Advertisement
ಅಂದು ತಬ್ಬಿಕೊಳ್ಳುವ ವೇಳೆಯಲ್ಲೇ ಪ್ರತಿಭಟಿಸುವುದು ಬಿಟ್ಟು, ತಮ್ಮ ವ್ಯವಹಾರಗಳನ್ನು ಮುಗಿಸಿದ ನಂತರ ಈಗ ಮಾತನಾಡುವುದು ಎಷ್ಟು ಸರಿ? ಇದು “ಮಿ ಟೂ’ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ತಾನು ಪ್ರಚಾರ ತೆಗೆದುಕೊಂಡು, ಬೇರೆಯವರ ಹೆಸರಿಗೆ ಮಸಿಬಳಿಯುವ ಕೆಲಸ ಅಲ್ಲದೆ ಮತ್ತೇ..’ ಹೀಗೆ ಮಾತಿನಲ್ಲಿ ಕುಟುಕಿದವರು “ಮಠ’ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್.
Related Articles
Advertisement
ಸಂಗೀತಾ ಭಟ್ ಆರೋಪಕ್ಕೂ ನನಗೂ ಸಂಬಂಧವಿಲ್ಲ: ಇನ್ನು ನಟಿ ಸಂಗೀತಾ ಭಟ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಗುರುಪ್ರಸಾದ್, “ಆಕೆ ನೇರವಾಗಿ ನನ್ನ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಹೀಗಾಗಿ ಆಕೆಯ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ.
ಎರಡನೇ ಸಲ ಚಿತ್ರದ ಶೂಟಿಂಗ್‌ನಲ್ಲಿ ಬೆನ್ನನ್ನು ತೋರಿಸುವ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ನನ್ನ ಹೆಂಡತಿ, ಮಕ್ಕಳು ಎಲ್ಲರೂ ಸೆಟ್‌ನಲ್ಲಿ ಇದ್ದರು. ಆಕೆಗೆ ಯಾವುದೇ ಮುಜುಗರವಾಗದ ರೀತಿಯಲ್ಲಿ ಆ ದೃಶ್ಯವನ್ನು ಚಿತ್ರೀಕರಿಸಿದ್ದೇನೆ. ಹಾಗೇನಾದರೂ ಇದ್ದರೆ ಮುಂದೆ ಬಂದು ಹೇಳಲಿ, ನಾನು ಅದನ್ನು ಸಾಬೀತುಪಡಿಸುತ್ತೇನೆ. ಸತ್ಯ ಯಾವುದು ಅಂತ ಜಗತ್ತಿಗೆ ಗೊತ್ತಾಗುತ್ತದೆ’ ಎಂದು ಗುರುಪ್ರಸಾದ್ ಸವಾಲೆಸೆದರು.
“ಮಿ ಟೂ’ ಬಗ್ಗೆ ಸಿನಿಮಾ ಮಾಡ್ತಾರಂತೆ ಗುರುಪ್ರಸಾದ್: ಸದ್ಯ ಕನ್ನಡ ಚಿತ್ರರಂಗದಲ್ಲಿ ಸಂಚಲನವನ್ನೆ ಮೂಡಿಸುತ್ತಿರುವ “ಮಿ ಟೂ’ ಕುರಿತು ಹೊಸ ಚಿತ್ರ ಮಾಡುವುದಾಗಿ ಗುರುಪ್ರಸಾದ್ ಘೋಷಿಸಿದ್ದಾರೆ. “ಮೂರು-ನಾಲ್ಕು ತಿಂಗಳಿನಿಂದ ಈ ಚರ್ಚೆಗಳನ್ನು ಗಮನಿಸುತ್ತ ಬಂದಿದ್ದೇನೆ.
ಇದನ್ನು ಸಿನಿಮಾ ಮಾಡಲು ಒಂದು ಎಳೆ ಸಿಕ್ಕಿದೆ. ಅದನ್ನೆ ಇಟ್ಟುಕೊಂಡು ಖಂಡಿತ ಇದನ್ನು ಚಿತ್ರ ಮಾಡಿ ಜನರ ಮುಂದೆ ತರುತ್ತೇನೆ. “ಮಿ ಟೂ’ ಹೆಸರಿನಲ್ಲಿ ಏನೇನು ನಡೆಯುತ್ತಿದೆ, ಏನೇನು ಮಾಡುತ್ತಾರೆ ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಡುತ್ತೇನೆ’ ಎಂದಿದ್ದಾರೆ ಗುರು ಪ್ರಸಾದ್. ಅಂದಹಾಗೆ, ಈ ಚಿತ್ರದಲ್ಲಿ ಗುರುಪ್ರಸಾದ್ ಅವರೆ ನಾಯಕನಟನಾಗಿ ನಟಿಸಲಿದ್ದಾರಂತೆ!
* ತಬ್ಬಿಕೊಳ್ಳುವಾಗಲೇ ಪ್ರತಿಭಟಿಸಬೇಕಿತ್ತು.* ಅವಕಾಶವಿಲ್ಲದೇ ಖಾಲಿ ಕುಳಿತಾಗ ಆರೋಪ ಮಾಡೋದು ಕಲಾವಿದ ವೃತ್ತಿಗೆ ಅಪಮಾನ.
* ಮಿ ಟೂ ಬಗ್ಗೆ ಸಿನಿಮಾ ಮಾಡಿ ನಟಿಸುತ್ತೇನೆ.