ಮಂಗಳೂರು: ಅದ್ವೈತ್ ಜೆಸಿಬಿ 2023ರಲ್ಲಿ 795 ಜೆಸಿಬಿ ಯಂತ್ರಗಳ ಅತ್ಯಧಿಕ ಮಾರಾಟ ಸಾಧಿಸಿದ ಸಂದರ್ಭದಲ್ಲಿ ಮತ್ತು ಅದರ 13ನೇ ವಾರ್ಷಿಕೋತ್ಸವ ಆಚರಿಸುವ ಸಂದರ್ಭ ದಲ್ಲಿ ಜೆಸಿಬಿ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೀಪಕ್ ಶೆಟ್ಟಿ ಅವರು ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಜೆಸಿಬಿ ಇಂಡಿಯಾದ ಡೀಲರ್ ಅದ್ವೈತ್ ಜೆಸಿಬಿಗೆ ಭೇಟಿ ನೀಡಿದರು.
ಅವರು ಮಾತನಾಡಿ, ಭಾರತದಲ್ಲಿ ಜೆಸಿಬಿ ಪ್ರಾರಂಭವಾದಾಗಿನಿಂದ ಕಳೆದ 44 ವರ್ಷಗಳಲ್ಲಿ 2023 ಅತ್ಯುತ್ತಮ ವರ್ಷವಾಗಿದೆ. ಭಾರತದಲ್ಲಿ ತಯಾರಾದ 18,000 ಯಂತ್ರಗಳನ್ನು ಸುಮಾರು 130 ದೇಶಗಳಿಗೆ ರಫ್ತು ಮಾಡಲಾಗಿದೆ. 2024ರಲ್ಲಿ ಜೆಸಿಬಿಯಿಂದ ಸುಮಾರು 30 ಹೊಸ ಮಾದರಿಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ ಎಂದರು.
ಅದ್ವೈತ್ ಜೆಸಿಬಿಯ ಎಂಡಿ ಡಾ| ಎಸ್.ವಿ.ಎಸ್.ಎಸ್. ಗುಪ್ತ ಮಾತನಾಡಿ, ಅದ್ವೈತ್ ಜೆಸಿಬಿ ಪ್ರತೀ ಹಂತದಲ್ಲೂ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ಶ್ರಮಿಸುತ್ತದೆ ಎಂದರು.
ದ.ಕ., ಉಡುಪಿ ಕ್ವಾರಿ ಮಾಲಕರ ಸಂಘದ ಅಧ್ಯಕ್ಷ ಮನೋಜ್ ಶೆಟ್ಟಿ ಹಾಗೂ ಜೆಸಿಬಿ ಇಂಡಿಯಾ ಲಿಮಿಟೆಡ್ ಮತ್ತು ಅದ್ವೈತ್ ಜೆಸಿಬಿಯ ಹಿರಿಯ ಗಣ್ಯರು ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಅದ್ವೈತ್ ಜೆಸಿಬಿಯು ಮಂಗಳೂರು, ಕುಂದಾಪುರ, ಕುಮಟಾ, ಹಳಿಯಾಳ, ಯಲ್ಲಾಪುರ, ಶಿವಮೊಗ್ಗ, ಕಡೂರು, ಹಾಸನ, ಸಿಆರ್ ಪಟ್ಣ, ಮೈಸೂರು, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆ ಗಳಲ್ಲಿ ಶಾಖೆಗಳನ್ನು ಹೊಂದಿದೆ.