ಬಾಗಲಕೋಟೆ: ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಶಾಸಕ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ. ಮೇಟಿ ಬಾಗವಾನ ಸಮುದಾಯದವರಲ್ಲಿ ಮತಯಾಚನೆ ನಡೆಸಿದರು.
ಬಾಗವಾನ ಸಮುದಾಯದವರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಅಧಿಕಾರಾವಧಿಯಲ್ಲಿ ಸಮಾಜದ ಅನೇಕ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟಿದ್ದೇನೆ. ಅಲ್ಲದೇ ವ್ಯಾಪಾರಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿರುವೆ ಎಂದರು.
ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಲ್ಪಸಂಖ್ಯಾತರ ಅಭ್ಯುದಯಕ್ಕೆ, ರೈತರ ಸಾಲ ಮನ್ನಾ ಮಾಡುವ ಮೂಲಕ ರೈತಪರ, ಜನಪರ ಸರಕಾರವಾಗಿದೆ ಎಂದರು.
ಮಾಜಿ ಸಚಿವರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಸೌಮ್ಯ ರಾಜಕಾರಣಿಯಾದ ಮೇಟಿ ಅವರನ್ನು ಮತ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಬಲಪಡಿಸುವ ಮೂಲಕ ರಾಜ್ಯದಲ್ಲಿ ಮತ್ತೂಂದು ಅವಧಿಗೆ ಕಾಂಗ್ರೆಸ್ ಸರಕಾರವನ್ನು ಅ ಧಿಕಾರಕ್ಕೆ ತರಬೇಕೆಂದು ಮನವಿ ಮಾಡಿಕೊಂಡರು.
ನವದೆಹಲಿಯಿಂದ ಆಗಮಿಸಿದ್ದ ಕಾಂಗ್ರೆಸ್ ಮುಖಂಡರಾದ ತಿವಾರಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಶಿವಾನಂದ ಅಬ್ದಲಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಡಿ.ಮೊಕಾಶಿ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಎಂ.ಎಂ.ನಬಿವಾಲೆ, ಅಂಜುಮನ್ ಸಂಸ್ಥೆಯ ನಿರ್ದೇಶಕ ಬಾಗವಾನ ಸಮಾಜದ ಹಿರಿಯರಾದ ಎಂ.ಎಂ.ಬಾಗವಾನ ಹಾಜರಿದ್ದರು.
ಮಹ್ಮದಗೌಸ ತಾಳಿಕೋಟಿ ಅವರ ಕುರ್-ಆನ್ ಪಠಣದೊಂದಿಗೆ ಆರಂಭಗೊಂಡಿತು. ಸಿಕಂದರ ಅಥಣಿ ನಿರೂಪಿಸಿದರು. ಬಾಗವಾನ ಸಮಾಜದ ಯುವಕರಾದ ಕಾಯಿಪಲ್ಲೆ ವರ್ತಕರ ಸಂಘದ ಎಂ.ಡಿ.ಬಾಗವಾನ, ಉಸ್ಮಾನ ಬೀಳಗಿ, ಮಕ್ತುಮ ಬಾಗವಾನ, ಖ್ವಾಜಾ ಬಾಗವಾನ, ಸೈಯದ ಚೌಧರಿ, ಡೋಂಗ್ರಿ ಸೌದಾಗರ, ಜುಬೇರ ಬಾಗವಾನ ಸೇರ್ಪಡೆಯಾದರು.