಿ ಅಭಿನಯಿಸಿರುವ “ಮೆಲೋಡಿ ಡ್ರಾಮಾ’ ಸಿನಿಮಾದಲ್ಲಿ ರಂಗಾಯಣ ರಘು, ಅನು ಪ್ರಭಾಕರ್‌, ರಾಜೇಶ್‌ ನಂಟರಂಗ, ಬಲರಾಜವಾಡಿ, ಲಕ್ಷ್ಮೀ ಸಿದ್ದಯ್ಯ, ಅಶ್ವಿ‌ನ್‌ ರಾವ್‌ ಪಲ್ಲಕ್ಕಿ, ಅಶ್ವಿ‌ನ್‌ ಹಾಸನ್‌, ರಂಜನ್‌ ಸನತ್‌, ವಿನೋದ್‌ ಗೊಬ್ಬರ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಿನಿಮಾದಲ್ಲಿ ನಟ ಚೇತನ್‌ ಚಂದ್ರ ಕೂಡ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹೆಸರೇ ಹೇಳುವಂತೆ, “ಮೆಲೋಡಿ ಡ್ರಾಮಾ’ ಪ್ರೀತಿ ಒಂದು ಸುಂದರ ಅನುಭವ. ನಂಬಿಕೆ ಅದರ ಆಧಾರ. ಇವೆರಡರ ನಡುವಿನ ಪಯಣದಲ್ಲಿ ಭಾವ-ಭಾವನೆಗಳ ತೊಡಲಾಟವನ್ನು ವ್ಯಕ್ತಪಡಿಸುವ ಕಥಾಹಂದರ ಸಿನಿಮಾದಲ್ಲಿದೆ ಎಂಬುದು ಚಿತ್ರದ ಬಗ್ಗೆ ಚಿತ್ರತಂಡದ ಮಾತು.

“ಪ್ರೈಮ್‌ ಸ್ಟಾರ್‌ ಸ್ಟುಡಿಯೊ’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಮೆಲೋಡಿ ಡ್ರಾಮಾ’ ಚಿತ್ರಕ್ಕೆ ಮಂಜು ಕಾರ್ತಿಕ್‌ ನಿರ್ದೇಶನವಿದೆ. ಬೆಂಗಳೂರು, ಮಂಡ್ಯ, ಮೈಸೂರು, ಕುಶಾಲನಗರ, ಮಡಿಕೇರಿ, ಶಿವಮೊಗ್ಗ, ಮಂಗಳೂರು, ಕುಂದಾಪುರ, ವಿಜಯಪುರ ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಮನು ಡಿ. ಬಿ ಹಳ್ಳಿ ಛಾಯಾಗ್ರಹಣ, ಮುನಿರಾಜ್‌ ಸಂಕಲನವಿದೆ.

Advertisement

ಸದ್ಯ ಸೆನ್ಸಾರ್‌ ಮುಂದಿರುವ “ಮೆಲೋಡಿ ಡ್ರಾಮ’ ಸಿನಿಮಾವನ್ನು ಏಪ್ರಿಲ್‌ ತಿಂಗಳಿನಲ್ಲಿ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

 

 

Advertisement

Udayavani is now on Telegram. Click here to join our channel and stay updated with the latest news.

Next